ರಾಷ್ಟ್ರ ಶಕ್ತಿ ಕೇಂದ್ರ

ಯುವ ಶಕ್ತಿ- ರಾಷ್ಟ್ರ ಶಕ್ತಿ

ಯುವ ಶಕ್ತಿ- ರಾಷ್ಟ್ರ ಶಕ್ತಿ

ನಾಲ್ಕೈದು ವರ್ಷಗಳಾಯ್ತು….
ಆತ ಮತ್ತೆ ಮತ್ತೆ ಹೇಳಿಕೊಳ್ತಲೇ ಇದ್ದ. “ಯುವಕರನ್ನೆಲ್ಲ ಒಟ್ಟುಗೂಡಿಸ್ಬೇಕು, ಏನಾದರೂ ಮಾಡಬೇಕು. ಬರೀ ಗೊಣಗುತ್ತ ಕುಳಿತರೆ ತಪ್ಪು ನಮ್ಮದೇ ಆಗುತ್ತೆ! ಎಷ್ಟೆಂದರೂ ಯುವ ಶಕ್ತಿಯೇ ರಾಷ್ಟ್ರದ ಶಕ್ತಿಯಲ್ಲವೆ?”
ಅವನ ಆ ಚಿಂತನೆಯ ಫಲವೇ “ರಾಷ್ಟ್ರ ಶಕ್ತಿ ಕೇಂದ್ರ”. ಹೀಗೊಂದು ಕನಸು ಕಂಡಾತ ಗೆಳೆಯ ಚಕ್ರವರ್ತಿ ಸೂಲಿಬೆಲೆ.

ಇವತ್ತು ರಾಷ್ಟ್ರ ಶಕ್ತಿ ಕೇಂದ್ರದಲ್ಲಿ ಒಟ್ಟಾರೆ ನಲವತ್ತು ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು. ತಮ್ಮ ‘ದುಡಿಮೆ’ಯ ಹೊರತಾಗಿಯೂ ಏನಾದರೂ ‘ಕೆಲಸ’ ಮಾಡಲೇಬೇಕು ಅನ್ನುವ ಕಳಕಳಿಯುಳ್ಳವರು. ಶುರುವಿನಲ್ಲಿ ಎಂಟು ಹತ್ತು ಮಂದಿ ಕೇಂದ್ರದ ಸದಸ್ಯರಾಗಿದ್ದರಷ್ಟೆ. ಈಗ ಅದು ಬೆಳೆದಿದೆ. ಇತರ ಊರುಗಳಲ್ಲಿಯೂ ಮತ್ತಷ್ಟು ಕೇಂದ್ರಗಳನ್ನು ತೆರೆಯುವ ಕೆಲಸ ಇನ್ನಷ್ಟೆ ಆಗಬೇಕಿದೆ.

ರಾಷ್ಟ್ರ ಶಕ್ತಿ ಕೇಂದ್ರ ಮುಖ್ಯವಾಗಿ ಪ್ರೌಢ ಶಾಲಾ ಮಕ್ಕಳನ್ನು ಮತ್ತು ಶಿಕ್ಷಕರನ್ನು ತರಬೇತುಗೊಳಿಸುವ, ಅವರಿಗಾಗಿ ಶಿಬಿರಗಳನ್ನು ನದೆಸುವ ಉದ್ದೇಶ ಹೊಂದಿದೆ. ಆಗ ತಾನೆ ಯೌವನಕ್ಕೆ ಕಾಲಿರಿಸಿದ ಈ ವಿದ್ಯಾರ್ಥಿಗಳನ್ನು ಹದಗೊಳಿಸಿ ಉತ್ತಮ ಚಿಂತನೆಗಳನ್ನು ನೀಡಿದರೆ ಮುಂದಿನ ದಿನಗಳಲ್ಲಿ ಅದು ಉತ್ತಮ ಫಲವನ್ನೇ ನೀಡುತ್ತದೆ ಎನ್ನುವುದು ಚಕ್ರವರ್ತಿಯ ಚಿಂತನೆ. ಈ ನಿಟ್ಟಿನಲ್ಲಿ ಜಿಗಣಿಯಲ್ಲಿ ಕೆಲವು ಶಿಬಿರಗಳು ಈಗಾಗಲೇ ನಡೆದಿವೆ. ಜುಲೈ ಐದರ ಶನಿವಾರ ಕೂಡ ಶಿಕ್ಷಕರ ಶಿಬಿರ ಯಶಸ್ವಿಯಾಗಿ ಪೂರೈಸಿದೆ. ಅದರಲ್ಲಿ ಪಾಲ್ಗೊಂಡ ಶಿಕ್ಷಕರೆಲ್ಲರೂ ಸಾರ್ಥಕ ಭಾವದಿಂದ ತೆರಳಿದ್ದಾರೆ. ಇದು ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು, ತಮ್ಮ ವೃತ್ತಿ ಜೀವನಕ್ಕೂ ವೈಯಕ್ತಿಕ ಪ್ರಗತಿಗೂ ಅತ್ಯುಪಯುಕ್ತ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರಾಷ್ಟ್ರ ಶಕ್ತಿ ಕೇಂದ್ರಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳೇ ಮುಖ್ಯ ಪ್ರೇರಣೆ. ಲವಲವಿಕೆಯಿಂದ ದುಡಿಯುವ ಕೇಂದ್ರದ ಯುವ ಪಡೆ, ಸ್ವಾಮೀಜಿಯವರ ಆಶಯಗಳನ್ನು ಸಾಕಾರಗೊಳಿಸುವ ಭರವಸೆ ಮೂಡಿಸುತ್ತದೆ. ಆದರೆ ಇದು ಮಧ್ಯದಲ್ಲೇ ಆಸಕ್ತಿ ಕಳೆದುಕೊಂಡೋ, ಹತಾಶೆಯಿಂದಲೋ ನಿಲ್ಲುವಂತಾಗಬಾರದು. ಹಾಗೆ ಆಗುವುದೂ ಇಲ್ಲ ಅನ್ನುವ ಖಚಿತತೆ ನನಗಿದೆ.

ನಾನು ರಾಷ್ಟ್ರ ಶಕ್ತಿ ಕೇಂದ್ರವನ್ನು ಅದರ ಮೊಳಕೆಯಿಂದಲೂ ದೂರ ನಿಂತು ನೋಡುತ್ತ ಬಂದಿರುವ ಚಕ್ರವರ್ತಿಯ ಸ್ನೇಹಿತ. ಈ ಸಂಘಟನೆಯಲ್ಲಿ ಪಾಲ್ಗೊಳ್ಳಲು ನನ್ನ ಕೆಲವು ಮಿತಿಗಳು, ಅನರ್ಹತೆಗಳು ಅಡ್ಡಿ. ಹೀಗಾಗಿ ಕೇಂದ್ರದ ಕಾರ್ಯಕ್ರಮ, ಧ್ಯೇಯಗಳನ್ನು ನಿಮಗೆ ತಲುಪಿಸುವ ಹೊಣೆ ಸ್ವ ಇಚ್ಚೆಯಿಂದ ಹೊತ್ತುಕೊಂಡಿದ್ದೇನೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳುವ ಅವಕಾಶವೂ ಇದೆ.

ಈ ನಿಟ್ಟಿನಲ್ಲಿ ಕೆಲಸ ಮಾಡಲಿಚ್ಚಿಸುವ ಹೆಣ್ಣು ಮಕ್ಕಳಿದ್ದರೆ ಮಹಿಳಾ ವಿಭಾಗವನ್ನೂ ಶುರು ಮಾಡಬಹುದು.  ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ಪಾಶ್ಚಾತ್ಯರಂತೆಯೂ ಮನೆಯೊಳಗೆ ಅಪ್ಪಟ ಭಾರತೀಯರಂತೆಯೂ ಕ್ರಿಯಾಶೀಲರಾಗಬೇಕು ಎಂದಿದ್ದಾರೆ ಸ್ವಾಮೀಜಿ. ಅದಕ್ಕಾಗಿ ಯುವತಿಯರನ್ನು ಸಂಘಟಿಸಿ ತರಬೇತಿಗೊಳಿಸುವ ಯೋಚನೆಯಂತೂ ಇದ್ದೇ ಇದೆ.

ಈ ಬ್ಲಾಗಿನಲ್ಲಿ ರಾಷ್ಟ್ರ ಶಕ್ತಿ ಕೇಂದ್ರದ ಕಾರ್ಯ ಕ್ರಮಗಳು- ವರದಿ, ರಾಷ್ಟ್ರೀಯ ವಿಚಾರಗಳು, ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಸಾರಾಂಶಗಳು, ವಿವಿಧ ರಾಷ್ಟ್ರವೀರರ, ಚಿಂತಕರ, ಆಧ್ಯಾತ್ಮಿಕ ಪ್ರಮುಖರ ಜೀವನ ಪರಿಚಯ, ಮತ್ತಿತರ ಪ್ರೇರಣಾದಾಯಿ ಸಂಗತಿಗಳು ಇರಲಿವೆ. ನೀವೆಲ್ಲರೂ ನಮ್ಮ ಈ ಪ್ರಯತ್ನಕ್ಕೆ ಜೊತೆಯಾಗಿರುತ್ತೀರಿ ಎನ್ನುವ ಭರವಸೆ ನನ್ನದು.

7 Responses

Subscribe to comments with RSS.

  1. Ramachandra said, on ಜುಲೈ 10, 2008 at 9:39 ಫೂರ್ವಾಹ್ನ

    anna blog is tooo goooooooooooood…………
    adre kelvan kade swalpa spelling mistakes bitre blog is awesome…….

  2. shrikanthv said, on ಆಗಷ್ಟ್ 31, 2008 at 10:11 ಫೂರ್ವಾಹ್ನ

    ondu salhey
    novu eney madidru yava prayojana aguvudilla endu bavistheney ,
    (eg vivekannada kendra dalli liqure kodivudannu kadmy madallu haluvu program hakkal pattidey antha keli pattey adrey nivu eshtey kastapattaru namma bavi “political” leader galu kudiyavarannu supply maduthalley erutharey )rashtra sarri aggabekkadrey namm politics sari hoggabekku … navu eke ondu hosa paksha katti adannu sari padisabaradu

  3. ramaprasad said, on ಸೆಪ್ಟೆಂಬರ್ 11, 2008 at 3:50 ಅಪರಾಹ್ನ

    Chakravarhti sir can i get your mail ID

  4. yuvashakti said, on ಸೆಪ್ಟೆಂಬರ್ 12, 2008 at 5:08 ಫೂರ್ವಾಹ್ನ

    ನಮಸ್ತೇ ರಾಮ ಪ್ರಸಾದ್,
    ಚಕ್ರವರ್ತಿಯವರ ID: astitvam@gmail.com
    ಅವರು ಕಂಪ್ಯೂಟರ್ ಮುಂದೆ ಕಳೆಯುವ ಸಮಯ ಅತ್ಯಲ್ಪ. ದೂರವಾಣಿ ಸಂಖ್ಯೆ ಬೇಕಿದ್ದಲ್ಲಿ; 0448423963
    – ವಂದೇ.

  5. nanda kishora said, on ಸೆಪ್ಟೆಂಬರ್ 17, 2008 at 1:24 ಅಪರಾಹ್ನ

    i study 2nd bcom in st alloysius college,mangalore.
    class representitive and nss leader of st alloysius college nss wing.ex-ncc cedet of air wing.
    i get a chance to meet chakravarthi sir in youth convention in ramakrishna math, mangalore. i got the website name from him on 11th of this month.

    blog chennagi moodibaruttide.

    article sogasagittu. nanu nimmalli obbanagabahude? rashtra shakti kendrakke serabahude?

  6. ರಾಕೇಶ್ ಶೆಟ್ಟಿ said, on ಅಕ್ಟೋಬರ್ 7, 2008 at 11:15 ಫೂರ್ವಾಹ್ನ

    ನಮಸ್ಕಾರ,
    ನನ್ನ ಹೆಸರು ‘ರಾಕೇಶ್ ಶೆಟ್ಟಿ’ , ಕಲಿತಿರುವುದು ‘ಮೆಕ್ಯಾನಿಕಲ್ ಇಂಜಿನಿಯರಿಂಗ್’ ಕೆಲಸ ‘ಸಾಫ್ಟವೇರ್ ಇಂಜಿನಿಯರ್’.
    ‘ರಾಷ್ಟ್ರ ಶಕ್ತಿ ಕೇಂದ್ರ’ ದ ಉದ್ದೇಶ ಚೆನ್ನಾಗಿದೆ. ನಾನು ‘ರಾಷ್ಟ್ರ ಶಕ್ತಿ ಕೇಂದ್ರ’ದ ಕಾರ್ಯಕರ್ತನಾಗುವ ಬಯಕೆ.
    ಹೇಳಿ ಬರಲೇನು ನಿಮ್ಮೊಂದಿಗೆ….

  7. Shankar.Koujalagi said, on ಅಕ್ಟೋಬರ್ 13, 2008 at 2:07 ಅಪರಾಹ್ನ

    Sir,

    I am unable to sleep the day when i first listening your speech on radio.
    I really wan to be with your whatever it may the problem for all the work and
    Just tell me it is done.

    I am ready to die for nation under your direction sir,

    Munde guri , hende guru sagutirali ranaderra hindu

    I am Shankar.Koujalagi
    Age 22
    A B.Com Graguate from North Karnataka
    presently staying in Banglore and doing CA Course.

    I cherish your speech and need your guidelines for further improvement any kind of help

    Pls do get in touch in this no.9449829409

    Thanking you


ನಿಮ್ಮ ಟಿಪ್ಪಣಿ ಬರೆಯಿರಿ