ರಾಷ್ಟ್ರ ಶಕ್ತಿ ಕೇಂದ್ರ

ಯುವದಿನ~ 2011

Posted in Uncategorized by yuvashakti on ಜನವರಿ 9, 2011

This slideshow requires JavaScript.

ಸ್ವಾಮಿ ವಿವೇಕಾನಂದ ಜಯಂತಿ (ಜನವರಿ 12)….

ಸೆಪ್ಟೆಂಬರ್ 10ರಿಂದಾಚೆ

Posted in ಕಾರ್ಯಕ್ರ್ತಮಗಳು by yuvashakti on ಸೆಪ್ಟೆಂಬರ್ 8, 2010

ಸೆಪ್ಟೆಂಬರ್ 11- ಅಳಿಕೆಯಲ್ಲಿ ಕಾರ್ಯಕ್ರಮ

ಸೆಪ್ಟೆಂಬರ್ 12- ಮಂಗಳೂರಿನಲ್ಲಿ ಹರಟೆ

ಸೆಪ್ಟೆಂಬರ್ 13- ಕಲ್ಲಡ್ಕ ಮತ್ತು ಸುಳ್ಯ

ಸೆಪ್ಟೆಂಬರ್ 14- ಶೃಂಗೇರಿಯಲ್ಲಿ ಜಾಗೋಭಾರತ್

ಸೆಪ್ಟೆಂಬರ್ 15- ಕಳಸದಲ್ಲಿ ಗಣೇಶೋತ್ಸವ

ಸೆಪ್ಟೆಂಬರ್ 18- ಚಿಕ್ಕಲ್ಲಸಂದ್ರದಲ್ಲಿ ಟೀಚರ್ಸ್ ಮೀಟ್

ಸೆಪ್ಟೆಂಬರ್ 19- ಬನ್ನೇರುಘಟ್ಟದಲ್ಲಿ ಟೀಚರ್ಸ್ ಮೀಟ್, ಸಂಜೆ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಬಸವನ ಗುಡಿಯಲ್ಲಿ ಜಾಗೋಭಾರತ್

ಸೆಪ್ಟೆಂಬರ್ 20- ಶಿವಮೊಗ್ಗದಲ್ಲಿ ‘ಇಂಜಿನಿಯರ್‌ಗಳ ದಿನ’

ಸೆಪ್ಟೆಂಬರ್ 22- ಕನಕಪುರ ಟೀಚರ್ಸ್ ಮೀಟ್

ಸೆಪ್ಟೆಂಬರ್ 23- ವಿಜಯಪುರ ಜಾಗೋಭಾರತ್

ಸೆಪ್ಟೆಂಬರ್ 27ರಿಂದ 30- ಗುಲ್ಬರ್ಗಾ ಪ್ರವಾಸ

ಅಕ್ಟೋಬರ್ 2 ಮತ್ತು 3- ಹಣತೆ

ಅಕ್ಟೋಬರ್ 9- ಬೆಳ್ತಂಗಡಿಯಲ್ಲಿ ಜಾಗೋಭಾರತ್

ಅಕ್ಟೋಬರ್ 13- ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮ

ಅಕ್ಟೋಬರ್ 15- ಬ್ರಹ್ಮಾವರದಲ್ಲಿ ಜಾಗೋಭಾರತ್

ಅಕ್ಟೋಬರ್ 27-ತಿಪಟೂರು ಜಾಗೋಭಾರತ್

ಅಕ್ಟೋಬರ್ 28- ತಿಪಟೂರು ಹರಟೆ

My Programs During August and September

Posted in Uncategorized by yuvashakti on ಆಗಷ್ಟ್ 21, 2010

August 23 Tour to kolkatta
29 Tour to Cochin
September 01 Upanyasa at Gokarna ‘ krishna and govu ‘
02 Sringeri mosaru kudike Programme
04 Jago Bharath at Davanagere by Evening 5
05 upanyasa at Ramkrishna vidyashala 11 am
Jago bharath at Keshava shilpa, Bangalore 5.30 pm
06 Teachers meet at Mahila mandali, Bangalore 11 am
07 Old boys meet at Ramakrishna Vidyarthi Mandiram
08 Youth meet- Bhavatarini Ashrama, Bangalore
11 Students meet Alike Satya sayi institute
12 Harate at Mangalore Sangha niketana
13 Students meet at Kalladka Sri Ram vidyalaya, Mangalore
14 Jago Bharath at Sringeri Chauti Pendal
15 Chauti Programme at Kalasa

ಸಿಂಹಾವಲೋಕನ- ಹೋರಾಟದ ಹಾದಿಯ ಪುನರವಲೋಕನ

Posted in Uncategorized by yuvashakti on ಆಗಷ್ಟ್ 14, 2010
ಸಿಂಹ ಅಂದರೆ, ಅಧಿಕಾರವನ್ನು ಧ್ವನಿಸುವ ಪದ. ಮೃಗರಾಜ ಸಿಂಹ ತಾನು ನಡೆದು ಬಂದ ಹಾದಿಯನ್ನು ಆಗಾಗ ತಿರುಗಿ ನೋಡುತ್ತ ಮುಂದಿನ ನಡೆಯನ್ನು ನಿರ್ಧರಿಸುತ್ತದೆ, ಜಾಗರೂಕವಾಗಿ ಹೆಜ್ಜೆ ಇಡುತ್ತದೆ. ಪ್ರತಿಯೊಂದು ಆಡಳಿತ ಯಂತ್ರವೂ ಅಳವಡಿಸಿಕೊಳ್ಳಬೇಕಾದ ಸೂತ್ರವಿದು. ದುರ್ದೈವವಶಾತ್, ಭಾರತ ಈ ನಿಟ್ಟಿನಲ್ಲಿ ಹೆಜ್ಜೆ ತಪ್ಪಿದೆ. ತಾನು ನಡೆದುಬಂದ ದಾರಿಯ ಪರಿಚಯವೇ ಮುಂದಿನ ಭಾರತಕ್ಕೆ ಇಲ್ಲವಾಗಲಿದೆ. ಬ್ರಿಟನ್‌ಪ್ರೇರಿತ ಜಾಳು ಇತಿಹಾಸವನ್ನೆ ಬಾಯಿಪಾಠ ಮಾಡಿ ಬೆಳೆದ ಇಂದಿನ ತಲೆಮಾರು, ಮುಂದಿನ ಪೀಳಿಗೆಗೂ ಅದನ್ನೆ ವರ್ಗಾಯಿಸಲಿದೆ. ಕಾಲ ಮಿಂಚಿಲ್ಲ. ನಮ್ಮ ನಿಜ ಇತಿಹಾಸವನ್ನು ಮಕ್ಕಳಿಗೆ ಮನದಟ್ಟು ಮಾಡಿಸಿ, ಆತ್ಮಾಭಿಮಾನವನ್ನು ಎಚ್ಚರಿಸಲು ಖಂಡಿತಾ ಅವಕಾಶಗಳಿವೆ. ಆದರೆ, ಭಾರತೀಯರಿಗೆ ಆಂಗ್ಲರು ಆತ್ಮವಿಸ್ಮೃತಿಯ ವಿಷ ಪ್ರಾಶನ ಮಾಡಿಸಿದ್ದಾದರೂ ಏತಕ್ಕೆ? ಭಾರತೀಯರು ಇದಕ್ಕೆ ಪಕ್ಕಾಗಿದ್ದು ಹೇಗೆ? ಪರಿಣಾಮವೇನಾಯ್ತು? ಇಲ್ಲಿದೆ ಒಂದು ಕಿರುನೋಟ….
– ಚಕ್ರವರ್ತಿ ಸೂಲಿಬೆಲೆ
’ನಿಮ್ಮ ತಂದೆ ದೇವರಂಥವರು’
’ನಿಮ್ಮ ತಾತನನ್ನು ಕಂಡರೆ ಊರಿಗೆಲ್ಲ ಗೌರವವಿತ್ತು’
’ನಿಮ್ಮ ಅಜ್ಜಿ ಸಾಕ್ಷಾತ್ ದೇವತೆಯೇ’
’ಸಾವಿರಾರು ಜನರಿಗೆ ಅನ್ನಕೊಟ್ಟ ಮನೆ ನಿಮ್ಮದು’
ಸತ್ಯ ಹೇಳಿ. ಹೀಗೆಲ್ಲ ಯಾರಾದರೂ ನಿಮ್ಮ ಬಳಿ ಬಂದು ಹೇಳಿದರೆ ಖುಷಿಯಾಗುತ್ತೋ ಇಲ್ವೋ? ಖಂಡಿತ ಖುಷಿಯಾಗುತ್ತೆ. ನಮಗೇ ಅರಿವಿಲ್ಲದಂತೆ ಸ್ವಾಭಿಮಾನದ ಝರಿಯೊಂದು ನಮ್ಮೊಳಗೆ ಉಕ್ಕಿಹರಿಯತೊಡಗುತ್ತೆ.
ದೌರ್ಭಾಗ್ಯದ ಸಂಗತಿ ಏನು ಗೊತ್ತಾ? ಕಳೆದ ಮೂರ್ನಾಲ್ಕು ದಶಕಗಳಿಂದ ಜಗತ್ತು ನಮ್ಮ ಬಗ್ಗೆ ಇದೇ ಮಾತನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ನಾವು ಮಾತ್ರ ಆಕಾಶವೇ ತಲೆಮೇಲೆ ಕಳಚಿಬಿದ್ದಂತೆ ಕುಳಿತುಬಿಟ್ಟಿದ್ದೇವೆ. ಅಲ್ಲದೇ ಮತ್ತೇನು?
’ಭಾರತದ ಇತಿಹಾಸ ಹತ್ತು ಸಾವಿರ ವರ್ಷಕ್ಕೂ ಹಳೆಯದು’
’ಆರ್ಯರು ಹೊರಗಿನವರಲ್ಲ, ಭಾರತೀಯರೇ’
’ಸರಸ್ವತಿ ನದಿ ಇಲ್ಲಿ ಹರಿದಿದ್ದು ನಿಜ’
’ಅತ್ಯಂತ ಪ್ರಾಚೀನ ಕಾಲದಲ್ಲಿಯೇ ಅತ್ಯಂತ ಮಹತ್ವದ ಸ್ಥಾನದಲ್ಲಿ ಕುಳಿತಿದ್ದ ದೇಶ ನಿಮ್ಮದು’
ಎಂದೆಲ್ಲ ಜಗತ್ತಿನ ವಿಜ್ಞಾನಿಗಳು, ಇತಿಹಾಸಕಾರರು ಹೇಳುತ್ತಿದ್ದರೆ ನಮ್ಮಲ್ಲಿನ ಕೆಲವು ತಥಾಕಥಿತ ಬುದ್ಧಿಜೀವಿಗಳು ಮಾತ್ರ ಇದನ್ನು ಧಿಕ್ಕರಿಸುತ್ತಾ, ಶಿಕ್ಷಣಕ್ರಮದಲ್ಲಾಗಲೀ ಚಿಂತನಕ್ರಮದಲ್ಲಾಗಲೀ ಈ ವಿಷಯ ಹರಿದಾಡದಂತೆ ನಿರಂತರ ಪ್ರಯತ್ನಶೀಲರಾಗಿದ್ದಾರೆ.
ಸ್ವಾತಂತ್ರ್ಯ ಬಂದ ಕೆಲವೇ ದಶಕಗಳಲ್ಲಿ ಈ ಪ್ರಯತ್ನಗಳು ಮುಗಿಲು ಮುಟ್ಟಿದವು. ಭಾರತೀಯ ದೃಷ್ಟಿಕೋನದಿಂದ ಭಾರತವನ್ನು ಅಧ್ಯಯನ ಮಾಡಿದ ಕೋನ್ರಾಡ್ ಎಲ್ಸ್, ಈ ಪ್ರಯತ್ನವನ್ನು ‘ನೆಗೇಶನಿಸಮ್’ ಎಂದಿದ್ದಾರೆ. ಇತಿಹಾಸದ ಘಟನಾವಳಿಗಳನ್ನು ಧಿಕ್ಕರಿಸುವ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ತಿರುಚುವ ಇತಿಹಾಸಕಾರರ ರೀತಿಗೆ ಅವರು ಕೊಟ್ಟ ಹೆಸರಿದು. ೧೯೨೦ರಿಂದಲೇ ಭಾರತದಲ್ಲಿ ಈ ರೀತಿಯ ತಿರುಚುವಿಕೆ ಶುರುವಾಯ್ತು.*೧ ಎಂಬುದು ಅವರ ಅಭಿiತ.
ಸುಳ್ಳಿನ ಕಂತೆ
ಈ ದೇಶವನ್ನು ಶಾಶ್ವತ ಗುಲಾಮೀತನಕ್ಕೆ ತಳ್ಳಬೇಕೆಂಬುದು ಬ್ರಿಟಿಷರ ಹುನ್ನಾರವಾಗಿತ್ತು. ಅದಕ್ಕಾಗಿ ಯಾವ ಬಗೆಯ ಪ್ರಯತ್ನವನ್ನೂ ಮಾಡದೆ ಉಳಿಸಲಿಲ್ಲ. ಮುಖ್ಯವಾಗಿ ಅವರು ನಾಲ್ಕಂಶಗಳ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದರು.
೧. ಭಾರತದ ಪ್ರಮುಖ ಮತ- ಪಂಥಗಳಲ್ಲಿ ವೈಮನಸ್ಸನ್ನು ಹುಟ್ಟುಹಾಕುವುದು
೨. ಇಲ್ಲಿನ ಪ್ರಮುಖರಿಗೆ, ಬಾಲಬಡುಕ ಪ್ರಭಾವೀ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ ಕೊಟ್ಟು, ಬಿರುದಾವಳಿಗಳನ್ನು ನೀಡಿ ಮನೆಕಾಯುವ ನಾಯಿಗಳಂತೆ ಇರಿಸಿಕೊಳ್ಳುವುದು
೩. ಭಾರತದ ನಾಗರಿಕತೆ, ಸಂಸ್ಕೃತಿಗಳನ್ನು ಬರ್ಬರವೆಂದು ಜರಿದು, ತಮ್ಮ ನಡಾವಳಿಗಳನ್ನು ಹೇರುವುದು
೪. ಭಾರತದ ಇತಿಹಾಸ ಚಿತ್ರಣವನ್ನು ಸುಳ್ಳುಗಳಿಂದ ತುಂಬಿಸಿ, ಹಿಂದೂಧರ್ಮವನ್ನು ಅಪಾರ್ಥಕ್ಕೀಡಾಗುವಂತೆ ಪ್ರಸ್ತುತಪಡಿಸುವುದು *೨
ಮೊದಲ ಮೂರನ್ನು ಹಂತಹಂತವಾಗಿ ಸಾಧಿಸಿದ ಆಂಗ್ಲರು ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸನ ಕಾಲಕ್ಕೆ ನಾಲ್ಕನೆಯದಕ್ಕೂ ಕೈಹಾಕಿ, ಭಾರತದ ಇತಿಹಾಸವನ್ನು ಪಾತಾಳಕ್ಕೆ ತಳ್ಳುವ ಹುನ್ನಾರಕ್ಕಿಳಿದರು. ಅಮೆರಿಕಾದೊಂದಿಗಿನ ಯುದ್ಧ ಮುಗಿದು, ತಮ್ಮ ವಶದಲ್ಲಿದ್ದ ೧೫ ವಸಾಹತುಗಳನ್ನು ಬಿಟ್ಟುಕೊಡುವ ಒಪ್ಪಂದ ಆಗತಾನೆ ಆಗಿತ್ತು. ನಿರಾಳವಾಗಿದ್ದ ಇಂಗ್ಲೆಂಡು, ಭಾರತದಲ್ಲಿ ಕ್ರಾಂತಿಯ ಉಸಿರೆತ್ತದಂತೆ ಸದಾ ಗುಲಾಮಿತನದಲ್ಲಿರುವ ಪೀಳಿಗೆಯನ್ನು ರೂಪಿಸಬೇಕೆನ್ನುವ ಪ್ರಯತ್ನಕ್ಕೆ ತೊಡಗಿತು. ಅಲ್ಲಿಂದಾಚೆ, ಮೊದಲ ಮಹಾಯುದ್ಧದವರೆಗೂ ಈ ಕೆಲಸ ಅಡೆತಡೆಯಿಲ್ಲದೆ ನಿರಂತರವಾಗಿ ಸಾಗಿತು. ಭಾರತ ಚೆನ್ನಾಗಿದ್ದಷ್ಟೂ ಕಾಲ ಇಂಗ್ಲೆಂಡು ಜಗತ್ತಿನ ಶಕ್ತಿಯುತ ರಾಷ್ಟ್ರವಾಗಿಯೇ ಬೆಳಗಿತು.
ಅದು ಬೇರೆಯ ವಿಚಾರ. ಆದರೆ ನಮ್ಮ ದೃಷ್ಟಿ ಆಂಗ್ಲರ ಭಾರತದ ಇತಿಹಾಸವನ್ನು ತುಚ್ಛೀಕರಿಸುವ ಚಿಂತನೆಯ ಮೇಲಿನದು, ಅದಕ್ಕಾಗಿ ಅವರು ಹಿಡಿದ ಹಾದಿಯ ಕುರಿತಾದದ್ದು. ಊಹೂಂ. ಎದುರಿಗೆ ಕಂಡ- ಕಾಣದ ಯಾವ ದಾರಿಯನ್ನೂ ಅವರು ಬಿಡಲಿಲ್ಲ. ಸಂಸ್ಕೃತವನ್ನು ಜನಮಾನಸದಿಂದ ದೂರಕ್ಕೆ ಒಯ್ದರು. ಆ ಜಾಗದಲ್ಲಿ ಇಂಗ್ಲಿಶನ್ನು ಪ್ರತಿಷ್ಠಾಪಿಸಿದರು. ಮ್ಯಾಕ್ಸ್‌ಮುಲ್ಲರನನ್ನು ಕರೆತಂದು ಭಾರತೀಯ ಪ್ರಾಚೀನಗ್ರಂಥಗಳನ್ನು ತಪ್ಪು ವ್ಯಾಖ್ಯೆಗಳ ಮೂಲಕ ಇಂಗ್ಲಿಶಿಗೆ ಅನುವಾದಿಸಿದರು. ಕ್ರೈಸ್ತ ಧರ್ಮವೇ ಶ್ರೇಷ್ಠ ಅನ್ನುವುದನ್ನು ಅನುವಾದಕನ ಲೇಖನಿಯಿಂದ ಬರೆಸಿದರು. ಆತನಂತೂ ವೇದಗಳನ್ನೇ ಬಾಲಿಶ ಎಂದು ಜರಿದುಬಿಟ್ಟ. ಸಂಸ್ಕೃತ ಭಾಷೆ ಸತ್ತ್ವವಿಲ್ಲದ್ದು ಎಂದುಬಿಟ್ಟ. ಮುಂದೆ ಟಿ.ಬಿ.ಮೆಕಾಲೆ ೧೮೩೫ರಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡುತ್ತಾ ’ಭಾರತ ಮತ್ತು ಅರೇಬಿಯಾದ ಅಷ್ಟೂ ಸಾಹಿತ್ಯ, ಯುರೋಪಿನ ಉತ್ತಮ ಸಾಹಿತ್ಯವುಳ್ಳ ಲೈಬ್ರರಿಯ ಒಂದು ಶೆಲ್ಫಿಗೆ ಸಮನಾಗಲಾರದು’ ಎಂದುಬಿಟ್ಟ. ಸಂಸ್ಕೃತ-ಉರ್ದು ಕಲಿಯಲು ಕೊಡುತ್ತಿರುವ ಗೌರವಧನ ವ್ಯರ್ಥ ಎಂದನಲ್ಲದೇ ಅದನ್ನು ನಿಲ್ಲಿಸುವ ಕುರಿತು ಸುದೀರ್ಘ ವಾದ ಮಂಡಿಸಿದ. ಜೊತೆಗೆ, ಪಾಠಶಾಲೆಗಳನ್ನ ಸಂಪೂರ್ಣ ಮುಚ್ಚಿಸಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದ. ಆ ಸ್ಥಾನವನ್ನು ತುಂಬುವಂತೆ ಇಂಗ್ಲಿಶ್ ಶಿಕ್ಷಣಸಂಸ್ಥೆಗಳನ್ನು ರೂಪಿಸಿ, ಭಾರತವಿರೋಧಿ ಚಿಂತನೆಗಳ ಪಠ್ಯಕ್ರಮ ರೂಪಿಸಿದ. ರಾಮಾಯಣ ಮಹಾಭಾರತ ಪುರಾಣಗ್ರಂಥಗಳೆಲ್ಲ ಅನಾಗರಿಕ ಕಲ್ಪನೆಗಳೆಂದು, ದಬ್ಬಾಳಿಕೆಯ ಚಿಂತನೆಗಳೆಂದು ಅಲ್ಲಿ ಕಲಿಸಿಕೊಡಲಾಯಿತು. ಭಾರತದ ಶಾಸ್ತ್ರಗ್ರಂಥಗಳು ವೈಜ್ಞಾನಿಕ ಆಧಾರವಿಲ್ಲದ ಕಟ್ಟುಕಥೆಗಳು ಎಂಬುದನ್ನು ಇಲ್ಲಿನ ಮಕ್ಕಳಿಗೆ ಮನದಟ್ಟು ಮಾಡಲಾಯಿತು. ರಾಮಮೋಹನ ರಾಯರಂಥವರೂ ಈ ಪ್ರಭಾವಕ್ಕೆ ಒಳಗಾಗಿ ಆಂಗ್ಲಶಿಕ್ಷಣದ ಕುರಿತು ಪ್ರಚಾರ ಮಾಡಿ ಸರ್ಕಾರದಿಂದ ’ರಾಜಾ’ ಬಿರುದಿಗೆ ಪಾತ್ರರಾದರು!
ಪಠ್ಯಪುಸ್ತಕಗಳಲ್ಲಿ ವಿಕೃತಿ
ಒಟ್ಟಾರೆ ಹೊಸ ಪೀಳಿಗೆಯ ಮಕ್ಕಳು ಆಂಗ್ಲ ಶಿಕ್ಷಣ ಪಡೆದು ಭಾರತವನ್ನು ಜರಿಯುವ, ರಾಮ-ಕೃಷ್ಣರ ಅಸ್ತಿತ್ವದ ಬಗ್ಗೆ ವೈಜ್ಞಾನಿಕ ಪುರಾವೆ ಕೇಳುವ ಯುವಕರಾಗಿ ಮಾರ್ಪಟ್ಟರು. ಅಲ್ಲಿಗೆ, ಅವರಂದುಕೊಂಡಂತೆ ‘ಕರಿ ಚರ್ಮದ ಆಂಗ್ಲರು’ ಇಲ್ಲಿಯೇ ರೂಪುಗೊಂಡು ಬೆಳೆದರು, ಚೆನ್ನಾಗಿ ಹರಡಿಕೊಂಡರು!
ಮೆಕಾಲೆಯ ಸಂತಾನಗಳು ಇಂದಿಗೂ ತಮ್ಮ ಆಳ್ವಿಕೆ ನಡೆಸುತ್ತಲೇ ಇವೆ. ಭಾರತದ ಕುರಿತು ಭಾರತೀಯರಲ್ಲೇ ಋಣಾತ್ಮಕ ಅಂಶಗಳನ್ನು ಬಿತ್ತಲಾಗುತ್ತಿದೆ. ಶಿಕ್ಷಣದಲ್ಲಿ ಇಲ್ಲಿನ ಐತಿಹಾಸಿಕ ವ್ಯಕ್ತಿಗಳನ್ನು ಅಪಹಾಸ್ಯಕರವಾಗಿ ಚಿತ್ರಿಸುವುದು ರೂಢಿಯಾಗಿಬಿಟ್ಟಿದೆ. ಶ್ರೇಷ್ಠ ಸಂತ ಮಹಾವೀರ ‘೧೨ ವರ್ಷಗಳ ಕಾಲ ಸ್ನಾನ ಮಾಡದೆ ಅಲೆಮಾರಿಯಂತೆ ತಿರುಗಾಡುತ್ತಿದ್ದ’ ಎನ್ನುವುದನ್ನು ಪಠ್ಯದಲ್ಲಿ ಸೇರಿಸುವ ತವಕ ನಮ್ಮ ಇತಿಹಾಸಕಾರರಿಗೆ. ಅದರ ಹಿನ್ನೆಲೆ ಅರಿಯದೇ iಕ್ಕಳಲ್ಲಿ ಆ ವ್ಯಕ್ತಿಯ ಬಗ್ಗೆ ಅಸಹ್ಯ ಹುಟ್ಟಿಸುವುದೇ ಕರ್ತವ್ಯವೇನೋ ಎಂಬಂಥ ಪಠ್ಯಗಳು ನಮ್ಮ ಮಕ್ಕಳಿಗೆ ಬೋಧಿಸಲ್ಪಡುತ್ತಿವೆ. ಭಗತ್‌ಸಿಂಗ್, ರಾಜಗುರು, ಸುಖದೇವರಂಥ ಹುತಾತ್ಮರು ನಮ್ಮ ಪಠ್ಯರಚನೆಕಾರರಿಗೆ ಭಯೋತ್ಪಾದಕರಂತೆ ಕಂಡರೆ, ಶಿವಾಜಿ, ರಾಣಾ ಪ್ರತಾಪರಂಥ ಕದನಕಲಿಗಳು ತಲೆಮರೆಸಿಕೊಂಡವರು, ದಂಗೆಕೋರರು! ಇತಿಹಾಸದ ಪಾಠದುದ್ದಕ್ಕೂ ಘೋರಿ- ಘಜ್ನಿಯರದೇ ಕಾರುಬಾರು; ಬ್ರಿಟಿಷ್ ಲಾರ್ಡ್‌ಗಳದ್ದೇ ದರ್ಬಾರು. ಸ್ವಾತಂತ್ರ್ಯಪಡೆದ ಆರೂವರೆ ದಶಕಗಳ ಅನಂತರವೂ ದಾಳಿಗಳು ಮಾತ್ರ ನಿಂತೇ ಇಲ್ಲ!
ಎಲ್ಲಕ್ಕಿಂತಲೂ ಗಂಭೀರವಾದ ಸಮಸ್ಯೆ ಎಂದರೆ, ನಮ್ಮ ಮುಂದಿನ ಪೀಳಿಗೆಗೆ ಭಾರತವೆಂದರೆ, ಹೋರಾಟವನ್ನೆ ಕಂಡಿರದಂತಹ ನಾಡೆಂದು ಬಿಂಬಿಸುತ್ತಿರುವುದು. ಇದು ಮಾತ್ರ ಪ್ರಮಾದಕಾರಿ. ಯಾವುದೇ ಒಂದು ರಾಷ್ಟ್ರ ಪ್ರತಿರೋಧವನ್ನೇ ತೋರದೆ ಸಾವಿರ ಸಾವಿರ ವರ್ಷಗಳ ಪರಂಪರೆ ಉಳಿಸಿಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಅಹಿಂಸೆಯ ಪಾಠವನ್ನು ಬೋಧಿಸಿ ನೆಹರೂರವರ ಅಲಿಪ್ತ ನೀತಿಗೆ ಮುಂದಿನ ಭಾರತವನ್ನು ಸಿದ್ಧಪಡಿಸಲೇಬೇಕೆನ್ನುವ ಹಠ ಅವರದ್ದಿರಬಹುದು. ಆದರೆ ವಾಸ್ತವವಾಗಿ ಅಲಿಪ್ತನೀತಿಗೆ ಭಾರತದ ನೆಲ ಹಸನಾಗಿಯೇ ಇದೆ. ಈಗ ಭೂಮಿ ಹಸನಾಗಬೇಕಾಗಿರುವುದು ನಮ್ಮ ಅಕ್ಕಪಕ್ಕದ ರಾಷ್ಟ್ರಗಳದ್ದು, ಜಗತ್ತಿನದು. ಇಷ್ಟಕ್ಕೂ ‘ಅಹಿಂಸಾ ಪರಮೋಧರ್ಮಃ’ ಎಂದ ನಾಡು ನಮ್ಮದೇ. ಆದರೆ ’ಧರ್ಮಹಿಂಸಾ ತಥೈವ ಚ’ (ಆತ್ಮ ರಕ್ಷಣೆ ಜೀವಿಯ ಧರ್ಮ. ಅದಕ್ಕಾಗಿ ಮಾಡುವ ಹಿಂಸೆಯೂ ಪರಮಧರ್ಮವೇ) ಎಂಬ ಸಾಲನ್ನು ಸೇರಿಸಿದವರೂ ನಾವೇ. ‘ಶಸ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಾ ಚರ್ಚಾ ಪ್ರವರ್ತತೇ’ (ಶಸ್ತ್ರದಿಂದ ರಕ್ಷಿಸಲ್ಪಟ್ಟ ರಾಷ್ಟ್ರದಲ್ಲಿ ಮಾತ್ರ ಶಾಸ್ತ್ರ ಚರ್ಚೆ ಸಾಧ್ಯ) ಎಂಬ ಮಾತು ಮೊಳಗಿದ್ದೂ ಇದೇ ರಾಷ್ಟ್ರದಲ್ಲಿ.
ಇಲ್ಲವಾದಲ್ಲಿ ಜಗತ್ತನ್ನೇ ಗೆಲ್ಲಬೇಕೆಂದು ಬಂದ ಅಲೆಗ್ಸಾಂಡರನ ಜೈತ್ರ ಯಾತ್ರೆಗೆ ಭಾರತ ತಡೆಯೊಡ್ಡುವುದು ಸಾಧ್ಯವೇ ಇರಲಿಲ್ಲ. ಆಕ್ರಮಣಕಾರಿಗಳಾಗಿ ಬಂದ ಶಕರು, ಹೂಣರು ಸೋತು ಸುಣ್ಣವಾಗಿ ಇಲ್ಲಿನ ಸಮಾಜದೊಂದಿಗೆ ಬೆರೆತುಹೋಗುವುದು ಸಾಧ್ಯವಿರಲಿಲ್ಲ. ಜಗತ್ತನ್ನು ದೂಳೀಪಟ ಮಾಡಿಬಂದ ಅರಬರು ಭಾರತದಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಆರೇಳು ಶತಮಾನಗಳ ಸುದೀರ್ಘ ಹೋರಾಟ ನಡೆಸಬೇಕಾದ ಪ್ರಮೇಯವಿರಲಿಲ್ಲ. ಕೊನೆಗೆ, ಅತ್ಯಂತ ಬುದ್ಧಿವಂತರೂ ಕುಟಿಲರೂ ಆದ ಆಂಗ್ಲರು ಹೈರಾಣಾಗಿ ಆಳುವ ಆನಂದ ಪಡೆಯುವ ವೇಳೆಗಾಗಲೇ ದೇಶ ಬಿಟ್ಟು ಹೊರಡಬೇಕಾಗುತ್ತಿರಲಿಲ್ಲ.
ಸೈನಿಕರು ಯುದ್ಧ ಮಾಡಲಿಕ್ಕಲ್ಲ...
ಭಾರತ ಇಂದು ನಾವು ಅಂದುಕೊಂಡಿರುವಂತೆ ಸಾಮಾನ್ಯ ರಾಷ್ಟ್ರವಾಗಿರಲಿಲ್ಲ. ಇಲ್ಲಿ ಶಾಸ್ತ್ರಗಳ ಅಧ್ಯಯನ ನಡೆದಷ್ಟೇ ಪ್ರಮಾಣದಲ್ಲಿ ಶಸ್ತ್ರಾಭ್ಯಾಸವೂ ನಡೆದಿದೆ. ಭಗವತ್ಸಾಕ್ಷಾತ್ಕಾರಕ್ಕಾಗಿ, ಸಂತಾನಾಪೇಕ್ಷೆಯಿಂದ ಯಜ್ಞ ಯಾಗಗಳನ್ನು ನಡೆಸಿದಂತೆಯೇ ಮಾತೃಭೂಮಿಯ ರಕ್ಷಣೆಗಾಗಿ ಕತ್ತಿ ಗುರಾಣಿಗಳ ಪ್ರಹಾರವೂ ನಡೆದಿದೆ.
ಭಾರತ ವೇದೋಪನಿಷತ್ತುಗಳ ಮೂಲಕ ಜಗತ್ತಿಗೆ ಅಧ್ಯಾತ್ಮದ ಜ್ಞಾನ ನೀಡಿದಂತೆಯೇ  ಯುದ್ಧಕಲೆ, ಯುದ್ಧ ಧರ್ಮ ಮತ್ತು ಶಸ್ತ್ರ ತಯಾರಿಕೆಯ ವಿಜ್ಞಾನಗಳನ್ನು ಕೂಡ ಆವಿಷ್ಕರಿಸಿತ್ತು. ಅಂದಿನ ದಿನಗಳಲ್ಲಿ ಭಾರತಕ್ಕಿದ್ದಷ್ಟು ಯುದ್ಧನೈಪುಣ್ಯತೆ ಇನ್ನಾವ ರಾಷ್ಟ್ರಕ್ಕೂ ಇರಲಿಲ್ಲ. ರಾಮಾಯಣದಲ್ಲಿ ಬಗೆಬಗೆಯ ಶಸ್ತ್ರಗಳ ಉಲ್ಲೇಖ, ಮಹಾಭಾರತದಲ್ಲಿ ವ್ಯೂಹಗಳ ರಚನೆ, ನಿಯಮಗಳು; ಪ್ರಾಚೀನ ಕಥನಕಾವ್ಯ ಮತ್ತಿತರ ಗ್ರಂಥಗಳಲ್ಲಿ ಬಗೆಬಗೆಯ ಯುದ್ಧಯಂತ್ರಗಳ ಬಳಕೆಯ ವಿವರಣೆ- ಇವೆಲ್ಲವೂ ನಮ್ಮ ಯುದ್ಧವಿಜ್ಞಾನಕ್ಕೆ ಸಾಕ್ಷ್ಯ ನುಡಿಯುತ್ತವೆ. ರಾಮಾಯಣದ ಕಾಲಕ್ಕಿಂತ ಮಹಾಭಾರತದ ಕಾಲಕ್ಕೆ ಯುದ್ಧಕಲೆಯಲ್ಲಿ ಸಾಕಷ್ಟು ಪ್ರಗತಿಯಾಗಿತ್ತು. ಅಲ್ಲಿಂದ ಮುಂದೆ ಮತ್ತಷ್ಟು ವಿಸ್ತಾರವಾಗುತ್ತ ಸಾಗಿತು. ಪೀಳಿಗೆಯಿಂದ ಪೀಳಿಗೆಗೆ ಹೊಸತನ್ನು ಮೈದುಂಬಿಕೊಳ್ಳುತ್ತ ಸಾಗಿತು. ಈ ಕಾರಣದಿಂದಲೇ ವಿದೇಶೀ ಆಕ್ರಮಣಕಾರರಿಗೆ ಭಾರತ ನುಂಗಲಾಗದ ತುತ್ತಾಗಿ ಪರಿಣಮಿಸಿದ್ದು. ಯುರೋಪಿಯನ್ನರಂತೂ ಭಾರತೀಯ ಸೈನಿಕರನ್ನೇ ಬಳಸಿಕೊಂಡು ಯುದ್ಧಗಳನ್ನು ಗೆದ್ದರು. ಆದರೆ, ಭಾರತೀಯರ ಯುದ್ಧ ಶೈಲಿಯನ್ನು ಕಾಡುಜನಾಂಗದವರ ದಂಗೆ ಎಂಬಂತೆ ಬಿಂಬಿಸುವುದನ್ನು ಮಾತ್ರ ಅವರು ಮರೆಯಲಿಲ್ಲ!
ನಮ್ಮ ಇತಿಹಾಸಕಾರರಂತೂ ಅಹಿಂಸೆಯ ಕುರಿತಂತೆ ಮಾತಾಡುವಾಗ ಬುದ್ಧ ಮತ್ತು ಅವನಿಂದ ಪ್ರೇರಣೆ ಪಡೆದ ಅಶೋಕನ ಕುರಿತಾಗಿ ಹೇಳುತ್ತಾ ಒಂದೇ ಮುಖದ ದರ್ಶನ ಮಾಡಿಸಿ ಹಾದಿ ತಪ್ಪಿಸುತ್ತಾರೆ. ವಾಸ್ತವವಾಗಿ, ಅಶೋಕನ ರಾಜ್ಯದಲ್ಲಿ ಕಳಿಂಗ ಯುದ್ಧದ ನಂತರವೂ ರಾಜ್ಯ ರಕ್ಷಣೆಗೆ ಒಂದು ಲಕ್ಷ ಸೈನಿಕರು ಸನ್ನದ್ಧರಿರುತ್ತಿದ್ದರಂತೆ. ಇದಕ್ಕೆ ಹಿನ್ನೆಲೆಯಾಗಿ ಮೌಖಿಕಗಾಥೆಯೊಂದು ಹೀಗೆ ಹೇಳುತ್ತದೆ;
ಕಳಿಂಗ ಯುದ್ಧ ಮುಗಿದು, ಅಪಾರ ಸಾವುನೋವುಗಳಿಂದ ಪರಿತಪಿಸಿದ ಅಶೋಕ ತಾನು ಇನ್ನುಮುಂದೆ ಯುದ್ಧ ಮಾಡುವುದಿಲ್ಲವೆಂದು ಶಪಥಗೈದಿದ್ದನಂತೆ. ಅಷ್ಟಾಗಿಯೂ ಅವನ ಸೈನ್ಯದಲ್ಲಿದ್ದ ಸೈನಿಕರ ಸಂಖ್ಯೆ ಒಂದು ಲಕ್ಷಕ್ಕಿಂತಲೂ ಕಡಿಮೆಯಾಗಲಿಲ್ಲ. ಇದನ್ನು ಕಂಡು ಬೇಸತ್ತ ಮಂತ್ರಿ, ಯುದ್ಧವೇ ಇಲ್ಲವೆಂದಮೇಲೆ ಸೈನ್ಯವೇತಕ್ಕೆ? ಕೇಳಿದನಂತೆ. ಉತ್ತರ ನೀಡುವ ನೆಪದಲ್ಲಿ ರಾತ್ರಿ ವಿಹಾರಕ್ಕೆ ಮಂತ್ರಿಯೊಂದಿಗೆ ನಗರಸಂಚಾರ ಹೊರಟನಂತೆ ಅಶೋಕ. ಎದುರಿನಿಂದ ಒಬ್ಬ ಕುರುಡ ಕೈಲಿ ಪಂಜು ಹಿದಿದುಬರುತ್ತಿದ್ದ. ಮಂತ್ರಿ, ನಿನಗೆ ಕಾಣದ ಮೇಲೆ ಪಂಜು ಯಾಕಯ್ಯಾ ಎಂದ. ಅದಕ್ಕೆ ಕುರುಡ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು; ‘ನನಗೇನೋ ಕಣ್ಣು ಕಾಣುವುದಿಲ್ಲ, ಪಂಜು ಬೇಡ ಸರಿಯೇ. ಎದುರಿಂದ ಬರುವ ನೀವು ಕತ್ತಲಲ್ಲಿ ನನಗೆ ಢಿಕ್ಕಿ ಹೊಡೆಯಬಾರದಲ್ಲ, ಅದಕ್ಕೇ…!’ ಯುದ್ಧ ಮಾಡದೆಹೋದರೂ ಸೈನ್ಯ ಯಾಕೆ ಬೇಕೆಂದು ಮಂತ್ರಿಗೆ ಅರ್ಥವಾಯ್ತು.
ಭಾರತದ ದರ್ಶನವೂ ಇದೇ. ನಮಗೆ ಸೈನಿಕರು ಬೇಕಿರೋದು ಯುದ್ಧ ಮಾಡಲಿಕ್ಕಲ್ಲ, ಯುದ್ಧ ತಡೆಯಲಿಕ್ಕಾಗಿ!
ಈ ರಾಷ್ಟ್ರ ನಿರ್ಮಾಣಗೊಂಡಿರುವುದೇ ತ್ಯಾಗದ ಆದರ್ಶದ ಮೇಲೆ. ಹೀಗಾಗಿಯೇ ಅವಶ್ಯಕತೆ ಬಿದ್ದಾಗ ಪ್ರಾಣತ್ಯಾಗಕ್ಕೂ ಹಿಂಜರಿಯದ ಜನಾಂಗ ಇಲ್ಲಿನದು. ಭಗವದ್ಗೀತೆಯ ಪ್ರವಚನ ಮಾಡಿದಷ್ಟೆ ಸಲೀಸಾಗಿ ರಣಕಹಳೆ ಊದಬಲ್ಲವರು ನಾವು.
ಸಂತರ ಸಾಲು
ಶಿವಾಜಿ ಮಹರಾಜ್ ನೆನಪಾಗುತ್ತಾರೆ. ರಾಜಮಹಾರಾಜರುಗಳ ನಿದ್ದೆಕೆಡಿಸಿ ಕಾಲಬುಡಕ್ಕೆ ಕೆಡವಿಕೊಳ್ಳುತ್ತಿದ್ದ ಶಿವಾಜಿ, ತಾವು ಮಾತ್ರ ಸಂತ ಸಮರ್ಥ ರಾಮದಾಸರ ಕಾಲಬುಡದಲ್ಲಿ ಇರಬಯಸುತ್ತಿದ್ದರು. ಸಂನ್ಯಾಸಿಯಾಗಬೇಕೆಂದು ಹಪಹಪಿಸುತ್ತಿದ್ದ ರಾಜಕುಮಾರನಿಗೆ ಆತನ ಕರ್ತವ್ಯವನ್ನು ಮನದಟ್ಟುಮಾಡಿಕೊಟ್ಟು ಮತ್ತೊಂದು ಮಹಾತ್ಯಾಗಕ್ಕೆ ಸಜ್ಜುಗೊಳಿಸಿದ್ದು ಇದೇ ಸಮರ್ಥ ರಾಮದಾಸರೇ.
ನಮ್ಮ ಕರ್ನಾಟಕದಲ್ಲಿಯೇ ನೋಡಿ. ಹಕ್ಕಬುಕ್ಕರೆಂಬ ಸಹೋದರರಿಗೆ ಮಾರ್ಗದರ್ಶನ ಮಾಡಿ ವಿಜಯನಗರದ ಸ್ಥಾಪನೆಗೆ ಕಾರಣರಾದವರು ಯಾರೆಂದು ನೆನಪಿದೆಯಲ್ಲವೆ? ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾಗಿದ್ದ ವಿದ್ಯಾರಣ್ಯರು ತಾನೆ? ಅವರ ಪ್ರೇರಣೆ, ತಪಸ್ಸು ಇಲ್ಲವಾದಲ್ಲಿ ವಿಜಯನಗರ ಸಾಮ್ರಾಜ್ಯವಿರುತ್ತಿರಲಿಲ್ಲ. ಆಗ ನಮ್ಮ ಇತಿಹಾಸದ ಸ್ವರ್ಣಮಯ ಪುಟಗಳೂ ಇರುತ್ತಿರಲಿಲ್ಲ!
ಚಾಣಕ್ಯನ ಕಥೆಯಂತೂ ಮತ್ತೂ ಭಿನ್ನ. ಜನಪೀಡಕ ನಂದರನ್ನು ಮಟ್ಟಹಾಕಲು ಚಂದ್ರಗುಪ್ತನನ್ನು ನಿರ್ಮಾಣಮಾಡಿ, ಅವನನ್ನು ಪಟ್ಟದಲ್ಲಿ ಕೂರಿಸುವವರೆಗಿನ ಅವರ ಸಾಹಸ ಕಡಿಮೆಯದಲ್ಲ. ಭಗವಂತನೆಡೆಗೆ ಸಾಗುವ ದೀಕ್ಷೆ – ಸಂಕಲ್ಪದೊಂದಿಗೆ ಹೆಜ್ಜೆ ಇಡುವ ಈ ಸಂತರು ರಾಷ್ಟ್ರನಿರ್ಮಾಣದ ಕಡೆಗೂ ಅಷ್ಟೇ ಗಮನ ನೀಡುತ್ತಿದ್ದರೆನ್ನುವುದು ಇಲ್ಲಿನ ವೈಶಿಷ್ಟ್ಯ.
ಇವರೆಲ್ಲರನ್ನೂ ಮೀರಿಸಿದ್ದು ಸಿಕ್ಖರ ಗುರು ಗೋವಿಂದ ಸಿಂಹರು. ಅವರಂತೂ ತಮ್ಮ ಶಿಷ್ಯರನ್ನು ನೇರ ಕಣಕ್ಕೇ ಇಳಿಸಿದರು. ತಾವೂ ಕತ್ತಿ ಹಿಡಿದು ದೇಶದ ಮೇಲೆ ಆಕ್ರಮಣ ಮಾಡಿದವರ ಮಾರಣಹೋಮಕ್ಕೆ ಸಿದ್ಧರಾದರು. ಈ ಕಾಳಗದಲ್ಲಿ ತಮ್ಮ ಇಬ್ಬರು ಪುಟ್ಟ ಮಕ್ಕಳನ್ನೂ ಕಳಕೊಂಡರು. ಆತ್ಮದ ಮುಕ್ತಿ, ದೇಶದ ಮುಕ್ತಿ- ಇವೆರಡೂ ಅವರ ಪಾಲಿಗೆ ಒಂದೇ ಆಗಿತ್ತು.
ಈ ಬಗೆಯ ಚಿಂತನೆ ಜನಮಾನಸದಲ್ಲಿ ಹರಡಿದ್ದುದರಿಂದಲೇ ಭಾರತ ಯಾರಿಗೂ ಬಾಗಬೇಕಾಗಿ ಬರಲಿಲ್ಲ. ಅಂತಹ ಅವಸ್ಥೆಗಳೇನಿದ್ದರೂ ತಾತ್ಕಾಲಿಕವಾಗಿ ಬಂದುಹೋದವಷ್ಟೆ. ಮೊಘಲರು ಇಲ್ಲಿ ಆಳ್ವಿಕೆ ನಡೆಸಿದರೆಂದು ಹೇಳಿಬಿಡಬಹುದು. ಆದರೆ ಒಂದು ದಿನವೂ ಯಾವ ಮೊಘಲ್ ಅರಸನೂ ನೆಮ್ಮದಿಯಿಂದಿರಲಿಲ್ಲ. ಹೀಗಾಗಿಯೇ ಮುಂದೆ ಇಲ್ಲಿನ ರಿವಾಜುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಳ್ವಿಕೆ ನಡೆಸುವ ಸ್ಥಿತಿ ಅವರಿಗೊದಗಿ ಬಂದಿದ್ದು. ಆಂಗ್ಲರ ಸ್ಥಿತಿಯೂ ಹಾಗೇ ಆಯಿತು. ರಾಜ ಮಹಾರಾಜರುಗಳೊಂದಿಗೆ ಏಗುವುದಿರಲಿ, ಸಾಮಾನ್ಯ ಜನರೂ ಅವರಿಗೆ ನೆಮ್ಮದಿಯ ನಿದ್ದೆ ಕೊಡಲಿಲ್ಲ.
ಮೊದಲ ಕ್ರಾಂತಿಯ ಅನಂತರ
ಅಂಬಾಪ್ರಸಾದ ಎಂಬ ಕ್ರಾಂತಿಕಾರಿಯೊಬ್ಬನಿದ್ದ. ಆತನಿಗೆ ಬಲಗೈ ಇರಲಿಲ್ಲ. ನಿನ್ನ ಕೈ ಏನಾಯ್ತು ಕೇಳಿದರೆ, ‘ನಾನು ಹುಟ್ಟಿದ್ದು ೧೮೫೮ರಲ್ಲಿ’ ಅನ್ನುತ್ತಿದ್ದ. ಅವನ ಮಾತಿನ ಅರ್ಥವೇನು ಗೊತ್ತೆ? ಆತ ೧೮೫೭ರಲ್ಲಿ ರಾಣಿ ಲಕ್ಷ್ಮೀಬಾಯಿಯ ಸೈನ್ಯದಲ್ಲಿದ್ದು ಹೋರಾಡುವಾಗ ಬಲಗೈ ಕಳಕೊಂಡನಂತೆ. ರಣರಂಗದಲ್ಲಿ ಪ್ರಾಣಾರ್ಪಣೆಯೂ ಆಗಿತ್ತಂತೆ. ಮರುವರ್ಷವೇ ಆತ ಮತ್ತೆ ಜನ್ಮವೆತ್ತಿ ಬಂದಿದ್ದರಿಂದ ಬಲಗೈ ಇಲ್ಲದೆ ಬರಬೇಕಾಯ್ತಂತೆ! ಹಾಗಂತ ಹೆಮ್ಮೆಯಿಂದ ಹೇಳಿಕೊಳ್ತಿದ್ದ. ಈ ಜನ್ಮವೂ ಬ್ರಿಟಿಷರ ವಿರುದ್ಧದ ಹೋರಾಟಕ್ಕೇ ಮೀಸಲು ಎಂದು ನಿಶ್ಚಯಿಸಿಬಿಟ್ಟಿದ್ದ.
ಈ ಅಂಬಾಪ್ರಸಾದನ ಸಾಧನಗಾಥೆ ಎಂಥದ್ದು ಗೊತ್ತೇ? ಭೂಪಾಲದಲ್ಲಿದ್ದ ’ಇಂಗ್ಲಿಷ್ ರೆಸಿಡೆಂಟ್’ನನ್ನು ಇಂಗ್ಲಿಷರೇ ಬೇರೆಡೆಗೆ ವರ್ಗಾಯಿಸುವಂತೆ ಮಾಡಿದ ಮಹಾಭೂಪ ಅವನು! ಅವರ ಕಣ್ತಪ್ಪಿಸಿ ಸಾಧು ವೇಷ ಧರಿಸಿ ಅಲೆದಾಡುತ್ತಿದ್ದಾಗ, ಅವನನ್ನು ಹಿಡಿಯುವ ಸಲುವಾಗಿ ಆಂಗ್ಲ ಗೂಢಚಾರನೊಬ್ಬ ಶಿಷ್ಯನಂತೆ ಬಂದ. ಅಂಬಾಪ್ರಸಾದನಿಗೆ ಅವನ ಗುರುತು ಸಿಕ್ಕಿತು. ತನಗೆ ಆಗಬೇಕಿದ್ದ ಕೆಲಸಗಳೆಲ್ಲವನ್ನೂ ಮಾಡಿಸಿಕೊಂಡ ಆತ, ಕೊನೆಗೆ ಗೂಢಚಾರನನ್ನೇ ಚೆನ್ನಾಗಿ ಹೆದರಿಸಿ, ಆತ ಜೀವ ಉಳಿದರೆ ಸಾಕು ಎಂದು ಓಡುವಂತೆ ಮಾಡಿಬಿಟ್ಟ!
ಮುಂದೆ ಅಂಬಾಪ್ರಸಾದ ಮತ್ತು ಭಗತ್ ಸಿಂಗನ ಚಿಕ್ಕಪ್ಪ ಸರ್ದಾರ್ ಅಜಿತ್‌ಸಿಂಗ್, ಕರಾಚಿಯಿಂದ ಇರಾನಿನೆಡೆಗೆ ಪಲಾಯನ ಮಡಿದರು. ಅಲ್ಲಿ ರಾಜಾ ಮಹೇಂದ್ರಸಿಂಗ್ ಪ್ರತಾಪರು ಬ್ರಿಟಿಷರ ವಿರುದ್ಧ ಹೋರಾಡಲು ಕಟ್ಟುತ್ತಿದ್ದ ಸೇನೆಗೆ ಬೆಂಬಲವಾಗಿ ನಿಂತರು. ಅಲ್ಲಿಯೂ ಆಂಗ್ಲರು ಬೆನ್ನತ್ತಿದಾಗ ಒಮ್ಮೆ ಒಂಟೆಗೆ ಬಿಗಿದ ಟ್ಯಾಂಕರಿನಲ್ಲಿ ಅಡಗಿ, ಮತ್ತೊಮ್ಮೆ ಬುರ್ಖಾ ಧರಿಸಿ ತಪ್ಪಿಸಿಕೊಂಡರು.
ಆಂಗ್ಲರು ಮತ್ತೂ ಬೆನ್ನು ಬಿಡದಾದಾಗ ಅಂಬಾಪ್ರಸಾದ ಅವರೊಂದಿಗೆ ನೇರ ಕಾದಾಟಕ್ಕಿಳಿದ. ಎಡಗೈಯಿಂದಲೇ ಹೋರಾಡುತ್ತ ತಪ್ಪಿಸಿಕೊಳ್ಳುವ ಯತ್ನ ಮಾಡಿದ. ಕೊನೆಗೂ ಸಿಕ್ಕುಬಿದ್ದಾಗ, ನೇಣಿಗೇರಿಸಲ್ಪಡುವ ಮೊದಲೇ ಸಮಾಧಿಸ್ಥಿತಿಯಲ್ಲಿ ಪ್ರಾಣತ್ಯಾಗ ಮಾಡಿದ. ಹೀಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಚ್ಛಾಮರಣಿಯೊಬ್ಬನ ಆತ್ಮಾರ್ಪಣೆಯಾಯ್ತು. ಇವತ್ತಿಗೂ ಇರಾನಿನಲ್ಲಿ ಅಂಬಾಪ್ರಸಾದನ ಹೆಸರಿಂದ ರೋಮಾಂಚಿತರಾಗುವವರಿದ್ದಾರೆ. ಆದರೆ ಆತ ಯಾರಿಗಾಗಿ ಜೀವ ತೇಯ್ದಿದ್ದನೋ ಆ ದೇಶದ ಜನರಿಗೆ ಮಾತ್ರ ಇನ್ನೂ ಅಪರಿಚಿತನೇ!
ಅಜಿತ ಸಿಂಗನ ಕತೆ
ಸಾವಿನಲ್ಲೂ ಸಾಧನೆಗೈದ ಮತ್ತೊಬ್ಬ ಕ್ರಾಂತಿಕಾರಿ, ಸರ್ದಾರ್ ಅಜಿತ್ ಸಿಂಗ್. ಅಂಬಾಪ್ರಸಾದ್ ಮತ್ತು ಅಜಿತ್ ಸಿಂಗರದು ಅಪೂರ್ವ ಗೆಳೆತನ. ತನ್ನ ೨೧ನೆಯ ವಯಸ್ಸಿನಲ್ಲೇ ಪಂಜಾಬದ ಅರಸರನ್ನೂ ರೈತರನ್ನೂ ಸಂಘಟಿಸಿ ಆಂಗ್ಲರ ವಿರುದ್ಧ ಎತ್ತಿಕಟ್ಟಿದ ಮಹಾಸಾಹಸಿ ಈತ. ಆತನ ಭಾರತಮಾತಾ ಸೊಸೈಟಿ ಆ ಕಾಲಕ್ಕೆ ಆಂಗ್ಲರೆದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗಿಸಿತ್ತು. ಆಂಗ್ಲ ಅಧಿಕಾರಿ ಇಬ್ಬಟ್ಸನ್, ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಗ್‌ಗೆ ‘ಪಂಜಾಬದಲ್ಲಿ ಕ್ರಾಂತಿಯೇನಾದರೂ ಆದರೆ, ಅದಕ್ಕೆ ಸರ್ದಾರ್ ಅಜಿತ್ ಸಿಂಗ್ ತಂಡವೇ ಹೊಣೆಯಾಗಿರಲಿದೆ’ ಎಂದು ವರದಿ ಕಳಿಸಿದ್ದ. ಅಷ್ಟರ ಮಟ್ಟಿಗಿತ್ತು ಆತನ ಪ್ರತಾಪ.
ಪಂಜಾಬಿನಿಂದ ಅಜಿತ್‌ಸಿಂಗನನ್ನು ಗಡೀಪಾರು ಮಾಡುವ ಯೋಚನೆ ಸರ್ಕಾರಕ್ಕೆ ಬಂದಾಗ ಅಜಿತ್ ಸಿಂಗ್, ಅಂಬಾ ಪ್ರಸಾದನೊದಗೂಡಿ ಪಲಾಯನಗೈದರು. ಸರ್ಕಾರ ಇತ್ತ ಕಾಡಲ್ಲಿ ಅವರನ್ನರಸುತ್ತಿದ್ದರೆ, ಇವರಿಬ್ಬರೂ ಇರಾನಿನಲ್ಲಿ ಮುಂದಿನ ಯೋಜನೆ ಸಿದ್ಧಪಡಿಸುವಲ್ಲಿ ಮಗ್ನರಾಗಿದ್ದರು! ಅಜಿತ್‌ಸಿಂಗ್, ಮಿರ್ಜಾ ಹಸನ್ ಖಾನ್ ಎಂಬ ಹೆಸರಿನಲ್ಲಿ ಇರಾನಿನಿಂದ ಫ್ರಾನ್ಸಿಗೆ ತೆರಳಿ, ಅಲ್ಲಿಂದ ಪ್ಯಾರಿಸ್, ಟರ್ಕಿ, ಜರ್ಮನಿಗಳನ್ನೂ ಅಲೆದುಬಂದರು. ಮುಸೋಲಿನಿ, ಕೈಸರ್‌ರನ್ನು ಭೇಟಿಮಾಡಿ ಸೈನ್ಯ ಕಟ್ಟುವ ಯೋಚನೆ ಮಾಡಿದರು. ಎರಡನೇ ಮಹಾಯುದ್ಧದ ಖೈದಿಗಳನ್ನು ಬಳಸಿಕೊಂಡು ‘ಆಜಾದ್ ಹಿಂದ್ ಲಷ್ಕರ್’  ಎಂಬ ಸೇನೆ ಕಟ್ಟಿದರು. ೧೯೪೫ರಲ್ಲಿ ಅವರ ಬಂಧನವಾಯ್ತು. ಇಂಗ್ಲೆಂಡಿನ ಯಾತನಾಗೃಹ (ಟಾರ್ಚರ್ ಹೌಸ್)ಕ್ಕೆ ಅವರನ್ನು ತಳ್ಳಲಾಯ್ತು. ಅವರ ಮೇಲೆ ಅಪಾರ ಗೌರವ ಹೊಂದಿದ್ದ ಪಂಜಾಬಿನ ಜನತೆ ಕಾಂಗ್ರೆಸ್ಸಿನ ಮೇಲೆ ಒತ್ತಡ ಹೇರಿ ೧೯೪೭ರ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಕರೆತಂದಿತು. ಲಂಡನ್ನಿನ ಜೈಲಿನಲ್ಲಿ ನೀಡಲಾದ ಯಾತನಾಮಯ ಹಿಂಸೆಯಿಂದ ಅವರ ದೇಹ ಜರ್ಝರಿತವಾಗಿಹೋಗಿತ್ತು. ಈಗ ಅವರ ಜೀವ ಉಳಿದಿದ್ದುದು ಸ್ವಾತಂತ್ರ್ಯದ ಸಿಹಿ ಸುದ್ದಿ ಕೇಳಲಿಕ್ಕಾಗಿ ಮಾತ್ರ.
೧೯೪೭, ಆಗಸ್ಟ್ ೧೪ರ ಮಧ್ಯರಾತ್ರಿ ಭಾರತೀಯರಿಗೆ ದೊಡ್ಡ ಹಬ್ಬ. ರೇಡಿಯೋದಲ್ಲಿ ಭಾರತ ಮುಕ್ತಗೊಂಡ ಸುದ್ದಿ ಬಿತ್ತರವಾಗುತ್ತಿತ್ತು. ಅದನ್ನು ಕೇಳಿದ ಅಜಿತ್ ಸಿಂಗರ ಆನಂದಕ್ಕೆ ಪಾರವೇ ಇಲ್ಲ. ಅವರು ಸಂಕಲ್ಪಿಸಿದ್ದ ಕಾರ್ಯ  ಈಡೇರಿತ್ತು. ಇನ್ನೊಂದು ನಿಮಿಷವೂ ಆತ ತಡಮಾಡಲಿಲ್ಲ. ತಾಯಿ ಭಾರತಿಯ ಚರಣಗಳೆಡೆಗೆ ದೃಷ್ಟಿ ಬೀರುತ್ತ, ಆಕೆಯ ಮಡಿಲಿಗೆ ಧಾವಿಸಿಬಿಟ್ಟರು. ದೇಶಕ್ಕೆ ಮುಕ್ತಿ, ಅದರೊಂದಿಗೆ ಅವರ ಆತ್ಮಮುಕ್ತಿ ಕೂಡ.
ಆಂಗ್ಲರ ಪಾಲಿಗೆ ೧೮೫೭ರ ಸಂಗ್ರಾಮವೇ ಒಂದು ಅಚ್ಚರಿ. ೧೭೫೭ರ ಪ್ಲಾಸೀ ಕದನದ ನಂತರ ನೂರು ವರ್ಷಗಳ ಕಾಲ ರಾಜ್ಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತ ಸಾಗಿದ ಆಂಗ್ಲರ ರೀತಿನೀತಿಗಳು ಭಾರತೀಯರಿಗೆ ಅಚ್ಚರಿಯವಾಗಿದ್ದವು. ಒಮ್ಮೆ ಅದನ್ನು ಅರ್ಥಮಾಡಿಕೊಂಡ ನಂತರ ಅವರದೇ ಹಾದಿಯಲ್ಲಿ ಅವರನ್ನು ಸದೆಬಡಿಯುವ ಯೋಜನೆಯನ್ನು ಭಾರತೀಯರು ರೂಪಿಸಿದರು. ನಾನಾ ಸಾಹೇಬ ಗುಪ್ತವಾಗಿ ಕ್ರಾಂತಿಯ ಯೋಜನೆ ರೂಪಿಸಿದ. ಜಗದೀಶಪುರದ ರಾಜ ಕುಂವರ್ ಸಿಂಗ್ ಗೆರಿಲ್ಲಾ ಮಾದರಿಯ ಯುದ್ಧದಿಂದ ಆಂಗ್ಲ ಸೈನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟ! ತಾತ್ಯಾನ ಶೌರ್ಯ, ಅಜೀಮುಲ್ಲಾನ ಚಾತುರ್ಯಗಳು ಆಂಗ್ಲರನ್ನು ಬೆಚ್ಚಿಬೀಳಿಸಿದ್ದವು. ಅತ್ಯಂತ ಸಾಮಾನ್ಯಜನರೂ ನಗುನಗುತ್ತ ನೇಣಿಗೇರುವ ಪರಿ ಜಗತ್ತನ್ನೇ ಅಚ್ಚರಿಗೆ ನೂಕಿತ್ತು.
ಅಲ್ಲಿಂದಾಚೆಗೆ ಆಂಗ್ಲರು ಎಚ್ಚರಿಕೆಯಿಂದ ಹೆಜ್ಜೆ ಇಡತೊಡಗಿದರು. ಭಾರತೀಯ ಭಾಷೆ, ಸಂಸ್ಕೃತಿಗಳಿಂದ ಯುವಕರನ್ನು ದೂರವಿರಿಸಲು ಕುಟಿಲೋಪಾಯಗಳ ಮೊರೆಹೋದರು. ಅದಕ್ಕಾಗಿ ಇಂಗ್ಲಿಶ್ ಶಿಕ್ಷಣವನ್ನು ಅತ್ಯಂತ ಜಾಣ್ಮೆಯಿಂದ ರಚಿಸಿದರು. ಆದರೆ ಇಲ್ಲಿಯೂ ಅವರಿಗೆ ತಿರುಗೇಟು ಕಾದಿತ್ತು. ಅವರಿತ್ತ ಇಂಗ್ಲಿಶ್ ಭಾಷಾಜ್ಞಾನವೇ ಮುಂದೆ ಕ್ರಾಂತಿಗೆ ತುಪ್ಪ ಸುರಿಯಿತು. ಜಾಗತಿಕ ಇತಿಹಾಸದ ಅಧ್ಯಯನ ಮಾಡಿದ ಭಾರತೀಯ ಯುವಕರು ದೇಶದ ಭವಿಷ್ಯ ಅಂಧಕಾರದಲ್ಲಿರುವುದನ್ನು ಮನಗಂಡರು. ಜಗತ್ತಿನ ಬೇರೆಬೇರೆ ದೇಶಗಳಿಗೆ ತೆರಳಿ, ಸ್ವಾತಂತ್ರ್ಯದ ಸವಿಯುಂಡು ಬಂದಿದ್ದವರಿಗೆ ಭಾರತವೂ ಸ್ವತಂತ್ರವಾಗಿರಬೇಕೆಂಬ ಬಯಕೆ ಮೂಡಿತು. ಎಷ್ಟ್ಟೆಂದರೂ ಋಷಿ ರಕ್ತ! ಬಹುಕಾಲ ಅಧೀನದಲ್ಲಿರಲಾರದು. ಮುಕ್ತಿ ಅದರ ಸಹಜ ಅಭಿಲಾಷೆ!
ಕ್ರಾಂತಿ ಕಿಡಿ ಕರ್ತಾರ್ ಸಿಂಗ್
ಚಿಕ್ಕಂದಿನಲ್ಲಿಯೇ ತಾಯ್ತಂದೆಯರನ್ನು ಕಳೆದುಕೊಂಡಿದ್ದ ಕರ್ತಾರ್ ಸಿಂಗ್ ಸರಾಬಾ ತಾತನ ಅಕ್ಕರೆಯಲ್ಲೆ ಬೆಳೆದವನು. ಹದಿನಾಲ್ಕು ವರ್ಷದವನಿದ್ದಾಗ ತಾತನ್ನ ಪೀಡಿಸಿ ಉದ್ಯೋಗಕ್ಕೆಂದು ಅಮೆರಿಕೆಗೆ ತೆರಳಿದ. ಅಲ್ಲಿನ ಸ್ವತಂತ್ರ ಹವೆ ಉಸಿರಾಡುತ್ತ ತನ್ನ ದೇಶದ ಸ್ವಾತಂತ್ರ್ಯದ ಬಗ್ಗೆ ಚಿಂತಿಸಿದ. ಮೊದಲ ವಿಶ್ವಯುದ್ಧ ಘೋಷಣೆಯಾಗುತ್ತಿದ್ದಂತೆಯೇ ಭಾರತಕ್ಕೆ ಧಾವಿಸಿ, ರಾಸ್ ಬಿಹಾರಿ ಬೋಸರೊಡಗೂಡಿ ಸೈನ್ಯದಲ್ಲಿ ಕ್ರಾಂತಿಯೆಬ್ಬಿಸುವ ಸಾಹಸಕ್ಕೆ ಕೈಯಿಟ್ಟ. ಗದರ್ ಪಾರ್ಟಿಯ ಸಕ್ರಿಯ ಸದಸ್ಯನಾಗಿದ್ದ ಆತನ ತುಟಿಗಳಲ್ಲಿ ಯಾವತ್ತೂ ನಲಿಯುತ್ತಿದ್ದ ಗೀತೆ,
ಚಲೇ ಚಲಿಯೇ ದೇಶುನ ಯುದ್ಧ ಕರನ್
ಏಹೋ ಆಖಿರಿ ವಚನ ಫರ್ಮಾನ್ ಹೋಗಯೇ
(ಯುದ್ಧ ಮಾಡಲಿಕ್ಕಾಗಿ ದೇಶಕ್ಕೆ ಹೋಗೋಣ. ಆಜ್ಞೆಯಾಗಿದೆ, ಸಮಯ ವ್ಯರ್ಥ ಮಾಡುವುದೇಕೆ? ನಡೆಯಿರಿ ಹೋಗೋಣ…)
೧೯೧೪ರ ಫೆಬ್ರವರಿ ೧೯ರಂದು ದೇಶದೆಲ್ಲೆಡೆ ೧೮೫೭ರ ಮಾದರಿಯ ಕ್ರಾಂತಿಯಾಗಬೆಕೆಂದು ನಿರ್ಧರಿಸಲಾಗಿತ್ತು. ತಯಾರಿಯೂ ಹೆಚ್ಚೂಕಡಿಮೆ ಮುಗಿದೇಬಿಟ್ಟಿತ್ತು. ಕೃಪಾಲ್‌ಸಿಂಗ್ ಎಂಬ ದ್ರೋಹಿಯೊಬ್ಬ ಒಳಗೊಳಗೆ ಆಂಗ್ಲರ ಪರ ಗೂಢಚಾರಿಕೆ ನಡೆಸುತ್ತ ಅವರಿಗೆ ಮಾಹಿತಿ ನೀಡುತ್ತಿದ್ದ. ಕೆಲವು ಹಿರಿಯ ಕ್ರಾಂತಿಕಾರಿಗಳು ಅವನನ್ನು ಅನುಮಾನಿಸಿದರಾದರೂ ಆತನನ್ನು ಕಿತ್ತುಬಿಸುಟುವ ಮಟ್ಟದ ಅಪನಂಬಿಕೆ ಬೆಳೆದಿರಲಿಲ್ಲ. ಆತನ ಮಾಹಿತಿಗಳಿಂದಾಗಿ ಆಂಗ್ಲರು ಎಚ್ಚೆತ್ತರು. ಹದಿನೆಂಟೂ ದಾಟಿರದ ಕರ್ತಾರ ಸಿಂಹ ಸೇರಿದಂತೆ ಅನೇಕರು ಸಿಕ್ಕಿಬಿದ್ದರು. ಕರ್ತಾರನಿಗೆ ಗಲ್ಲುಶಿಕ್ಷೆಯ ಘೋಷಣೆಯಾಯ್ತು. ಅದರಂತೆ ಫಾಸಿಕೋಣೆಗೆ ತಳ್ಳಲಾಯ್ತು. ಒಳಗೆ ಹಾಕಲ್ಪಟ್ಟವರು ಹೊರಬರುವಾಗ ನರಸತ್ತು ಪೇಲವವಾಗಿ ಬರುವಂಥ ಭಯಾನಕ ಕೋಣೆ ಅದು. ಆದರೆ ಕರ್ತಾರ್ ಹೊರಬಂದಾಗ ಅಚ್ಚರಿ ಕಾದಿತ್ತು. ಆತ ಬರೋಬ್ಬರಿ ಹತ್ತು ಪೌಂಡ್ ತೂಕ ಜಾಸ್ತಿಯಾಗಿದ್ದ! ತಾತನಿಗೆ ಮಾತ್ರ ತನ್ನ ಮೊಮ್ಮಗ ಸಾಯಲಿದ್ದಾನೆ ಅನ್ನುವ ಕೊರಗು ಕಾಡಹತ್ತಿತು. ಆತ ಕ್ಷಮಾಯಾಚನೆಯ ಮಾತೆತ್ತಿದಾಗ ಮೊಮ್ಮಗ ಕೊಟ್ಟ ಉತ್ತರವೇನು ಗೊತ್ತೆ? ‘ತಾತ, ಅಪ್ಪ ಅಮ್ಮ ರೋಗಕ್ಕೆ ತುತ್ತಾಗಿ, ಹಾಸಿಗೆಗೆ ಅಂಟಿಕೊಂಡು ಹೆದರಿಹೆದರಿ ಸತ್ತಿದ್ದಾರೆ. ನಾನು, ನಿನ್ನ ಮೊಮ್ಮಗ ಸಾವನ್ನು ಅಪ್ಪಿಕೊಳ್ಳಲು ಹೊರಟಿದ್ದೇನೆ. ನಿನಗೆ ಖುಷಿಯಾಗ್ತಿಲ್ಲವೆ?’ ಎಂದು! ಮೊಮ್ಮಗನ ಸಾಂತ್ವನದ ಮಾತು ಕೇಳುವ ಸರದಿ ಈಗ ತಾತನದು. ಆತನ ಮುಖದಲ್ಲೀಗ ನೋವಿರಲಿಲ್ಲ. ಇಂತಹ ಧೀರ ಮೊಮ್ಮಗ ನನ್ನವನು ಅನ್ನುವ ಭಾವವಿತ್ತು. ನೇಣಿಗೇರುವಾಗಲೂ ಕರ್ತಾರನ ಮುಖದಲ್ಲಿದ್ದ ನಗು ಆಂಗ್ಲ ಅಧಿಕಾರಿಗಳಿಗೆ ಹೊಟ್ಟೆಯುರಿ ಉಂಟುಮಾಡಿತ್ತು. ಮುಂದೆ ಭಗತ್ ಸಿಂಗ್‌ನಂತಹ ಅನೇಕರಿಗೆ ಪ್ರೇರಣೆಯಾಗಿದ್ದು ಇದೇ ಕರ್ತಾರ್ ಸಿಂಗ್ ಸರಾಬಾ.
ಇಂತಹ ಕರ್ತಾರನಿಗೂ ಪ್ರೇರಣೆ ಕೊಟ್ಟವರು ಯಾರಿರಬಹುದು? ಅದು ವ್ಯಕ್ತಿಯಲ್ಲ, ಸಂಘಟನೆ. ಅಮೆರಿಕಾದಲ್ಲಿ ಭಾರತದ ಸ್ವಾತಂತ್ರ್ಯಕ್ಕೆಂದು ಬಲಾಢ್ಯ ಸಂಘಟನೆಯಾಗಿ ರೂಪುಗೊಂಡಿದ್ದ ‘ಗದರ್ ಪಾರ್ಟಿ’. ಗದರ್ ಅಂದರೆ ಪಂಜಾಬಿಯಲ್ಲಿ ಕ್ರಾಂತಿ ಎಂದರ್ಥ. ಲಾಲಾ ಹರದಯಾಳರ ಕಲ್ಪನೆಯ ಕುಡಿ ಗದರ್. ಅದರ ಜಾಹೀರಾತು ನೋಡಿ ರೋಮಾಂಚಿತನಾದ ಕರ್ತಾರ್ ಅತ್ತ ಸೆಳೆಯಲ್ಪಟ್ಟಿದ್ದ. ಅದು ಹೀಗಿತ್ತು:
ಬೇಕಾಗಿದ್ದಾರೆ- ಗದರ್‌ಗಾಗಿ ಕೆಲಸ ಮಾಡಬಲ್ಲ ಉತ್ಸಾಹೀ ತರುಣರು
ಸಂಭಾವನೆ- ಮೃತ್ಯು
ಗೌರವ- ಹೌತಾತ್ಮ್ಯ
ಪಿಂಚಣಿ- ಸ್ವಾತಂತ್ರ್ಯ
ಕಾರ್ಯಕ್ಷೇತ್ರ- ಹಿಂದೂಸ್ಥಾನ
ಅವತ್ತಿನ ದಿನಗಳಲ್ಲಿ ಈ ರೀತಿಯ ಚಿಂತನೆಗಳು ಸರ್ವೇಸಾಮಾನ್ಯವಾಗಿದ್ದವು. ತರುಣರು ತಂಡೋಪತಂಡವಾಗಿ ಕ್ರಾಂತಿ ಪಡೆಯನ್ನು ಹೊಕ್ಕು ಸಾವಿಗೆ ಎದೆಕೊಟ್ಟು ನಿಲ್ಲುತ್ತಿದ್ದರು. ಸಾವಿಗೆ ಎದೆಗೊಟ್ಟು ನಿಂತರೆಂದ ಮಾತ್ರಕ್ಕೆ ಬರಿ ಸಾಯುವುದೆಂದಲ್ಲ, ಸಾಯಿಸುವುದಕ್ಕೂ ಸಿದ್ಧರೆಂದರ್ಥ. ಅದೇ ಆಂಗ್ಲರ ಪಾಲಿಗೆ ಗಾಬರಿಯ ವಿಷಯವಾಗಿದ್ದುದು. ಹೀಗಾಗಿಯೇ ಬಗೆಬಗೆಯಲ್ಲಿ ಭಾರತೀಯರನ್ನು ಛಿದ್ರಛಿದ್ರಗೊಳಿಸಿ ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟಿದರೆ ಆಳ್ವಿಕೆ ನಡೆಸುವುದು ಸುಲಭವೆಂದು ಭಾವಿಸಿದರು, ಸೋತರು. ಇಂದು ಅವರು ಬಯಸದೆಯೂ ಯಶಸ್ಸು ಕಂಡಿದ್ದಾರೆ.
ಇಂದಿನ ದಿನಗಳಲ್ಲಿ ಶಿವಾಜಿ ಮಹರಾಜರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಂಡರೆ ನಾವು ಮಹಾರಾಷ್ಟ್ರದ ಹೆಸರೆತ್ತಿ ಪ್ರತಿಮೆಗೆ ವಿರೋಧ ತೋರುತ್ತೇವೆ. ಧಿಂಗ್ರಾ, ಉಧಮ್ ಸಿಂಗ್, ಕರ್ತಾರ್ ಸಿಂಗರು ಪಂಜಾಬಿನವರೆಂಬ ಕಾರಣಕ್ಕೆ ನಮ್ಮಿಂದ ದೂರವಾಗಿಬಿಡುತ್ತಾರೆ. ನಮ್ಮ ಜಾತಿ ಪಂಥದವರೆಂಬ ಕಾರಣಕ್ಕೆ ಯಾರ್ಯಾರನ್ನೋ ನಮ್ಮ ಆದರ್ಶವೆಂದು ಅಪ್ಪಿಕೊಂಡುಬಿಡುತ್ತೇವೆ. ಇದು ಸರಿಯಾ? ಯಾವುದನ್ನು ಬ್ರಿಟಿಷರು ಯೋಜಿಸಿಯೂ ಮಾಡಲಸಾಧ್ಯವಾಗಿತ್ತೋ ಅದನ್ನು ನಾವೇ ಮಾಡುತ್ತಿದ್ದೇವಲ್ಲ!
ಹಾಗೆ ನೋಡಿದರೆ ಬಂಗಾಳಿಗಳು, ಮರಾಠಿಗರು, ಪಂಜಾಬಿಗಳಷ್ಟು ನಾವು ದಕ್ಷಿಣದವರು ಸ್ವಾತಂತ್ರ್ಯಕ್ಕಾಗಿ ಕಾದಾಡಲಿಲ್ಲ. ಕ್ರಾಂತಿಕಾರಿ ಇತಿಹಾಸದ ರಚನೆ ಮಾಡಿದ ತಿ.ತಾ.ಶರ್ಮರು ನಮ್ಮನ್ನು ನರೇಂದ್ರಭಾರತೀಯರು ಅನ್ನುತ್ತಾರೆ. ನಾವು ರಾಜನಡಿಯಲ್ಲಿದ್ದವರು. ರಾಜ ಬ್ರಿಟಿಷರಿಗೆ ಕೊಡಬೇಕಾದ್ದನ್ನು ಕೊಟ್ಟುಬಿಡುತ್ತಿದ್ದ. ಹೀಗಾಗಿ ನಮಗೆ ಆಂಗ್ಲರ ವಿರುದ್ಧ ಕಾದಾಡುವ ಪ್ರಮೇಯವೇ ಬರಲಿಲ್ಲ.
ಮೊದಲ ಬಾಂಬ್
ಆದರೆ ನೇರ ಬ್ರಿಟಿಷರ ಆಳ್ವಿಕೆಯಲ್ಲಿದ್ದವರು ಹಗಲು ರಾತ್ರಿ ಸ್ವಾತಂತ್ರ್ಯಕ್ಕಾಗಿ ಕಾದಾಡಿದ್ದಾರೆ. ಭಾರತವನ್ನು ಪೂರ್ಣ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಹೆಣಗಾಡಿದ್ದಾರೆ. ಹೀಗಾಗಿಯೇ ಸ್ವಾಮಿ ವಿವೇಕಾನಂದರು, ಸಂತ ರಾಮತೀರ್ಥರು, ಯೋಗಿ ಅರವಿಂದರು ಭಾರತದ ಕುರಿತು ಮಾತಾಡುವಾಗ ಅಷ್ಟೊಂದು ಗದ್ಗದಿತರಾಗುತ್ತಿದ್ದುದು. ಸೋದರಿ ನಿವೇದಿತಾ ಭಾರತೀಯರೊಂದಿಗೆ ಮಾತನಾಡುತ್ತಾ ‘ಸ್ವಾಮೀಜಿ ಭಾರತ ಎನ್ನುವಾಗ ಆನಂದದ ಬುಗ್ಗೆ ಚಿಮ್ಮುತ್ತಿತ್ತು. ಆದರೆ ನಿಮ್ಮಲ್ಲಿ ಆ ಚೈತನ್ಯವೇ ಕಾಣುತ್ತಿಲ್ಲ’ ಎನ್ನುತ್ತಿದ್ದರು. ಸ್ವತಃ ಸ್ವಾಮೀಜಿ ಯುರೋಪಿನಲ್ಲಿದ್ದಾಗ ಅಲ್ಲಿದ್ದ ರಷ್ಯನ್ ಕ್ರಾಂತಿಕಾರಿ ಕ್ರೊಪೋಟ್ಕಿನ್‌ನನ್ನು ಭೇಟಿಮಾಡಿ, ನನ್ನ ಯುವಕರು ಬಂದರೆ ಅವರಿಗೆ ಬಾಂಬ್ ತಯಾರಿಕೆಯನ್ನು ಕಲಿಸಿಕೊಡಿ ಎಂದು ಕೇಳಿಕೊಂಡಿದ್ದರು. ಅದಾದನಂತರ ಬಹುಶಃ ೧೯೦೫ರ ವೇಳೆಗೆ (ಸ್ವಾಮೀಜಿಯ ದೇಹತ್ಯಾಗದ ಮೂರು ವರ್ಷಗಳ ನಂತರ) ಬಂಗಾಳದ ಯುವಕ ಹೇಮಚಂದ್ರ ದಾಸ್ ಕಾನುಂಗೋ ಸೋದರಿ ನಿವೇದಿತಾಳಿಂದ ಪ್ರೇರಣೆಪಡೆದು ತನ್ನ ಆಸ್ತಿಯನ್ನು ಮಾರಿ, ವಿದೇಶಕ್ಕೆ ಹೋಗಿ ಬಾಂಬ್ ತಯಾರಿಕೆಯನ್ನೂ ಕಲಿತುಬಂದ. ಅಂತಹ ಪ್ರಯತ್ನಗಳಿಂದಾಗಿಯೇ ೧೯೦೮ರಲ್ಲಿ ಮುಜಫ್ಫರಪುರದಲ್ಲಿ ಮೊದಲ ಬಾಂಬ್ ಸ್ಫೋಟಗೈದವರು ಹದಿನೆಂಟರ ಇಬ್ಬರು ಪೋರರು. ಖುದಿರಾಂ ಬೋಸ್ ಮತ್ತು ಪ್ರಫುಲ್ಲ ಚಾಕಿ. ಮ್ಯಾಜಿಸ್ಟ್ರೇಟ್ ಕಿಂಗ್ಸ್‌ಫೋರ್ಡ್‌ನ ಹತ್ಯೆಗೆಂದು ಈ ಹುಡುಗರು ಮುಜಫ್ಫರ್‌ಪುರಕ್ಕೆ ಬಂದರು. ಪುಸ್ತಕವೊಂದರಲ್ಲಿ ಬಾಂಬನ್ನಿಟ್ಟು, ತೆರೆದೊಡನೆ ಸಿಡಿಯುವಂತೆ ಅದನ್ನು ಜೋಡಿಸಿ ಪಾರ್ಸೆಲ್ ಮಾಡಿದರು. ಕಿಂಗ್ಸ್‌ಫೋರ್ಡ್, ಪಾರ್ಸೆಲ್ಲನ್ನು ತೆರೆಯದೆ ಬಚಾವಾಗಿಬಿಟ್ಟ.
ಗುರಿ ತಪ್ಪಿತೆಂದು ಬೇಸರಿಸಿದ ಹುಡುಗರು ಅವನನ್ನು ಹಿಂಬಾಲಿಸುತ್ತ ಪಾರ್ಟಿಹಾಲ್ ಒಂದರ ಬಳಿ ಬಂದರು. ಹೊರಗೆ ಕಾಯುತ್ತ ನಿಂತರು. ರಾತ್ರಿ ಹನ್ನೊಂದು ದಾಟಿರಬಹುದು. ಕಿಂಗ್ಸ್‌ಫೋರ್ಡನ ಸಾರೋಟು ಅತ್ತ ಕಡೆಯಿಂದ ಮರಳಿ ಬಂತು. ಹುಡುಗರಿಗೆ ತಡೆಂiiಲಾರದ ಖುಷಿ. ತಾವು ಅಂದುಕೊಂಡಿದ್ದನ್ನು ಸಾಧಿಸುವ ಮಹತ್ತ್ವದ ಕ್ಷಣಗಳು ಬಂದೇಬಿಟ್ಟವೆಂಬ ಆನಂದ. ಆ ಆನಂದದಲ್ಲಿ ಬಾಂಬೆಸೆದು ಕಿಂಗ್ಸ್‌ಫೋರ್ಡನನ್ನು ಹತ್ಯೆಗೈಯುವ ಭರದಲ್ಲಿ ಒಳಗಿರುವವ ಅವನೇ ಹೌದೋ ಅಲ್ಲವೋ ಎಂಬುದನ್ನೂ ಪರೀಕ್ಷಿಸದೆ ಬಾಂಬೆಸೆದುಬಿಟ್ಟರು. ದುರ್ದೈವವಶಾತ್ ಕಿಂಗ್ಸ್‌ಫೋರ್ಡನ ಸಾರೋಟಿನಂಥದೇ ಮತ್ತೊಂದಿತ್ತು, ಮತ್ತು ಅದರಲ್ಲಿ ಮಹಿಳೆಯರಿಬ್ಬರು ಕುಳಿತು ಬರುತ್ತಿದ್ದರು. ಅವರು ಈ ಬಾಂಬಿಗೆ ಆಹುತಿಯಾ ಗಿಬಿಟ್ಟರು. ಕೆಲಸ ಮುಗಿದೊಡನೆ ಈ ಇಬ್ಬರು ಹುಡುಗರು ವಿರುದ್ಧ ದಿಕ್ಕುಗಳಲ್ಲಿ ಓಡಲಾರಂಭಿಸಿದರು. ಓಡುವಾಗ ಚಪ್ಪಲಿಗಳು ತೊಂದರೆ ಕೊಟ್ಟೀತೆಂದು ಅವನ್ನು ಅಲ್ಲಿಯೇ ಬಿಟ್ಟು ಧಾವಿಸಿದರು. ಈ ಚಪ್ಪಲಿಗಳ ಮೂಲಕವೇ ಪೋಲಿಸರಿಗೆ ಹುಡುಗರ ವಯಸ್ಸು ಅಂದಾಜು ಮಾಡಿ ಪತ್ತೆಹಚ್ಚಲು ಸಾಧ್ಯವಾಯಿತು. ಬೇಣಿಗಾಂವ್‌ನಲ್ಲಿ ಖುದೀರಾಮ ಸಿಕ್ಕಿಬಿದ್ದ. ಸಮಸ್ತಿಪುರದಲ್ಲಿ ಪ್ರಫುಲ್ಲಚಂದ್ರ ಚಾಕಿಯನ್ನು ನಂದಲಾಲ ಬ್ಯಾನರ್ಜಿ ಹಿಡಿದುಕೊಂಡ. ಕೊಸರಿಕೊಂಡು ಓಡಿದ ಆ ಬಾಲಕ ತನ್ನ ಮೇಲೆ ತಾನೇ ಗುಂಡುಹಾರಿಸಿಕೊಂಡು ಪ್ರಾಣಬಿಟ್ಟ. ಸಿಡಿದ ಮೊದಲ ಬಾಂಬ್ ಭಾರತವನ್ನೆ ಅಲುಗಾಡಿಸಿತ್ತು.  ಇನ್ನು ಬ್ರಿಟಿಷರಿಗೆ ಉಳಿಗಾಲವಿಲ್ಲ ಎಂಬುದನ್ನು ವಿಶ್ವಾಸದಿಂದ ಹೇಳುವಂತಾಗಿತ್ತು.
ಇತ್ತ ಖುದಿರಾಮನಿಗೆ ನೇಣುಶಿಕ್ಷೆ ಘೋಷಣೆಯಾದರೆ, ಇಡಿಯ ದೇಶ ಕಣ್ಣೀರಿಡುತ್ತಿತ್ತು. ಜೈಲರನಿಗಾದರೋ ಖುದಿರಾಮನ ಮೇಲೆ ಪ್ರೀತಿ ಹುಟ್ಟಿಬಿಟ್ಟಿತ್ತು. ನೇಣಿಗೇರಿಸುವ ಮುನ್ನಾದಿನ ಅವನಿಗೊಂದು ಮಾವಿನಹಣ್ಣು ತಂದುಕೊಟ್ಟು ನನಗಾಗಿ ಇದನ್ನು ತಿನ್ನುತ್ತೀಯಾ? ಎಂದು ಕೇಳಿದ. ಖುದೀರಾಮ, ‘ಪಕ್ಕದಲ್ಲಿಟ್ಟುಹೋಗಿ’ ಎಂದುತ್ತರಿಸಿದ. ಮಾರನೆಯ ದಿನ ಜೈಲರ್ ಬಂದಾಗ ಹಣ್ಣು ಹಾಗೇ ಇತ್ತು. ಯಾಕೆ ತಿನ್ನಲಿಲ್ಲ ಎಂದು ವಿಚಾರಿಸಿದಾಗ ಖುದೀರಾಮ್, ‘ಸಾಯುವ ಕ್ಷಣದಲ್ಲಿ ಆ ಹಣ್ಣು ತಿನ್ನುವುದಾದರೂ ಹೇಗೆ?’ ಎಂದು ಮುಖ ಸಣ್ಣಮಾಡಿಕೊಂಡ. ಜೈಲರನ ಕಣ್ಣಾಲಿಗಳು ತುಂಬಿಬಂದವು. ‘ಆ ಮಾವಿನ ಹಣ್ಣು ನನಗೆ ಪ್ರಸಾದವಾಗಿರಲಿ’ ಎಂದು ಅದನ್ನು ತೆಗೆದುಕೊಳ್ಳಹೋದರೆ ಅದರೊಳಗಿನ ರಸವಷ್ಟನ್ನೂ ಹೀರಿ ಗಾಳಿ ತುಂಬಿಸಿಟ್ಟಿದ್ದು ಕಂಡುಬಂತು. ಜೈಲರ್ ಬೆಪ್ಪಾಗಿದ್ದು ನೋಡಿ ಖುದಿರಾಮ್ ಚಪ್ಪಾಳೆತಟ್ಟಿ ನಕ್ಕ. ‘ಮಾವಿನಹಣ್ಣು ಚೆನ್ನಾಗಿತ್ತು. ಧನ್ಯವಾದ’ ಎನ್ನುತ್ತ ನೇಣುಗಂಬದ ಬಳಿ ನಡೆದೇಬಿಟ್ಟ. ಆಮೇಲೆ ವಂದೇಮಾತರಂ ಎಂಬ ಘೋಷಣೆಯಷ್ಟೆ ಕೇಳಿದ್ದು. ಹದಿನೆಂಟರ ಪೋರ ನಗುನಗುತ್ತ ನೇಣುಗಂಬಕ್ಕೇರಿದ. ಅತ್ತ ಕ್ರಾಂತಿಕಾರಿಗಳು ಪ್ರಫುಲ್ಲ ಚಾಕಿಯ ಸಾವಿಗೆ ಕಾರಣನಾದ ನಂದಲಾಲ್ ಬ್ಯಾನರ್ಜಿಯನ್ನು ನಡುರಸ್ತೆಯಲ್ಲಿ ಕೊಂದುಹಾಕಿದರು.
ಒಳಗಿನ ಕೃತಘ್ನರು
ಬಹಳಬಾರಿ ಹಾಗೆಯೇ ಆಗಿದ್ದು. ಆಂಗ್ಲ ಅಧಿಕಾರಿಗಳನ್ನು ಮೆಚ್ಚಿಸಲೆಂದು ಭಾರತೀಯ ಅಧಿಕಾರಿಗಳೇ ಅತ್ಯಂತ ಕ್ರೂರಿಗಳಾಗಿ ವರ್ತಿಸಿದ್ದರ ಪರಿಣಾಮವಾಗಿ ನಾವು ತೊಂದರೆ ಸಿಲುಕಿಕೊಂಡೆವು. ಒಂದು ವೇಳೆ ನಮ್ಮ ಅಧಿಕಾರಿಗಳು, ಸೈನಿಕರು ನಮ್ಮ ಪರವಾಗಿ ನಿಂತುಬಿಟ್ಟಿದ್ದರೆ, ಇಷ್ಟೆಲ್ಲ ಕದನದ ಅನಿವಾರ್ಯತೆಯೇ ಇರುತ್ತಿರಲಿಲ್ಲ. ಕ್ರಾಂತಿಕಾರಿಗಳೇನೂ ಕಡಿಮೆ ಇರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ನಿಂತ ಪ್ರತಿಯೊಬ್ಬನನ್ನೂ ಅವರು ಮಟ್ಟ ಹಾಕಿಯೇಹಾಕಿದರು.
ಅಲಿಪುರದ ಜೈಲಿನಲ್ಲೂ ಹಾಗೆಯೇ ಆಗಿತ್ತು. ಬಾಂಬ್ ತಯಾರಿಕೆ ಮಾಡುವಾಗ ಸಿಕ್ಕಿಬಿದ್ದ ಅನೇಕ ಕ್ರಾಂತಿಕಾರಿಗಳ ಪೈಕಿ ಅನಂತ, ಪ್ರಮೋದ ಹರಿರಂಜನ್ ಪ್ರಮುಖರು. ಜೈಲಿನ ಸೂಪರಿಡೆಂಟ್ ಆಫ್ ಪೋಲಿಸ್ ಭೂಪೇಂದ್ರನಾಥ ಚಟರ್ಜೀ ಅತ್ಯಂತ ಕ್ರೂರಿಯಾಗಿದ್ದ. ಕ್ರಾಂತಿಕಾರಿಗಳ ಗುಂಪನ್ನು ಒಡೆದು, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ಜೈಲಿನೊಳಗಿಂದಲೇ ಕ್ರಾಂತಿಕಾರಿ ಗೆಳೆಯರು ಚಟರ್ಜೀಯನ್ನು ಮುಗಿಸಿಬಿಡುವ ಯೋಜನೆ ತಯಾರಿಸಿದರು.
ಅಂದು ಸಂಜೆ ಚಟರ್ಜೀ ಸಾಹೇಬ ಜೈಲಿನ ಸೆಲ್‌ಗಳ ಬಳಿ ಬರುವ ವೇಳೆಗೆ ಸರಿಯಾಗಿ ಹರಿರಂಜನ್, ಒಣಹಾಕಿದ್ದ ಬಟ್ಟೆಯನ್ನು ತರಲು ಮರೆತುಬಿಟ್ಟೆ ಎಂದು ಕಾವಲಿನವನಿಗೆ ಹೇಳಿದ. ಆತ ಬೀಗ ತೆರೆದರೆ, ಒಳಗಿನಿಂದ ಐವರು ಕ್ರಾಂತಿಕಾರಿಗಳು ಹೊರಬಂದರು. ಅವರಲ್ಲೊಬ್ಬ ಕಾವಲಿನವನ ಬಾಯಿ ಗಟ್ಟಿಯಾಗಿ ಒತ್ತಿನಿಂತ. ಇಬ್ಬರು ಎರಡೂ ದಿಕ್ಕಿಗೆ ಕಾವಲುನಿಂತರು. ಮತ್ತಿಬ್ಬರು ಕೈಯಲ್ಲಿ ಕಬ್ಬಿಣದ ಸಲಾಕೆಗಳನ್ನು ಹಿಡಿದು ಚಟರ್ಜೀಯನ್ನು ಚೆನ್ನಾಗಿ ಥಳಿಸಿದರು. ಆತ ರಕ್ತದ ಮಡುವಲ್ಲಿ ಬಿದ್ದು ಕೊನೆಯುಸಿರೆಳೆದ. ಕ್ರಾಂತಿಮಿತ್ರರು ರಕ್ತದ ಕಲೆಗಳನ್ನು ಚೆನ್ನಾಗಿ ತೊಳೆದು, ನೀರು ಚೆಲ್ಲಿದರೆ ಗೊತ್ತಾದೀತೆಂದು ಅದನ್ನು ಕುಡಿದುಬಿಟ್ಟರು! ಸುದ್ದಿ ಬಾಯ್ಬಿಟ್ತರೆ ನಿನಗೂ ಇದೇ ಗತಿಯಾದೀತೆಂದು ಕಾವಲಿನವನಿಗೆ ಬೆದರಿಸಿದರು. ಆತ ಅವರನ್ನೆಲ್ಲ ಒಳಬಿಟ್ಟು ಕೀಲಿ ಹಾಕಿ ಗಂಟೆ ಬಾರಿಸಿ ಎಲ್ಲರನ್ನು ಸೇರಿಸಿದ. ಕ್ರೂರಿ ಚಟರ್ಜಿ ಸೂಕ್ತ ಸಾವು ಕಂಡಿದ್ದ. ಅವನ ಪ್ರಾಣ ತೆಗೆದವರು ಮಾತ್ರ ಅಮಾಯಕರಂತೆ ಸೆಲ್‌ನಲ್ಲಿ ನಿಂತಿದ್ದರು. ಹುಡುಕಿದರೂ ಒಂದು ಗುರುತು ಕೂಡ ಸಿಗದೆ ಬಿಳಿಯರ ಸಮೂಹ ನಿರಾಶವಾಯ್ತು.
ಇದೇ ರೀತಿಯ ಮತ್ತೊಂದು ಘಟನೆ ಸತ್ಯೇಂದ್ರನಾಥ ಬಸು ಮತ್ತು ಕನಯ್ಯಾಲಾಲರದು. ಅಲಿಪುರ ಬಾಂಬ್ ಮೊಕದ್ದಮೆಯಲ್ಲಿ ಸಿಕ್ಕಿಬಿದ್ದ ನರೇಂದ್ರ ಗೋಸ್ವಾಮಿ ಮಾಫಿ ಸಾಕ್ಷಿಯಾಗಿ ಕ್ರಾಂತಿಕಾರಿಗಳ ಗುಟ್ಟನ್ನೆಲ್ಲ ಬಾಯಿಬಿಡತೊಡಗಿದ. ಇದರಿಂದಾಗಿ ಅನೇಕ ಯುವಕರು ಪೋಲಿಸರ ಕೈಸೇರುವಂತಾಯ್ತು ಕೃದ್ಧರಾದ ಸತ್ಯೇಂದ್ರ ಮತ್ತು ಕನಯ್ಯಾಲಾಲರು ದ್ರೋಹಿಗೆ ಪಾಠ ಕಲಿಸುವ ಉಪಾಯ ಮಾಡಿದರು. ಹುಷಾರಿಲ್ಲವೆಂದು ನಾಟಕ ಮಾಡಿ ಆಸ್ಪತ್ರೆಗೆ ಸೇರಿಕೊಂಡರು. ನರೇಂದ್ರನ ಬದಿಯಲ್ಲೆ ಜಾಗ ಪದೆದುಕೊಂಡು ತಾವೂ ಮಾಫಿಸಾಕ್ಷಿಗಳಾಗುವೆವೆಂದರು. ನರೇಂದ್ರನ ಜೊತೆ ಗೆಳೆತನ ಗಟ್ಟಿಮಾಡಿಕೊಂಡರು. ಸಮಯ ನೋಡಿ ಪಿಸ್ತೂಲು ಸಂಪಾದಿಸಿಕೊಂಡ ಸತ್ಯೇಂದ್ರ, ಕನ್ಹಯ್ಯಾ ಇಬ್ಬರೂ ಕಾವಲಿನವರು ಮೈಮರೆತಿದ್ದಾಗ ನರೇಂದ್ರನ ಮೇಲೆ ಮುಗಿಬಿದ್ದರು. ಅಷ್ಟರಲ್ಲೆ ಎಚ್ಚೆತ್ತ ಕಾವಲುಗಾರರು ಸತ್ಯೇಂದ್ರನನ್ನು ಗಟ್ಟಿಯಾಗಿ ಹಿಡಿದುಕೊಂಡರು. ಕೊಸರಾಡುತ್ತಲೆ ಆತ ಮತ್ತೊಂದು ಗುಂಡು ಹಾರಿಸಿದ. ಅದೂ ಗುರಿತಪ್ಪಿತು. ಈಗ ಕನ್ಹಯ್ಯಾ ನರೇಂದ್ರನ ಹಿಂದೆ ಒಡಿದ. ಅವನ ಪಿಸ್ತೂಲಿನ ಗುಂಡು ನರೇಂದ್ರನ ಕಾಲು ಹೊಕ್ಕಿತು. ಆತ ಕೂಡಲೇ ಅವಿತುಕೊಂಡ. ಕನ್ಹಯ್ಯಾಲಾಲನ ಕಂಗಳು ನಿಗಿನಿಗಿ ಕೆಂಡವಾಗಿದ್ದವು. ಯಾರೂ ಹತ್ತಿರ ಸುಳಿಯುವ ಸಾಹಸ ಮಾಡಲಿಲ್ಲ. ‘ಎಲ್ಲಿ ನರೇಂದ್ರ?’ ಅನ್ನುವ ಅವನ ಗುಡುಗಿಗೆ ಬೆದರಿದ ಆಸ್ಪತ್ರೆಯ ಕೆಲಸದವನೊಬ್ಬ ಕಣ್ಸನ್ನೆ ಮಾಡಿ ಆತ ಅವಿತಿರುವ ಜಾಗ ತೋರಿದ. ಕನ್ಹಯ್ಯಾಲಾಲನ ಪಿಸ್ತೂಲಿನಿಂದ ಗುಂಡು ಸರಸರನೆ ಹಾರಿದವು. ಸತ್ಯೇಂದ್ರನೂ ಸೇರಿಕೊಂಡ. ನರೇಂದ್ರ ಗೋಸ್ವಾಮಿಯ ದೇಹ ಛಿದ್ರಛಿದ್ರವಾಯಿತು. ಅವನು ಸತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಗೆಳೆಯರಿಬ್ಬರೂ ಪೋಲಿಸರಿಗೆ ಶರಣಾದರು. ಅಂದಿನ ದಿನ ಮಹತ್ವದ ಸಾಕ್ಷಿ ಹೇಳಬೇಕಿದ್ದ ಗೋಸ್ವಾಮಿ ಕ್ರಾಂತಿಕಾರಿಗಳ ಕೆಚ್ಚಿಗೆ ಆಹುತಿಯಾದ. ಮರುದಿನ ಪತ್ರಿಕೆಗಳು ‘ದ್ರೋಹಿಗೆ ತಕ್ಕ ಶಿಕ್ಷೆ’ ಅನ್ನುವ ಶಿರೋನಾಮೆಯಡಿ ಆ ಸುದ್ದಿಯನ್ನು ಪ್ರಕಟಿಸಿದವು. ನಿರೀಕ್ಷೆಯಂತೆ ಇಬ್ಬರಿಗೂ ಗಲ್ಲುಶಿಕ್ಷೆ ಘೋಷಣೆಯಾಯ್ತು. ಸಾಯುವ ನಾಲ್ಕು ದಿನಗಳ ಮುನ್ನ ಕನ್ಹಯ್ಯಾಲಾಲನಿಗೆ ಬಿ.ಎ ಪದವಿ ಸಿಕ್ಕಿತ್ತು. ಅದರ ಬಗ್ಗೆ ಕೆಳಿದಾಗ ಕನ್ಹಯ್ಯಾ, ‘ಆ ಪದವಿಯನ್ನೂ ನನ್ನೊಂದಿಗೆ ನೆಣಿಗೇರಿಸಿ’ ಅಂದಿದ್ದನಂತೆ. ನೇಣಿಗೇರಿಸುವ ದಿನ ‘ಅಮ್ಮ ಅಳುವುದಿಲ್ಲ ಅಂದರೆ ಮಾತ್ರ ಆಕೆಯನ್ನು ಭೇಟಿಮಾಡುವೆ’ ಎಂದಿದ್ದ ಧೀರಪುತ್ರ ಅವನು.
ಮನ್ನಣೆ ಪಡೆಯದ ಇತಿಹಾಸ
ನಮ್ಮ ಇತಿಹಾಸದ ಪುಟಗಳು ಈ ಕ್ರಾಂತಿವೀರರ ಹೆಸರಿಲ್ಲದೆ ಭಣಭಣ. ಜಗತ್ತಿನ ಇತಿಹಾಸ ವೀರ ಶೂರರ ಇತಿಹಾಸವಲ್ಲದೆ ಮತ್ತ್ತೆನಲ್ಲ. ಹೀಗಾಗಿಯೇ ‘ವೀರಭೋಗ್ಯಾ ವಸುಂಧರಾ’ ಎನ್ನುವುದು. ಒಂದಷ್ಟು ದಿನಗಳ ಕಾಲ ನರಿಗಳು ರಾಜ್ಯವಾಳಿದಂತೆ ಕಂಡರೂ ಅಂತಿಮವಾಗಿ ಧರೆ ವೀರಕೇಸರಿಗಳ ಕೈಸೇರುವ ಆಸ್ತಿಯೇ. ಪ್ರತಿ ರಾಷ್ಟ್ರದ ಜವಾಬ್ದಾರಿಯೂ ಅಂತಹ ಶೂರರ ನಿರ್ಮಾಣ ಮಾಡುವುದೇ ಆಗಿದೆ. ಯಾವ ರಾಷ್ಟ್ರ ಮಹಾಪುರುಷರ ನಿರ್ಮಾಣ ಮಾಡುವುದರಲ್ಲಿ ಸೋಲುವುದೋ ಆ ರಾಷ್ಟ್ರ ಕಾಲಕ್ರಮೇಣ ನಾಶವಾಗುವುದು ಖಂಡಿತ.
ಹೇಳಿ, ವೀರರ ಕಥೆಗಳನ್ನು ಹೇಳದೆ ವೀರರ ನಿರ್ಮಾಣ ಸಾಧ್ಯವೆ? ನಾವು ನಡೆದುಬಂದಿರುವ ದುರ್ಗಮ ಹಾದಿಯ ನೆನಪು ಮಾಡಿಕೊಡದೆ, ಮುಂದಿನ ಕಷ್ಟದ ದಿನಗಳಿಗೆ ಮನಸ್ಸನ್ನು ಅಣಿಗೊಳಿಸುವುದು ಶಕ್ಯವೇ?
ಇಂದು ಭಾರತ ಎದುರು ನೋಡುತ್ತಿರುವ ಸಮಸ್ಯೆಗಳು ಪಾಕಿಸ್ತಾನದ್ದೋ ಚೀನಾದ್ದೋ ಅಲ್ಲ. ಆರ್ಥಿಕ ಹಿಂಜರಿತದ್ದೋ ದಿವಾಳಿಯಾಗುತ್ತಿರುವ ಬ್ಯಾಂಕ್‌ಗಳದ್ದೋ ಅಲ್ಲ. ಭ್ರಷ್ಟಾಚಾರದ್ದೋ ನೈತಿಕ ಅಧಃಪತನದ್ದೋ ಕೂಡ ಅಲ್ಲ. ಅದು ಗುಲಾಮೀ ಮಾನಸಿಕತೆಯದ್ದು ಮಾತ್ರ.
ಒಬ್ಬ ಗುಲಾಮ ಮಾತ್ರ ಇತರರನ್ನು ಕೆಳತಳ್ಳಿ ತಾನು ಮೇಲಕ್ಕೆ ಬರುವ ಯತ್ನ ಮಾಡುತ್ತಾನೆ. ಆತ ಮಾತ್ರ ತನ್ನ ಮಕ್ಕಳು ಮೊಮ್ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುತ್ತಾನೆ. ಆತ ಮಾತ್ರ ಸಮಾಜ, ದೇಶದ ಚಿಂತನೆ ಬಿಟ್ಟು ಸ್ವಂತದ ಆಲೋಚನೆ ಮಾಡುತ್ತ ಉಳಿಯುತ್ತಾನೆ. ಪ್ರವಾಹ ಬಂದಾಗ ದೇಶಕ್ಕೆ ನಿಷ್ಠನಾದ ವ್ಯಕ್ತಿ ನೀರು ಹೋಗಲು ದಾರಿ ಹುಡುಕಿ ಎಲ್ಲರನ್ನೂ ಉಳಿಸುವ ಯತ್ನ ಮಾಡಿದರೆ, ಗುಲಾಮ ತನ್ನ ಮಗನನ್ನು ತುಳಿದು, ತಾನು ಬದುಕುವುದು ಹೇಗೆ ಅನ್ನುವ ಯೋಚನೆ ಮಾಡುತ್ತಾನೆ. ಭಾರತೀಯರನ್ನು ಇಂತಹ ಗುಲಾಮರನ್ನಾಗಿಸಬೇಕೆಂಬ ಪ್ರಯತ್ನ ಆಂಗ್ಲರದಾಗಿತ್ತು. ನಮ್ಮ ಜನ ಆಂಗ್ಲ ಶಿಕ್ಷಣದೊಂದಿಗೆ ಆಂಗ್ಲ ಮಾನಸಿಕತೆಯನ್ನೂ ತಮ್ಮದಾಗಿಸಿಕೊಂಡರು. ಇದನ್ನು ಕಂಡೇ ವಿವೇಕಾನಂದರು ‘ಯಾರು ಇತರರಿಗೋಸ್ಕರ ಬದುಕುತ್ತಾರೋ ಅವರು ಮಾತ್ರ ಬದುಕುತ್ತಾರೆ, ಉಳಿದವರು ಬದುಕಿರುವುದಕ್ಕಿಂತ ಹೆಚ್ಚು ಸತ್ತಂತೆಯೇ’ ಎಂದಿದ್ದು.
ಈಗ ಭಾರತದ ಮುಂದಿರುವ ಆದರ್ಶ ಎರಡೇ. ಒಂದು, ತ್ಯಾಗದ್ದು. ಮತ್ತೊಂದು, ಸೇವೆಯದು. ಉನ್ನತ ಆದರ್ಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಸಾಮರ್ಥ್ಯ, ಜೊತೆಗೆ ಸಹಜೀವಿಗಳ ನೋವಿಗೆ ಮರುಗಿ ಅವರ ಕಣ್ಣೀರೊರೆಸುವ ಸೇವಾಮನೋಭಾವ- ಇವನ್ನು ನಮ್ಮ ಪೂರ್ವಿಕರ ಜೀವನ ವಿವರಗಳಿಂದ ಹೆಕ್ಕಿ ಅಳವಡಿಸಿಕೊಳ್ಳಬೇಕು. ಅಷ್ಟಾಗಿಬಿಟ್ಟರೆ, ಭಾರತ ಜಾಗತಿಕ ಶಕ್ತಿಯಾಗಿ ಮೆರೆಯುವುದನ್ನು ತಡೆಯುವ ಸಾಮರ್ಥ್ಯ ಯಾರಿಗೂ ಇರುವುದಿಲ್ಲ.

ಚಕ್ರವರ್ತಿ ಸೂಲಿಬೆಲೆಯ ಮೇ ತಿಂಗಳ ಕಾರ್ಯಕ್ರಮಗಳು

Posted in ಕಾರ್ಯಕ್ರಮ- ವರದಿ by yuvashakti on ಮೇ 3, 2010

ಚಕ್ರವರ್ತಿ ಸೂಲಿಬೆಲೆಯವರ ಕಾರ್ಯಕ್ರಮಗಳ ಲಿಸ್ಟ್ ಅನ್ನು ನೀಡಲಾಗಿದೆ. ಅವರ ಬಿಡುವಿನ ದಿನಗಳ ಬಗ್ಗೆ ವಿಚಾರಿಸುತ್ತಿರುವವರಿಗೆ ಅನುಕೂಲ ಮಾಡಿಕೊಡುವುದಷ್ಟೆ ಇದರ ಉದ್ದೇಶ.

ಮೇ ೧  – ಬೆಂಗಳೂರು-  ವಿಶ್ವಮಾನವ ವಿವೇಕಾನಂದ; ಏಕವ್ಯಕ್ತಿ ಪ್ರದರ್ಶನ

ಮೇ ೫  –  ಸುಳ್ಯ

ಮೇ ೬  –  ಮಂಜೇಶ್ವರ-  ಜಾಗೋ ಭಾರತ್

ಮೇ ೭  –  ಅಥಣಿ-  ಮೋಟಗಿಮಠ

ಮೇ ೯ರಿಂದ ೧೫  –  ಶಿವಮೊಗ್ಗ ಶಿಬಿರ

ಮೇ  ೨೨  –  ಬೆಂಗಳೂರು; ಸ್ವಾಮಿ ರಾಮತೀರ್ಥ ಫೌಂಡೇಶನ್; ಸ್ವಾಮಿ ರಾಮತೀರ್ಥರ ಕುರಿತು ಉಪನ್ಯಾಸ

ಮೇ ೨೩  –  ಕೂಡ್ಲಿಗಿ; ಸಂತ ಸಮಾವೇಶ

ಮೇ ೨೭  –  ಬೆಂಗಳೂರು; ಹಾಸ್ಟೆಲ್ ಕಾರ್ಯಕ್ರಮ

ರಾಷ್ಟ್ರಶಕ್ತಿ ಅಂದರೆ…

Posted in ಸಂವಾದ by yuvashakti on ಮಾರ್ಚ್ 26, 2010
ಬಹಳ ದಿನಗಳಾದವು. ಈ ನಡುವೆ ಜಾಗೋ ಭಾರತ್ ನೂರನೆ ಕಾರ್ಯಕ್ರಮದ ಮೇಲೆ ಹನ್ನೆರಡು ಕಾರ್ಯಕ್ರಮಗಳು ನಡೆದವು. ಚಕ್ರವರ್ತಿಯವರು ಕೃಷ್ಣದೇವರಾಯ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಇಸ್ಲಾಮ್ ಮೂಲಭೂತವಾದದ ಮೂಲ ಸೆಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಪುಸ್ತಕ ಬರೆಯಲಿದ್ದಾರೆ. ಇತಿಹಾಸ ಹೀಗೂ ಇದೆ ಅನ್ನುವುದು ತಿಳಿಯಬೇಕಾದರೆ ಈ ಕೃತಿಗಳ ಅಗತ್ಯವಿದೆ. ಅವು ಆದಷ್ಟು ಬೇಗ ಬರಲಿ ಎಂಬುದು ರಾಷ್ಟ್ರ ಶಕ್ತಿ ಕೇಂದ್ರದ ಅಪೇಕ್ಷೆ.
ಜೊತೆಗೆ ಮತ್ತಷ್ಟು ಸಮಾಜಮುಖಿ ಯೋಜನೆಗಳಿವೆ. ಈ ವರ್ಷದಲ್ಲಿ ಕಾರ್ಯಗತಗೊಳ್ಳಬೇಕಾದ ಪಟ್ಟಿ ಸಿದ್ಧವಿದೆ. ಕಾಲಕ್ರಮದಲ್ಲಿ ಎಲ್ಲವೂ ಸಾಧ್ಯವಾಗಬಹುದು.
ಖುಷಿಯ ವಿಷಯವೆಂದರೆ, ಜಾಗೋ ಭಾರತ್ ಆಶಯಗಳಿಗೆ ಯುವಕರ ಸ್ಪಂದನೆ. ಅದು ಉನ್ಮತ್ತ ಆರಾಧನೆಯಲ್ಲ. ಅಲ್ಲಿ ತೂಗಿ ನೋಡುವ ವೈಚಾರಿಕತೆಯಿದೆ. ಹಾಗಿಲ್ಲದೆ ಜಾತಿ-ಪಂಥ-ಭಾಷೆ ಭೇದವಿಲ್ಲದೆ ಜನರು ಜಾಗೋಭಾರತ್ ಗೆ ಒಲಿಯುತ್ತಿರಲಿಲ್ಲ. ಗೆಳೆಯರೊಬ್ಬರು ಕೇಳಿದ್ದರು, ‘ನೀವು ಜಾಗೋ ಭಾರತ್ ಮಾಡ್ತೀರಿ, ಜಾಗೋ ಮುಸ್ಲಿಮ್, ಜಾಗೋ ದಲಿತ್ ಎಲ್ಲ ಯಾಕೆ ಮಾಡಲ್ಲ’ ಅಂತ! ನಾನು ಹೇಳಿದೆ, ‘ನಮ್ಮ ಭಾರತದಲ್ಲಿ ದಲಿತರೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ನಾವು ಸೌಹಾರ್ದದ ಹೆಸರಲ್ಲಿ ನಡುವಿನ ಅಂತರವನ್ನು ಎತ್ತೆತ್ತಿ ತೋರಿಸುತ್ತ ಖಾಯಂ ಬಿರುಕಿಗೆ ಆಸ್ಪದ ಕೊಡುವಂಥವರಲ್ಲ’ ಎಂದು. ಸರಿಯಾಗಿದೆ ಅಲ್ಲವೆ?
ಜಾಗೋ ಭಾರತ್ ಆಶಯವೂ ಇದೇ. ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಭಾರತ ಮುನ್ನಡೆಯುತ್ತದೆ. ರಾಷ್ಟ್ರಶಕ್ತಿ ಅಂದರೆ ಈ ಸೀಮೆಯೊಳಗಿನ ಪ್ರತಿಯೊಬ್ಬನ ಶಕ್ತಿ. ಅದನ್ನು ಹಿಡಿದಿಡುವ ಕೇಂದ್ರ ದೇಶಪ್ರೇಮ.
ನಮ್ಮೊಂದಿಗಿರಿ.
ಇರುತ್ತೀರಲ್ಲ?
ಪ್ರೀತಿಯಿಂದ,
ರಾ.ಶ.ಕೇಂದ್ರ ಬಳಗ

ಪ್ರೀತಿಯಿಂದ,ರಾ.ಶ.ಕೇಂದ್ರ ಬಳಗ

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು

Posted in ಕಾರ್ಯಕ್ರಮ- ವರದಿ by yuvashakti on ಮಾರ್ಚ್ 26, 2010
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟ
ಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆ
ಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳ
ಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರು- ಗೋಖಲೆ ಇನ್ಸ್ಟಿಟ್ಯೂಟ್- ಸಂಜೆ ೫ರಿಂದ
ಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರುಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ

ಉಳಿದೇ ಹೋಯಿತು ಒಂದಷ್ಟು ಪ್ರಶ್ನೆಗಳು . . !

Posted in ಚಕ್ರವರ್ತಿ ಅಂಕಣ by yuvashakti on ಮಾರ್ಚ್ 6, 2010

ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ  ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?

– ಚಕ್ರವರ್ತಿ ಸೂಲಿಬೆಲೆ

ಅಂತೂ ಅಂದುಕೊಳ್ಳದಿದ್ದುದು ಆಗಿಯೇ ಹೋಯಿತು. ಕನ್ನಡ ಪ್ರಭದಲ್ಲಿ ಬಂದ ತಸ್ಲೀಮಾ ನಸ್ರೀನಳ ಲೇಖನದ ಅನುವಾದ ಶಿವಮೊಗ್ಗ-ಹಾಸನಗಳಲ್ಲಿ ಬೆಂಕಿಯ ಕಿಡಿಯನ್ನು ಹೊತ್ತಿಸಿತು. ಈದ್ ಮಿಲಾದ್ ಮಾರನೆಯ ದಿನ ಹದಿನೈದು ಸಾವಿರಕ್ಕೂ ಹೆಚ್ಚು ಕ್ರುದ್ಧ ಮುಸಲ್ಮಾನರು ಒಂದೆಡೆ ಸೇರಿ, ಈ ವಿಚಾರವನ್ನು ಚರ್ಚಿಸಿ ಗಲಾಟೆ ಮಾಡುವಷ್ಟು ಸಮಯ ದಕ್ಕಿತಾದರೂ ಹೇಗೆ? ಯರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ..
ಲೇಖನ ಬಂದಿದ್ದು ಒಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ. ಅದನ್ನು ಬರೆದವಳು ಒಬ್ಬ ಜಗತ್ಪ್ರಸಿದ್ಧ ಲೇಖಕಿ. ಒಟ್ಟಾರೆ ಬರಹ ಇಷ್ಟವಾಗದಿದ್ದರೆ ಆ ಪತ್ರಿಕೆಯ ಸಂಪಾದಕರೊಂದಿಗೋ, ಅಥವಾ ಮುಕ್ತವಾಗಿಯೋ ಚರ್ಚಿಸಬೇಕಾದದ್ದು ರೀತಿ. ಅದನ್ನು ಬಿಟ್ಟು ಸಾಮೂಹಿಕ ಪ್ರತಿಭಟನೆಗಿಳಿದದ್ದಲ್ಲದೇ, ದಾರಿಯುದ್ದಕ್ಕೂ ಹಿಂದೂ ಅಂಗಡಿಗಳಿಗೆ ಬೆಂಕಿ ಇಟ್ಟು ಕಂಡ-ಕಂಡವರನ್ನು ಚೂರಿಯಿಂದ ಇರಿಯುತ್ತ ಸಾಗಿದ್ದನ್ನು ಯಾವ ಸಭ್ಯ ಸಮಾಜ ಸ್ವೀಕಾರಮಾಡಬಲ್ಲದು ಹೇಳಿ? (ಶಾಲೆಯ ಮಕ್ಕಳ ಮೇಲೆ ಕಲ್ಲು ಹೊಡೆದಿದ್ದನ್ನು ಮಾತ್ರ ಅಲ್ಲಾಹನೂ ಕ್ಷಮಿಸಲಾರ)
ಹಾಗಂತ ಇದು ಇದೇ ಮೊದಲಲ್ಲ. ಹಿಂದೊಮ್ಮೆ ಹುಬ್ಬಳಿಯಲ್ಲಿ ಮೆರವಣಿಗೆ ಹೊರಟಿದ್ದ ಮುಸಲ್ಮಾನರು ಮೈಮೇಲೆ ಭೂತ ಹೊಕ್ಕಂತೆ ಬದಿಯಲ್ಲಿದ್ದ ಅಂಗಡಿಗಳನ್ನೆಲ್ಲ ಹಿಂದೂಗಳ ಅಂಗಡಿ ಎನ್ನುವ ಕಾರಣಕ್ಕೇ ನಾಶ ಮಾಡುತ್ತ ಸಾಗಿದ್ದನ್ನು ಮರೆಯಬಹುದೇನು? ಪಾಪ್ಯುಲರ್ ಫ್ರಂಟ್ ಬೆಂಗಳೂರಿನಲ್ಲಿ ಯಾತ್ರೆ ಹೊರಟು ಶಿವಾಜಿನಗರದಲ್ಲಿ ಅಲ್ಲೋಲ-ಕಲ್ಲೋಲವೆಬ್ಬಿಸಿದ್ದನ್ನು ಪತ್ರಿಕೆಗಳೆಲ್ಲ ವರದಿ ಮಾಡಿದ್ದವಲ್ಲ? ಇದು ಚೆನ್ನಾಯ್ತು. ನಮ್ಮ ಗಣೇಶನ ಮೆರವಣಿಗೆಯನ್ನು ನಾವು ಮಸೀದಿಯ ಮುಂದೆ ಒಯ್ಯಬಾರದು, ಹಾಗೆಯೇ ಅವರೇನಾದರೂ ಗುಂಪು ಕಟ್ಟಿಕೊಂಡು ನಮ್ಮೆದುರು ಬಂದರೆ ಆಗಲೂ ನಾವು ಅಂಗಡಿ-ಮನೆ ಬಾಗಿಲುಗಳನ್ನು ಮುಚ್ಚಿಕೊಂಡು ಕೂರಬೇಕು. ಅಂದರೆ… ಅಂದರೆ… ಅವರು ಬಡಿದರೂ, ಕೊಳಕು ಪದಗಳಲ್ಲಿ ನಿಂದಿಸಿದರೂ ಸುಮ್ಮನಿರಬೇಕಾದ್ದು ನಾವೇ! ವಾವ್.
ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಹೀಗೆಯೇ ಇತ್ತು. ಬಾಬರ್-ಅಕ್ಬರರೂ ಭಿನ್ನವಾಗಿರಲಿಲ್ಲ. ಹಿಂದುವಾಗಿ ಹುಟ್ಟಿದ ತಪ್ಪಿಗೆ ನಾವು ತೆರಿಗೆ (ಜೇಸಿಯಾ) ಕಟ್ಟಬೇಕಿತ್ತು. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾನರದೇ ಆಗಿತ್ತು. ಹಿಂದು ಹಬ್ಬಗಳು ಮುಕ್ತವಾಗಿ ನಡೆಯುವಂತಿರಲಿಲ್ಲ, ಹಿಂದೂ ಹೆಣ್ಣುಮಕ್ಕಳು ಮುಸಲ್ಮಾನರಂತೇ ಬದುಕಬೇಕಿತ್ತು. ಅವರು ಬುರ್ಖಾ ಧರಿಸಿ ನಡೆಯದೇ ಹೋದರೆ ಸ್ವಭಾವತಃ ಪೋಕರಿಯಾಗಿರುವ ಮುಸಲ್ಮಾನ ಪುಂಡ ಅವಳನ್ನು ಹಾರಿಸಿಕೊಂಡು ಹೋಗುತ್ತಿದ್ದ. ಹಿಂದೂ ಬಾಯ್ಮುಚ್ಚಿಕೊಂಡು ಇರಬೇಕಿತ್ತು ಅಷ್ಟೇ!
ಈಗ ತಾಳೆ ನೋಡಿ. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾರದೇ ಎಂದು ಸಾಚಾರ್ ಸಮಿತಿ ವರದಿ ಮಂಡಿಸಿಯಾಗಿದೆ. ಮುಸಲ್ಮಾನರನ್ನು ಓಲೈಸಲೆಂದೇ ಅದಾಗಲೇ ನಮ್ಮ ತೆರಿಗೆಯ ಹಣವನ್ನು ಅವರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಎನ್ನುವ ಏಜೆಂಟ್ ನಿಯತತಾಗಿ ಮಾಡುತ್ತಿದೆ. ಇಂದು ಹಿಂದು ಹೆಣ್ಮಕ್ಕಳ ಅಪಹರಣ ಲವ್ ಜಿಹಾದ್ ಎನ್ನುವ ಹೆಸರಲ್ಲಿ ಅವ್ಯಾಹತವಾಗಿಯೇ ನಡೆದಿದೆ. ಕಂಡಕಂಡಲ್ಲಿ ಮುಸಲ್ಮಾನ ಪೋಕರಿಗಳು ಮಾಡುತತಿರುವ ಅಟಾಟೋಪವನ್ನು ಕಂಡು ಹಿಂದು ಯುವಕ ಬಾಯ್ಮುಚ್ಚಿಕೊಂಡು ಇರಲೇಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆ ಈಗಲೂ ಔರಂಗಜೇಬನ ಆತ್ಮ ಮನಮೋಹನಸಿಂಗರ ರೂಪದಲ್ಲಿ ದೇಶವನ್ನು ಆಳುತ್ತಿದೆ ಎಂದರೆ ತಪ್ಪಾಗುವುದೇನು?
ಬಿಡಿ. ಈಗ ವಿಚಾರಕ್ಕೆ ಬನ್ನಿ. ಮಾಧ್ಯಮಗಳ ಕೆಲಸ ಇರೋದೇ ತಪ್ಪುತ್ತಿರುವ ಸಮಾಜವನ್ನು ಸರಿಯಾದ ಹಾದಿಗೆ ತರೋದು. ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ  ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?
ನಮ್ಮ ಮಾಧ್ಯಮಗಳದ್ದೂ ಒಂದು ದೋಷವಿದೆ. ಯಾರು ಸ್ವೀಕರಿಸುತ್ತಾರೋ ಅವರ ಮೇಲೆ ಗೂಬೆ ಕೂರಿಸುತ್ತಾ ಸಾಗುವುದು. ಯಾರು ಮುರಿದು ಬೀಳುತ್ತಾರೋ ಅವರನ್ನು ಕಂಡು ಬಾಯ್ಮುಚ್ಚಿಕೊಂಡಿರುವುದು! ಬಜರಂಗಿಗಳ-ಸಂಘದ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡುವ ಪತ್ರಿಕಾ ಪ್ರಪಂಚದ ದಿಗ್ಗಜರು ಈ ಬಾರಿ ಅದೇಕೋ ಮೌನಕ್ಕೆ ಶರಣಾಗಿದ್ದರು. ಮಾತನಾಡಿದರೆ ತಮ್ಮ ಕಛೇರಿಗೂ ಕಲ್ಲು ಬಿದ್ದೀತೆಂಬ ಭಯ ಅವರಿಗೆ! ಈ ಭಯದ ಕಾರಣದಿಂದಾಗಿ ಸತ್ಯ ಹೇಳದೇ ಬಾಯ್ಮುಚ್ಚಿಕೊಂಡಿರುವವರಿಗೆ ಪತ್ರಿಕಾಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ ಹೇಳಿ? ಮುಸ್ಲೀಂ ಹೆಣ್ಣುಮಕ್ಕಳನ್ನು ಬೆಳಕಿಗೆ ತರಬಲ್ಲಂತಹ ಒಂದೇ-ಒಂದು ಕೆಲಸ ಆಗಿತ್ತು ಆದರೆ ಅದಕ್ಕೆ ಸರಿಯಾದ ಬೆಂಬಲ ಸಿಗಲೇ ಇಲ್ಲ. ಬುರ್ಖಾದ ಒಳಗೆ, ಅಸಹ್ಯಕರ ಬದುಕು ನಡೆಸುತ್ತಿರುವ ಆ ತುಳಿತಕ್ಕೊಳಗಾದ ಹೆಣ್ಣುಮಕ್ಕಳ ಬೆಂಬಲಕ್ಕೆ ಇನ್ನು ಯಾರು ನಿಲ್ಲುವಂತೆಯೇ ಇಲ್ಲ. ಸಮಾಜದ ಒಳಿತಿನ ದೃಷ್ಟಿಯಿಂದ ಇದು ಸರಿಯೇ? ಪೈಗಂಬರರು ಅರಬ್‌ನಲ್ಲಿ ವಾಸಿಸುವ ಜನರಿಗೆಂದು ಹೇಳಿದ ಮಾತುಗಳನ್ನು, ಆಚರಣೆಗಳನ್ನು ಭೌಗೋಳಿಕ ದೃಷ್ಟಿಯಿಂದಲಾದರೂ ಬದಲಾಯಿಕೊಳ್ಳಬೇಕೆಂಬ ವಿವೇಕವನ್ನು ಯಾರೂ ತಿಳಿಹೇಳುವುದು ಬೇಡವೇ?
ಅದೆಲ್ಲಾ ಸರಿ. ಎಮ್.ಎಫ್.ಹುಸೇನ್ ಸಾಹೇಬರು ನನಗೆ ವ್ಯಕ್ತಿಸ್ವಾತಂತ್ರ್ಯವನ್ನು ಭಾರತ ನಿರಾಕರಿಸಿದೆ ಎಂದು ತಾವು ಬರೆದ ಭಾರತಮಾತೆಯ ನಗ್ನಚಿತ್ರಗಳನ್ನು ಸಮರ್ಥಿಸಿಕೊಂಡಿಸಿದ್ದನ್ನು ಮಾಧ್ಯಮಗಳು ಅಷ್ಟೆಲ್ಲಾ ವೈಭವೀಕರಿಸುತ್ತಿವೆಯಲ್ಲಾ? ಹಾಗಾದರೆ ಕನ್ನಡಪ್ರಭದಲ್ಲಿ ಲೇಖನ ಬರೆದವರಿಗೆ ವ್ಯಕ್ತಿ ಸ್ವಾತಂತ್ರ್ಯವಿಲ್ಲವೇನು? ಇದರ ಬಗ್ಗೆ ಚರ್ಚೆಯೇ ಬೇಡವೇನು? ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ಕೊಡಲು ಹಿಂದೆ-ಮುಂದೆ ನೋಡಿದ ಸರ್ಕಾರಗಳು ಹುಸೇನ್‌ಸಾಹೇಬರನ್ನು ಕರೆಸಿಕೊಳ್ಳಲಿಕ್ಕೆ ಮಾತ್ರ ದುಂಬಾಲುಬೀಳುತ್ತಿವೆಯಲ್ಲ! ಏನಿದೆ ಇದರ ಹಿಂದಿನ ಮರ್ಮ? ಇದನ್ನು ಪ್ರಶ್ನಿಸಬೇಕೆಂದು ಯಾವ ಸೆಕ್ಯುಲರ್ ಭೂತಕ್ಕೂ ಅನಿಸೋದೇ ಇಲ್ಲವಲ್ಲ, ಏಕೆ ಹೀಗೆ?
ಶಿವಮೊಗ್ಗದಲ್ಲಿ ಅವತ್ತು ಬಜರಂಗದಳದ ಸೈನಿಕರು ಇಲ್ಲದೇ ಹೋಗಿದ್ದರೆ ಗತಿಯೇನು? ಅವರ ಹದಿನೈದು ಸಾವಿರಕ್ಕೆ ಪ್ರತಿಯಾಗಿ ಇವರು ನಾಲ್ಕೈದು ಸಾವಿರವಾದರೂ ಸೇರಿದಕ್ಕೆ ಎದುರುಮಂದಿ ಸ್ವಲ್ಪ ಅಳುಕಿದ್ದಾರೆ. ಇಲ್ಲವಾದಲ್ಲಿ ಇಡಿಯ ಶಿವಮೊಗ್ಗವನ್ನೇ ಅವರು ಆಪೋಶನ ತೆಗೆದುಕೊಂಡುಬಿಡುತ್ತಿದ್ದರು. ಆಮೇಲೆ ಪತ್ರಿಕೆಯೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ. ಹಾಸನದಲ್ಲಿ ಹೀಗೇ ಆಗಲಿ… ಆಮೇಲೆ ನೋಡಿ, ದೇವೇಗೌಡರ ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗುವ ಕನಸು ಈ ಜನ್ಮದಲ್ಲಿಯೇ ನನಸಾಗಿಬಿಡುತ್ತದೆ.
ಇವತ್ತು ಗಾಂಧಿಜಿಯ ಶವ ಮಗ್ಗಲು ಬದಲಿಸಿರಲಿಕ್ಕೆ ಸಾಕು. ಅವರೇ ಹೂತಿಟ್ಟ ತುಷ್ಟೀಕರಣದ ಬೀಜ ಇಂದು ಆಲದಮರವಾಗಿ ಬೆಳೆದು ನಿಂತಿದೆ. ಅದರಡಿಯಲ್ಲಿ ಇನ್ನು ಯಾರೂ ಬೆಳೆಯುವಂತಿಲ್ಲ. ಗಾಂಧೀಜಿ ಇದನ್ನು ಅವತ್ತೇ ಅರಿತಿದ್ದರೆ ಇಂದು ನಾವು ನೆಮ್ಮದಿಯ ನಿದ್ದೆಯನ್ನಾದರೂ ಮಾಡಿರುತ್ತಿದ್ದೆವು. ಕೊನೆಯ ಪಕ್ಷ ದೇಶ ವಿಭಜನೆಯಾದಾಗಲಾದರೂ ಅವರಿಗೆ ಪರಿಸ್ಥಿತಿಯ ಅರಿವಾಗಬೇಕಿತ್ತು. ಅಂಬೇಡ್ಕರರು ಅವತ್ತೇ ಹೇಳಿದ್ದರು ’ಶತ್ರುವನ್ನು ದೇಶದ ಒಳಗಿಟ್ಟು ಸಾಕುವುದು ಒಳಿತೋ, ಹೊರಗಟ್ಟಿ ಮೆಟ್ಟುವುದು ಒಳಿತೋ?’ ಊಹೂಂ. ಯಾರೂ ಅವರ ಮಾತನ್ನು ಕೇಳುವ ಗೋಜಿಗೇ ಹೋಗಿರಲಿಲ್ಲ. ಮೊದ ಮೊದಲು ದ್ವಿ ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ಸಾವರ್ಕರರೂ ಈ ಮಾತಿಗೆ ತಲೆದೂಗಿ ಅದನ್ನು ಒಪ್ಪಿಕೊಂಡರು. ಆದರೆ ಕಾಂಗ್ರೆಸ್ಸಿಗರು ಮಾತ್ರ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅಂಬೇಡ್ಕರರನ್ನೇ ಅಭಿವೃದ್ಧಿವಿರೋಧಿ ಎಂಬಂತೆ ಬಿಂಬಿಸಲಾಯಿತು. ಮೇಲ್ವರ್ಗದವರಲ್ಲಿ ಇಂದಿಗೂ ಈ ಭಾವನೆ ಉಳಿದುಬಿಟ್ಟಿದೆ. ಆದರೆ ಆ ಮನುಷ್ಯನ ದೂರದೃಷ್ಟಿಯ ಒಂದಂಶವೂ ಆಗಿನ ನಾಯಕರಲ್ಲಿಲ್ಲದಿದ್ದುದು ದೌರ್ಭಾಗ್ಯ!
ಮುಂದೆ ದೇಶವಿಭಜನೆಯೂ ಆಗಿಹೋದಾಗ, ಪಾಕಿಸ್ಥಾನಕ್ಕೆ ಬಯಸಿ ಹೋದ ಇಲ್ಲಿನ ಮುಸಲ್ಮಾನರ ಗೋಳು ಹೇಳತೀರದಾಯಿತು. ಅವರಿಗೆ ಅಲ್ಲಿ ದಕ್ಕಿದ್ದು ಎರಡನೇ ದರ್ಜೆಯ ನಾಗರಿಕರ ಸ್ಥಾನ-ಮಾನಗಳು ಮಾತ್ರ. ಹೀಗಾಗಿಯೇ ನೊಂದ ಪಂಜಾಬ್ ಪ್ರಾಂತ್ಯದ ಲಕ್ಷಾಂತರ ಮುಸಲ್ಮಾನರು ಹಿಂದುತ್ವದೆಡೆಗೆ ಬರಲು ಸಿದ್ಧರಾದಾಗ ಸಾವರ್ಕರರು ಅನಂದಿತರಾದರು, ಶತಮಾನದ ದಾಸ್ಯದ ನೊಗ ಕಳಚಿತೆಂಬ ಸಂಭ್ರಮ ಒಂದೆಡೆ ಅವರಿಗೆ. ಆದರೆನು? ಆಚಾರ್ಯ ಪಟ್ಟಕ್ಕೇರಿಬಿಟ್ಟಿದ್ದ ವಿನೋಬಾರ ಸೆಕ್ಯುಲರ್ ಅಂತರಾತ್ಮ ಜಾಗೃತವಾಗಿಬಿಟ್ಟಿತು. ಅವರು ಪರಾವರ್ತನಕ್ಕೆ ಸಿದ್ಧರಾಗಿದ್ದವರಿಗೆ ಬುದ್ಧಿವಾದದ ಮಾತುಗಳನ್ನು ಹೇಳಿ ಸಮಾಧಾನ ಮಾಡಿ ಹಿಂದುತ್ವಕ್ಕೆ ಬರುವುದನ್ನು ತಡೆಗಟ್ಟಿಯೆ ಬಿಟ್ಟರು! ಅಲ್ಲಿಗೆ ಭಾರತ ನಾಶದ ಸಮಗ್ರ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಗಾಂಧಿ ಅನುಯಾಯಿಗಳ ಪ್ರಯತ್ನಕ್ಕೆ ಮೊದಲ ಠಸ್ಸೆ ಬಿದ್ದಿತ್ತು. ಆ ಯೋಜನೆಯ ಮುಂದಿನ ಹಂತಗಳು ಈಗ ಕಾರ್ಯರೂಪಕ್ಕೆ ಬರುತ್ತಿವೆ ಅಷ್ಟೇ.
ಇಂದು ಗಾಂಧೀಜಿ ಕಟಕಟೆಯಲ್ಲಿದ್ದಾರೆ. ನಾಳೆ ಕನ್ನಡಪ್ರಭ! ಇತಿಹಾಸ ಯಾರನ್ನೂ ಪ್ರಶ್ನಿಸದೇ ಬಿಡುವುದಿಲ್ಲ. ಒಬ್ಬರು ವಿಷಬೀಜ ಬಿತ್ತಿದರು ಮತ್ತೊಬ್ಬರು ಹೆದರಿಕೆಯಿಂದಾಗಿಯೇ ಸತ್ಯದಿಂದ ದೂರ ಸರಿದರು. ಪ್ರಶ್ನೆ ಪ್ರಶ್ನೆಯೇ. ಉತ್ತರಿಸಲು ಸಿದ್ಧರಿರಬೇಕು, ಇಂದಲ್ಲ-ನಾಳೆ.

ಯುವ ದಿನದ ಹಿನ್ನೆಲೆಯಲ್ಲಿ…

Posted in ಚಕ್ರವರ್ತಿ ಅಂಕಣ by yuvashakti on ಜನವರಿ 14, 2010
ಮತ್ತೆ ಬಂತು ಸ್ವಾಮಿ ವಿವೇಕಾನಂದರ ಜಯಂತಿ.
ಈಗ ಎಲ್ಲೆಲ್ಲೂ ಅವರ ಫೋಟೋ ಇಟ್ಟು ಜಯಂತಿ ಆಚರಿಸುವ ಪರಿಪಾಠ ವ್ಯಾಪಕವಾಗಿಬಿಟ್ಟಿದೆ. ಎಂದಿನಂತೆ ಅದೇ ಗೋಳು. ಅವರನ್ನು ಮರೆತೇ ಬಿಟ್ಟಿದ್ದಾಗ ವಿವೇಕಾನಂದರ ಜಯಂತಿಯನ್ನು ಆಚರಿಸುವುದಿಲ್ಲವಲ್ಲಪ್ಪ ಎಂದು ಗೋಳಿಡುತ್ತಿದ್ದೆವು. ಕಳೆದ ವರ್ಷ ಸರ್ಕಾರವೇ ಅವರನ್ನು ನೆನಪಿಸಿಕೊಂಡು ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ ನಂತರ ಈಗ ಎಲ್ಲೆಲ್ಲೂ ವಿವೇಕಾನಂದರೇ ವಿವೇಕಾನಂದರು. ಈಗಲೂ ನಮ್ಮ ಗೋಳು ತಪ್ಪಿಲ್ಲ ಬರೀ ಫೋಟೋ ಇಟ್ಟರಾಯಿತೇ? ಅವರ ಚಿಂತನೆಗೆ ತೆರೆದುಕೊಳ್ಳೋದು ಬೇಡ್ವೇ?
ಒಂದಂತೂ ಸತ್ಯ. ಗೋಳಿಡುವವರು ಅದೆಷ್ಟೇ ನೊಂದುಕೊಂಡರೂ ಭಾರತವನ್ನು, ಸರಿಯಾಗಿ ಗಮನಿಸಿದರೆ ಜಗತ್ತನ್ನೂ ತನ್ನ ಚಿಂತನೆಗಳಿಂದ ಅಲುಗಾಡಿಸಿದ ಮಹಾಸಂತ ಸ್ವಾಮಿ ವಿವೇಕಾನಂದ ಎಂಬುದರಲ್ಲಿ ಸಂಶಯವೇ ಇಲ್ಲ. ಸಂತರುಗಳ ಪರಂಪರೆಯೇ ನಮ್ಮಲ್ಲಿ ಆಗಿ ಹೋಗಿದ್ದರೂ ಸ್ವಾಮಿ ವಿವೇಕಾನಂದರು ಪಡೆಯುವ ಸ್ಥಾನ ಅಪರೂಪದ್ದೇ.. ಹೀಗೇಕೆ?
ವಿದೇಶಕ್ಕೆ ಹೋಗಿ ಮಾನ್ಯರಾದ್ದರಿಂದ ಎನ್ನುವುದಾದರೆ, ವಿವೇಕಾನಂದರ ನಂತರ ಅದೆಷ್ಟು ಸಂತರು ವಿದೇಶದ ನೆಲದಲ್ಲಿ ಓಡಾಡಿ, ಭಾರತದ ಹಿರಿಮೆ-ಗರಿಮೆಯನ್ನು ಸಾರಿ ಜಯಭೇರಿ ಬಾರಿಸಿ ಬರಲಿಲ್ಲ ಹೇಳಿ? ಚಿಂತನೆಗಳ ಪ್ರಖರತೆ ಎನ್ನುವುದಾದರೆ, ವಿವೇಕಾನಂದರು ಹೇಳಿದ್ದೇನೂ ಹಿಸತಲ್ಲ ಎಂಬುದನ್ನು ನಿನಪಿನಲ್ಲಿಡಬೇಕು. ನಾನು ಉಪನಿಷತ್ತಿನದನ್ನು ಬಿಟ್ಟರೆ ಮತ್ತೇನನ್ನೂ ಹೇಳಿಯೇ ಇಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಏನದು? ಸ್ವಾಮಿ ವಿವೇಕಾನಂದ ಎಂದೊಡನೆ ನಮ್ಮನ್ನು ಸೆಳೆಯುವ ಆ ಚುಂಬಕ ಶಕ್ತಿ ಯವುದದು?
ಅದೊಂದು ಪರಿಪೂರ್ಣ ಪ್ಯಾಕೇಜ್. ಮಾತಿಗೆ ತಕ್ಕಂತಹ ಆಕೃತಿ, ಅದಕ್ಕೆ ಸೂಕ್ತವಾದ ಘನತೆ, ಅತ್ಯಂತ ಶ್ರೇಷ್ಠ ನಾಡಿನವನು ಎಂಬ ಸಾತ್ವಿಕ ಅಹಂಕಾರದಿಂದ ಉಬ್ಬಿದ ಎದೆ, ದೀನ-ದಲಿತರಿಗಾಗಿಯೇ ಸದಾ ಮಿಡಿಯುವ ಹೃದಯ, ನೊಂದವರಿಗಾಗಿ ಕಂಬನಿ ಸುರಿಸಲು ಸಿದ್ಧವಿರುವ ಕಣ್ಣುಗಳು, ಕೆಲವೊಮ್ಮೆ ಕೈಲಾಗದ ಹೇಡಿಗಳಿಗಾಗಿ ಕೆಂಡ ಉಗುಳುವ ಅದೇ ಕಂಗಳು, ಮಸ್ತಿಷ್ಕದಲ್ಲಿ ತುಂಬಿ ತುಳುಕಾಡುವ ಜ್ಞಾನ ಸಂಪದ, ಅವಾಜ ಪ್ರೀತಿ, ತಪ್ಪುಗಳನ್ನು ಧಿಕ್ಕರಿಸಿ ಸರಿಯಾದುದನ್ನು ಅಪ್ಪಿಕೊಳ್ಳುವ ಛಾತಿ… ಅದೊಂದು ಅಪರೂಪದ ವ್ಯಕ್ತಿತ್ವ. ಇಪ್ಪತ್ತನೇ ಶತಮಾನದಲ್ಲಿ ಜಗತ್ತನ್ನು ಪ್ರಭಾವಿಸಿದ ವ್ಯಕ್ತಿಗಳು ಯಾರೆಂದು ಕೇಳಿದರೆ ನಿಸ್ಸಂಶಯವಾಗಿ ಈ ವ್ಯಕ್ತಿಯ ಚಿತ್ರ ಎದುರಿಗೆ ನಿಲ್ಲಲೇಬೇಕು.
ಜರ್ಮನಿಯ ಮಹಿಳೆಯೊಬ್ಬಳು ವಿವೇಕಾನಂದರ ಭಾಷಣಗಳನ್ನು ಕೇಳಿ ಅಚ್ಚರಿಗೊಳಗಾಗಿ ಒಂದು ಘಟನೆ ಹೇಳುತ್ತಾಳೆ. ಸ್ವಾಮೀಜಿಯವರ ಉಪನ್ಯಾಸ ಕೇಳಿದ ನಂತರ ಆಕೆ ಅದೊಮ್ಮೆ ಸ್ವಮೀಜಿಯ ಕೈ ಕುಲುಕಿದ್ದಳಂತೆ. ಆನಂತರ ಮೂರು ದಿನಗಳ ಕಾಲ ಆ ಕೈಗೆ ನೀರನ್ನೂ ತಾಕಿಸಿರಲಿಲ್ಲವಂತೆ. ಸ್ವಾಮೀಜಿ ಮುಟ್ಟಿದ ಆ ಫ್ಲೇವರ್ ಆರದಿರಲಿ ಅಂತ! ಈ ತರಹದ ಪ್ರಸಂಗಗಳು ಅದೆಷ್ಟೋ. ಅವರೊಡನೆ ಇರಬೇಕು, ಮಾತು ಕೇಳಬೇಕು, ಮಾತಾಡಬೇಕು ಎಂದು ಭಾವಿಸಿದವರೂ ಅಸಂಖ್ಯರು. ಬದುಕಿರುವಾಗ ಬಿಡಿ, ದೇಹತ್ಯಾಗದ ನಂತರವೂ ಅವರು ಮಾಡುತ್ತಿರುವ ಮೋಡಿ ಅಪರಂಪಾರ. ನೊಬೆಲ್ ಪ್ರಶಸ್ತಿ ಪಡೆದ ರೋಮರೋಲಾಗೆ ರವೀಂದ್ರರು ಹೇಳಿದ್ದರಂತೆ, ‘ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ತಿಳಿಯಬೇಕು. ಆ ಮಾತಿಗೆ ಕಟ್ಟುಬಿದ್ದು ವಿವೇಕಾನಂದರ ಅಧ್ಯಯನಕ್ಕೆ ತೊಡಗಿದ ರೋಮಾರೋಲಾ ‘ಈ ವ್ಯಕ್ತಿಯನ್ನು ಒದಿದರೇನೇ ಎಲೆಕ್ಟ್ರಿಕ್ ಶಾಕ್ ಹೊಡೆದಮತಹ ಅನುಭವ. ಇನ್ನು ಮಾತುಗಳನ್ನು ನೆರವಾಗಿ ಕೆಳಿದವರ ಸ್ಥಿತಿ ಏನಾಗಬೇಡ?  ಎಂದು ಉದ್ಗರಿಸಿದ್ದ.
ಸ್ವಾಮೀಜಿಯವರದು ಅದೊಂಥರ ಡೈನಮಿಕ್ ಚಿಂತನೆ. ಹಳೆಯ ಮೌಲ್ಯಗಳನ್ನು ಚೂರೂ ಮಾಸದಂತೆ ಹೊಸ ಜನರಿಗೆ ತಲುಪಿಸುವುದು ಹೇಗೆಂಬ ಪಾಠವನ್ನು ಅವರಿಂದಲೇ ಕಲಿಯಬೇಕು. ಹಳೆಯ ಆದರ್ಶಗಳನ್ನೇ ಇಟ್ಟುಕೊಂಡು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವ ಅವರ ಕಲ್ಪನೆ ಅಪರೂಪದ್ದು. ಹೀಗಾಗಿಯೇ ಸ್ವಾಮೀಜಿ ತಮ್ಮ ಜೀವನದ ಬಹುಮೂಲ್ಯ ಸಮಯವನ್ನು ವ್ಯಕ್ತಿ ನಿರ್ಮಾಣದ ಚಿಂತನೆಗೆ ಕೊಟ್ಟರು. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ, ಅವರು ಬೆರಳು ತೋರಿಸಿ ಮಾತನಾಡಿದಿದ್ದರೆ ಅದು ವ್ಯಕ್ತಿ ನಿರ್ಮಾಣದ ಬಗೆಗೇ.
‘ಸ್ವಾತಂತ್ರ್ಯವನ್ನು ೨೪ ಗಂಟೆಗಳೊಳಗೆ ಕೊಡಿಸುತ್ತೇನೆ, ಆದರೆ ಆ ಜವಾಬ್ದಾರಿಯನ್ನು ನಿಭಾಯಿಸಬಲ್ಲ ನಿಭಾಯಿಸಬಲ್ಲ ಪುರುಷರೆಲ್ಲಿದ್ದಾರೆ? ಎಂಬಲ್ಲಿ ಅವರ ಕಳಕಳಿಯೂ ಅದೇ. ಬಹುಶಹ ಅವರ ಮಾತುಗಲ ಒಳಾರ್ಥ ಹಿಂದೆಂದಿಗಿಂತಲೂ ಈಗ ನಮಗೆ ಚೆನ್ನಾಗಿ ಆಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ರಂಗಗಳಲ್ಲೂ ವ್ಯಕ್ತಿತ್ವಹೀನರನ್ನು ಕಂಡಾಗ ಸ್ವಾಮೀಜಿಯ ಕಾಳಜಿ ಏನಿತ್ತು ಎಂಬುದು ಕಣ್ಣಿಗೆ ರಾಚುತ್ತದೆ. ಹೀಗೆ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಶತಶತಮಾನಗಳಿಂದ ಅಮರಿಕೊಂಡಿದ್ದ ಗುಲಾಮಿ ಮಾನಸಿಕತೆಯನ್ನು ‘ಆತ್ಮವಿಸ್ಮೃತಿ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಕೊಲಂಬೋದಿಂದ ಆಲ್ಮೊರದವರೆಗೆ ನಿರಂತರ ಪ್ರವಸ ಮಾಡುತ್ತ, ಉದ್ಬೋಧಕರ ಭಾಷಣ ಮಾಡುತ್ತ, ಮಲಗಿರುವ ಆತ್ಮಗಳನ್ನು ಬಡಿದೆಬ್ಬಿಸಿದರು ಸ್ವಾಮೀಜಿ.
ಸ್ವತಃ ಅತ್ಯಂತ ಸ್ವಾಭಿಮಾನದ, ಯಾರಿಗೂ ಬಾಗದ ಬದುಕು ಅವರದು. ಪರಿವ್ರಾಜಕರಾಗಿ ತಿರುಗಾಡುತ್ತಿದ್ದಾಗ, ‘ಊಟವನ್ನೂ ಯರ ಬಳಿ ಬೇಡಲಾರೆ, ಭಗವಂತ ಕೊಟ್ಟರೆ ಉನ್ಣುವೆ ಎಂದು ಹಠ ಹಿಡಿದು ಕುಳಿತವರು. ಸ್ವತಃ ಭಗವಂತನೇ ಸಹಾಯಕ್ಕೆ ಬಂದು ಬೇರೆಬೇರೆ ಮಾರ್ಗಗಳ ಮೂಲಕ ಉಣಿಸಿದ್ದು ಅವರ ಬದುಕಿನಲ್ಲಿ ಕಂಡು ಬರುತ್ತದೆ. ಇಂತಹ ಸ್ವಾಭಿಮಾನಿ ಯುವಕ, ತನ್ನ ದೇಶವಾಸಿಗಳು ನಿರಭಿಮಾನಿಗಳಾಗಿ, ಆಂಗ್ಲರ ಅಡಿಯಾಳಾಗಿ ಕುಳಿತಿದ್ದರು ಅದು ಹೆಗೆ ಸಹಿಸಿಯಾನು ಹೇಳಿ? ಸ್ವಾಮೀಜಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಮೇಲೆ ಇಲ್ಲಿನ ಯುವಕರನ್ನು ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಅವರಲ್ಲಿನ ಪಶ್ಚಿಮದ ಮೋಹದ ಪೊರೆಯನ್ನು ಕಳಚಿ ಬಿಸುಟರು. ಆತ್ಮಹೀನತೆಯಿಂದ ನಿಸ್ತೆಜವಾಗಿದ್ದ ಯುವ ಜನಾಂಗಕ್ಕೆ ಚುರುಕು ಮುಟ್ಟಿಸಿ ಜಾಗೃತಿಯ ಹೊಸ ಪರ್ವ ಬರೆದರು. ಪಶ್ಚಿಮಕ್ಕೆ ಭಾರತ ಯಾವ ನಿಟ್ಟಿನಿಂದಲೂ ಕಡಿಮೆಯಿಲ್ಲವೆಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ವಿದೆಸದ ನೆಲದಲ್ಲಿ ಕ್ರಿಶ್ಚಿಯನ್ ಪಾದ್ರಿಗಳನ್ನು ಎದುರು ಹಾಕಿಕೊಂಡು ಹೆಡೆಮುರಿದುಕಟ್ಟಿದ ಕಥನಗಳಂತೂ ಈಗ ಭಾತರತೀಯರಲ್ಲಿ ಮಿಂಚಿನ ಸಂಚಾರ ಉಂಟುಮಾಡಿತ್ತು. ದೀರಘ ನಿದ್ರೆಯಿಂದ ಹಿಂದೂ ಸಮಾಜ ಮೈ ಕೊಡವಿ ಏಳುವ ಕಾಲ ಬಂದೇಬಿಟ್ಟಿತು. ಅಲ್ಲದೆ ಮತ್ತೆನು? ‘ನನಗೆ ಫುಟ್‌ಬಾಲ್ ಎಂದರೆ ಇಷ್ಟವಾದ ಆಟ. ಏಕೆಂದರೆ ಅಲ್ಲಿ ಪ್ರತಿಯೊಂದು ಕಿಕ್‌ಗೆ ಒಂದು ಕೌಂಂಟರ್ ಕಿಕ್ ಇದೆಯಲ್ಲ, ಅದಕ್ಕೆ ಎನ್ನುವ ಸ್ವಾಮೀಜಿಯವರ ಮಾತು ಗುಲಮೀತನದಲ್ಲಿರುವ, ಆಂಗ್ಲರ ಬೂಟು ನೆಕ್ಕುತ್ತಿದ್ದ ಭಾರತೀಯರಲ್ಲಿ ಚೈತನ್ಯ ಮೂಡಿಸಿದ್ದರಲ್ಲಿ ಅತಿಶಯೀಕ್ತಿ ಖಂಡಿತ ಇಲ್ಲ.
ಆಂಗ್ಲ ಪ್ರಭುತ್ವವು ಸ್ವಾಮೀಜಿಯ ಹಿಂದೆ ಬಿತ್ತು. ಗಲ್ಲಿಗಲ್ಲಿಗಳಲ್ಲೂ ಸ್ವಾಮೀಜಿಯವರನ್ನು ಹಿಂಬಲಿಸುವ ಆಂಗ್ಲ ಗುಪ್ತಚರರನ್ನು ಕಂಡು ಸೋದರಿ ನಿವೇದಿತೆಗೇ ಅಸಹ್ಯವಾಗಿತ್ತು. ಅದರೂ ಅವರು ಸ್ವಾಮೀಜಿಯನ್ನು ಹಿಡಿದು ಜೈಲಿಗೆ ತಳ್ಳುವಂತಿರಲಿಲ್ಲ. ಆತ್ಮವಿಶ್ವಾಸದ ಕುರಿತು ಅವರಾಡಿದ್ದ ಮಾತುಗಳು ಹೊಸತೇನಲ್ಲ. ಅವೆಲ್ಲವೂ ಶಾಸ್ತ್ರಗಳಿಂದ ಸ್ವೀಕರಿಸಿದ್ದಸೇ ಅಗಿತ್ತು. ‘ಅಭೀಃ (ಹೆದರದಿರು) ಎನ್ನುವ ಉಪನಿಷದ್ವಾಕ್ಯವನ್ನು ಅವರು ಪದೇಪದೇ ನೆನಪಿಸುತ್ತಿದ್ದರು. ಹೀಗಾಗಿಯೇ ಅವರಾಡುವ ಮಾತುಗಳು ಕೇಳುಗರಿಗೆ ಸರಿಯಾದ ದಿಕ್ಕು ತೋರಿದರೆ, ಆಳುವ ಸರ್ಕಾರ ಮಾತ್ರ ಅವರನ್ನು ಬಂಧಿಸಲಾಗದೆ ಚಡಪಡಿಸುತ್ತಿತ್ತು.
ಸ್ವಾಮೀಜಿಯವರ ಆ ಸಂದೇಶ ಇಂದು ಭಾರತಕ್ಕೆ ಮತ್ತೆ ಬೇಕಿದೆ. ಅವರ ಸ್ವಾಭಿಮಾನದ, ಆತ್ಮವಿಶ್ವಾಸದ ಕಿಚ್ಚು ನಮಗೂ ತಾಕಬೇಕಿದೆ. ಭಾರತ ಜಗತ್ತಿನ ಯಾವ ರಾಷ್ಟ್ರಗಳಿಗೂ ಕಡಿಮೆಯಿಲ್ಲ ಎನ್ನುವುದನ್ನು ನಾವು ಸಾಬೀತುಪಡಿಸಿ ತೋರಬೆಕಿದೆ. ಭಾರತದ ಕೀರ್ತಿಪತಾಕೆ ಹಾರಾಡದ ಜಾಗವೇ ಇಲ್ಲ ಎಂಬುದು ಜಗತ್ತಿಗೆ ತಿಳಿಯಲು ನಾವು ಶ್ರಮಿಸಬೇಕಿದೆ. ಸ್ವಾಮೀಜಿ ಹೇಳುತ್ತಾರಲ್ಲ, ಭಾರತವೆಂಬ ಹಡಗು ಶತಸತಮಾನಗಳಿಂದ ಜನರನ್ನು ದಡ ಸೇರಿಸುತ್ತಿದೆ. ಈಗ ಈ ಹಡಗಿಗೆ ತೂತು ಬಿದ್ದಿದೆ. ಹಾಗೆಂದು ಅದನ್ನು ಬಯ್ಯುತ್ತ ಕೂತರೆ ಪ್ರಯೋಜನವಿಲ್ಲ. ನಮ್ಮ ರಕ್ತಹರಿಸಿಯಾದರೂ ಈ ತೂತು ಮುಚ್ಚಬೇಕು. ಈ ಮಾತುಗಳಲ್ಲಿನ ಕಳಕಳಿ ಗಮನಿಸಿ. ಬಹುಶಃ ಇನ್ನು ಎಂಟು ಹತ್ತು ಶತಮಾನಗಳವರೆಗಾದರೂ ಈ ಮತಿನ ಬಿಸಿ ತಾಕುತ್ತಲೇ ಇರುತ್ತದೆ. ಇಷ್ಟನ್ನು ಅರಿತು ಸರಿಯಾಗಿ ನಡೆದರೆ ಭಾರತ ಪುರೋಗಾಮಿಯಾಗಲೆಬೇಕು.
ಸ್ವಾಮೀಜಿ  ಬರೀ ಆತ್ಮವಿಶ್ವಾಸ ತುಂಬುವ ಮಾತುಗಲನ್ನಷದಟೆ ಆಡುತ್ತ ಉಳಿಯಲಿಲ್ಲ. ಅಮಥವರಿಗೆ ಮುಂದಿನ ಕೆಲಸಗಳೇನು ಎಂಬುದನ್ನೂ ಹೇಳಿದರು. ಅಸ್ಪೃಶ್ಯತೆಯ ಕೊಳಕು ರಾಡಿಯಲ್ಲಿ ಬಿದ್ದು ಗುದ್ದಾಡುತ್ತಿದ್ದವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟರು. ಮೇಲುಕೀಳು ಬೆದವನ್ನು ಎಲ್ಲರಿಗಿಂತ ಹೆಚ್ಚು ತೋರ್ಪಡಿಸ್ತಿದ್ದ ಕೆರಳವನ್ನು ಹುಚ್ಚರ ಸಂತೆ ಎಂದು ಜರಿದು, ‘ದೀನ ದಲಿತರ ಸೇವೆ ಮಾಡಿ, ಇಲ್ಲವೆ ಸಮುದ್ರಕ್ಕೆ ಬಿದ್ದು ಸಾಯಿರಿ ಎಂಬ ಕಟು ಮಾತುಗಳಿಂದ ಮೆಲ್ವರ್ಗವನ್ನು ತಿವಿದರು. ಸ್ವತಃ ಬದುಕಿನಲ್ಲಿ ಬಡಬಗ್ಗರೊಂದಿಗೆ, ತುಳಿತಕ್ಕೊಳಗಾದವರೊಂದಿಗೆ ನಿಂತು, ಅವರ ಜೀವನ ಮಟ್ಟವನ್ನು ಸುಧಾರಿಸುವ ಯತ್ನವನ್ನು ಸ್ವಾಮೀಜಿ ಮಾಡಿದರು.
ಸ್ವಾಮೀಜಿ ಅದಕ್ಕೇ ಅಷ್ಟೊಂದು ಇಷ್ಟವಾಗೋದು. ಅವರ ಮಾತುಗಳು ಬರಿಯ ಮಾತುಗಳಷ್ಟೇ ಆಗಿರಲಿಲ್ಲ. ಅವು ಕಾರ್ಯ ರೂಪಕ್ಕಿಳಿದ ಸಂತನ ಸಂಕಲ್ಪಗಳಾಗಿದ್ದವು. ಅವರೇ ಹೇಳಿದ್ದಾರಲ್ಲ, ‘ನಾನಾಡಿರುವ ಮಾತುಗಳು ಮುಂದಿನ ಸಾವಿರ ವರ್ಷಗಳವರೆಗೂ ದಾರಿತೋರಬಲ್ಲವು ಅಂತ. ಅವರ ಮಾತುಗಳು ಇಮದಿಗೂ ಸತ್ವಯುತವಾಗಿ ಕಾಣಲು ಅದೆ ಕಾರಣ. ಅನಿಸಿದ್ದನ್ನು ನೇರವಾಗಿ ಹೇಳುವ, ಮಾಡಬೇಕೆನಿಸಿದ್ದನ್ನು ಮಾಡುವ ಅವರ ಆ ಛಾತಿ ಇಂದಿನ ಯುವಜನತೆಗೆ ಪರಮಶ್ರೇಷ್ಠ ಆದರ್ಶ.
ನಾವು ಮಾಡಬೇಕಿರೋದು ಇಷ್ಟೇ. ಅವರು ನಡೆದುತೋರಿದ ಆ ಹಾದಿಯಲ್ಲಿ ಹೆಜ್ಜೆ ಹಾಕುವ ಯತ್ನ ಮಾಡಬೇಕು. ವಿವೇಕಾನಂದರ ಜಯಂತಿಯೆಂದರೆ ಹೂಹಾರ ಹಾಕಿ ಪೂಜಿಸಿ, ಸರ್ಕಾರೀ ಕಾರ್ಯಕ್ರಮ ಎಂಬ ಭಯಭಕ್ತಿಯಿಂದ ಸುಮ್ಮನಾಗಿಬಿಡೋದಲ್ಲ. ಅವರ ಚಿಂತನೆಗಲನ್ನು ಸಾಕ್ಷಾತ್ಕರಿಸಿಕೊಂಡು ಅವರ ಆಶಯಕ್ಕೆ ತಕ್ಕಂತೆ ಬದುಕುವುದು ಇಂದಿನ ಅಗತ್ಯ. ಅದು ಸಾಧ್ಯವಾಗುವುದಾದರೆ, ಆ ಜಯಮತಿಯ ಅಚರ್ಯಣೆಯೂ  ಸಾರ್ಥಕ.
ಹಾಗಾದಲ್ಲಿ, ನಿಮಗಿದೋ, ವಿವೇಕಾನಂದ ಜಯಂತಿಯ ಹಾರ್ದಿಕ ಶುಭ ಕಾಮನೆಗಳು.

ಯುವ ದಿನದ ಶುಭಾಶಯಗಳು

Posted in Uncategorized by yuvashakti on ಜನವರಿ 11, 2010

vishva maanava

ಜನವರಿ 12
ಸ್ವಾಮಿ ವಿವೇಕಾನಂದರ ಜನ್ಮ ದಿನ
ಎಲ್ಲರಿಗೂ ಯುವ ದಿನದ ಶುಭಾಶಯಗಳು