ರಾಷ್ಟ್ರ ಶಕ್ತಿ ಕೇಂದ್ರ

ಉಳಿದೇ ಹೋಯಿತು ಒಂದಷ್ಟು ಪ್ರಶ್ನೆಗಳು . . !

Posted in ಚಕ್ರವರ್ತಿ ಅಂಕಣ by yuvashakti on ಮಾರ್ಚ್ 6, 2010

ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ  ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?

– ಚಕ್ರವರ್ತಿ ಸೂಲಿಬೆಲೆ

ಅಂತೂ ಅಂದುಕೊಳ್ಳದಿದ್ದುದು ಆಗಿಯೇ ಹೋಯಿತು. ಕನ್ನಡ ಪ್ರಭದಲ್ಲಿ ಬಂದ ತಸ್ಲೀಮಾ ನಸ್ರೀನಳ ಲೇಖನದ ಅನುವಾದ ಶಿವಮೊಗ್ಗ-ಹಾಸನಗಳಲ್ಲಿ ಬೆಂಕಿಯ ಕಿಡಿಯನ್ನು ಹೊತ್ತಿಸಿತು. ಈದ್ ಮಿಲಾದ್ ಮಾರನೆಯ ದಿನ ಹದಿನೈದು ಸಾವಿರಕ್ಕೂ ಹೆಚ್ಚು ಕ್ರುದ್ಧ ಮುಸಲ್ಮಾನರು ಒಂದೆಡೆ ಸೇರಿ, ಈ ವಿಚಾರವನ್ನು ಚರ್ಚಿಸಿ ಗಲಾಟೆ ಮಾಡುವಷ್ಟು ಸಮಯ ದಕ್ಕಿತಾದರೂ ಹೇಗೆ? ಯರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ..
ಲೇಖನ ಬಂದಿದ್ದು ಒಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ. ಅದನ್ನು ಬರೆದವಳು ಒಬ್ಬ ಜಗತ್ಪ್ರಸಿದ್ಧ ಲೇಖಕಿ. ಒಟ್ಟಾರೆ ಬರಹ ಇಷ್ಟವಾಗದಿದ್ದರೆ ಆ ಪತ್ರಿಕೆಯ ಸಂಪಾದಕರೊಂದಿಗೋ, ಅಥವಾ ಮುಕ್ತವಾಗಿಯೋ ಚರ್ಚಿಸಬೇಕಾದದ್ದು ರೀತಿ. ಅದನ್ನು ಬಿಟ್ಟು ಸಾಮೂಹಿಕ ಪ್ರತಿಭಟನೆಗಿಳಿದದ್ದಲ್ಲದೇ, ದಾರಿಯುದ್ದಕ್ಕೂ ಹಿಂದೂ ಅಂಗಡಿಗಳಿಗೆ ಬೆಂಕಿ ಇಟ್ಟು ಕಂಡ-ಕಂಡವರನ್ನು ಚೂರಿಯಿಂದ ಇರಿಯುತ್ತ ಸಾಗಿದ್ದನ್ನು ಯಾವ ಸಭ್ಯ ಸಮಾಜ ಸ್ವೀಕಾರಮಾಡಬಲ್ಲದು ಹೇಳಿ? (ಶಾಲೆಯ ಮಕ್ಕಳ ಮೇಲೆ ಕಲ್ಲು ಹೊಡೆದಿದ್ದನ್ನು ಮಾತ್ರ ಅಲ್ಲಾಹನೂ ಕ್ಷಮಿಸಲಾರ)
ಹಾಗಂತ ಇದು ಇದೇ ಮೊದಲಲ್ಲ. ಹಿಂದೊಮ್ಮೆ ಹುಬ್ಬಳಿಯಲ್ಲಿ ಮೆರವಣಿಗೆ ಹೊರಟಿದ್ದ ಮುಸಲ್ಮಾನರು ಮೈಮೇಲೆ ಭೂತ ಹೊಕ್ಕಂತೆ ಬದಿಯಲ್ಲಿದ್ದ ಅಂಗಡಿಗಳನ್ನೆಲ್ಲ ಹಿಂದೂಗಳ ಅಂಗಡಿ ಎನ್ನುವ ಕಾರಣಕ್ಕೇ ನಾಶ ಮಾಡುತ್ತ ಸಾಗಿದ್ದನ್ನು ಮರೆಯಬಹುದೇನು? ಪಾಪ್ಯುಲರ್ ಫ್ರಂಟ್ ಬೆಂಗಳೂರಿನಲ್ಲಿ ಯಾತ್ರೆ ಹೊರಟು ಶಿವಾಜಿನಗರದಲ್ಲಿ ಅಲ್ಲೋಲ-ಕಲ್ಲೋಲವೆಬ್ಬಿಸಿದ್ದನ್ನು ಪತ್ರಿಕೆಗಳೆಲ್ಲ ವರದಿ ಮಾಡಿದ್ದವಲ್ಲ? ಇದು ಚೆನ್ನಾಯ್ತು. ನಮ್ಮ ಗಣೇಶನ ಮೆರವಣಿಗೆಯನ್ನು ನಾವು ಮಸೀದಿಯ ಮುಂದೆ ಒಯ್ಯಬಾರದು, ಹಾಗೆಯೇ ಅವರೇನಾದರೂ ಗುಂಪು ಕಟ್ಟಿಕೊಂಡು ನಮ್ಮೆದುರು ಬಂದರೆ ಆಗಲೂ ನಾವು ಅಂಗಡಿ-ಮನೆ ಬಾಗಿಲುಗಳನ್ನು ಮುಚ್ಚಿಕೊಂಡು ಕೂರಬೇಕು. ಅಂದರೆ… ಅಂದರೆ… ಅವರು ಬಡಿದರೂ, ಕೊಳಕು ಪದಗಳಲ್ಲಿ ನಿಂದಿಸಿದರೂ ಸುಮ್ಮನಿರಬೇಕಾದ್ದು ನಾವೇ! ವಾವ್.
ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಹೀಗೆಯೇ ಇತ್ತು. ಬಾಬರ್-ಅಕ್ಬರರೂ ಭಿನ್ನವಾಗಿರಲಿಲ್ಲ. ಹಿಂದುವಾಗಿ ಹುಟ್ಟಿದ ತಪ್ಪಿಗೆ ನಾವು ತೆರಿಗೆ (ಜೇಸಿಯಾ) ಕಟ್ಟಬೇಕಿತ್ತು. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾನರದೇ ಆಗಿತ್ತು. ಹಿಂದು ಹಬ್ಬಗಳು ಮುಕ್ತವಾಗಿ ನಡೆಯುವಂತಿರಲಿಲ್ಲ, ಹಿಂದೂ ಹೆಣ್ಣುಮಕ್ಕಳು ಮುಸಲ್ಮಾನರಂತೇ ಬದುಕಬೇಕಿತ್ತು. ಅವರು ಬುರ್ಖಾ ಧರಿಸಿ ನಡೆಯದೇ ಹೋದರೆ ಸ್ವಭಾವತಃ ಪೋಕರಿಯಾಗಿರುವ ಮುಸಲ್ಮಾನ ಪುಂಡ ಅವಳನ್ನು ಹಾರಿಸಿಕೊಂಡು ಹೋಗುತ್ತಿದ್ದ. ಹಿಂದೂ ಬಾಯ್ಮುಚ್ಚಿಕೊಂಡು ಇರಬೇಕಿತ್ತು ಅಷ್ಟೇ!
ಈಗ ತಾಳೆ ನೋಡಿ. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾರದೇ ಎಂದು ಸಾಚಾರ್ ಸಮಿತಿ ವರದಿ ಮಂಡಿಸಿಯಾಗಿದೆ. ಮುಸಲ್ಮಾನರನ್ನು ಓಲೈಸಲೆಂದೇ ಅದಾಗಲೇ ನಮ್ಮ ತೆರಿಗೆಯ ಹಣವನ್ನು ಅವರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಎನ್ನುವ ಏಜೆಂಟ್ ನಿಯತತಾಗಿ ಮಾಡುತ್ತಿದೆ. ಇಂದು ಹಿಂದು ಹೆಣ್ಮಕ್ಕಳ ಅಪಹರಣ ಲವ್ ಜಿಹಾದ್ ಎನ್ನುವ ಹೆಸರಲ್ಲಿ ಅವ್ಯಾಹತವಾಗಿಯೇ ನಡೆದಿದೆ. ಕಂಡಕಂಡಲ್ಲಿ ಮುಸಲ್ಮಾನ ಪೋಕರಿಗಳು ಮಾಡುತತಿರುವ ಅಟಾಟೋಪವನ್ನು ಕಂಡು ಹಿಂದು ಯುವಕ ಬಾಯ್ಮುಚ್ಚಿಕೊಂಡು ಇರಲೇಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆ ಈಗಲೂ ಔರಂಗಜೇಬನ ಆತ್ಮ ಮನಮೋಹನಸಿಂಗರ ರೂಪದಲ್ಲಿ ದೇಶವನ್ನು ಆಳುತ್ತಿದೆ ಎಂದರೆ ತಪ್ಪಾಗುವುದೇನು?
ಬಿಡಿ. ಈಗ ವಿಚಾರಕ್ಕೆ ಬನ್ನಿ. ಮಾಧ್ಯಮಗಳ ಕೆಲಸ ಇರೋದೇ ತಪ್ಪುತ್ತಿರುವ ಸಮಾಜವನ್ನು ಸರಿಯಾದ ಹಾದಿಗೆ ತರೋದು. ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ  ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?
ನಮ್ಮ ಮಾಧ್ಯಮಗಳದ್ದೂ ಒಂದು ದೋಷವಿದೆ. ಯಾರು ಸ್ವೀಕರಿಸುತ್ತಾರೋ ಅವರ ಮೇಲೆ ಗೂಬೆ ಕೂರಿಸುತ್ತಾ ಸಾಗುವುದು. ಯಾರು ಮುರಿದು ಬೀಳುತ್ತಾರೋ ಅವರನ್ನು ಕಂಡು ಬಾಯ್ಮುಚ್ಚಿಕೊಂಡಿರುವುದು! ಬಜರಂಗಿಗಳ-ಸಂಘದ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡುವ ಪತ್ರಿಕಾ ಪ್ರಪಂಚದ ದಿಗ್ಗಜರು ಈ ಬಾರಿ ಅದೇಕೋ ಮೌನಕ್ಕೆ ಶರಣಾಗಿದ್ದರು. ಮಾತನಾಡಿದರೆ ತಮ್ಮ ಕಛೇರಿಗೂ ಕಲ್ಲು ಬಿದ್ದೀತೆಂಬ ಭಯ ಅವರಿಗೆ! ಈ ಭಯದ ಕಾರಣದಿಂದಾಗಿ ಸತ್ಯ ಹೇಳದೇ ಬಾಯ್ಮುಚ್ಚಿಕೊಂಡಿರುವವರಿಗೆ ಪತ್ರಿಕಾಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ ಹೇಳಿ? ಮುಸ್ಲೀಂ ಹೆಣ್ಣುಮಕ್ಕಳನ್ನು ಬೆಳಕಿಗೆ ತರಬಲ್ಲಂತಹ ಒಂದೇ-ಒಂದು ಕೆಲಸ ಆಗಿತ್ತು ಆದರೆ ಅದಕ್ಕೆ ಸರಿಯಾದ ಬೆಂಬಲ ಸಿಗಲೇ ಇಲ್ಲ. ಬುರ್ಖಾದ ಒಳಗೆ, ಅಸಹ್ಯಕರ ಬದುಕು ನಡೆಸುತ್ತಿರುವ ಆ ತುಳಿತಕ್ಕೊಳಗಾದ ಹೆಣ್ಣುಮಕ್ಕಳ ಬೆಂಬಲಕ್ಕೆ ಇನ್ನು ಯಾರು ನಿಲ್ಲುವಂತೆಯೇ ಇಲ್ಲ. ಸಮಾಜದ ಒಳಿತಿನ ದೃಷ್ಟಿಯಿಂದ ಇದು ಸರಿಯೇ? ಪೈಗಂಬರರು ಅರಬ್‌ನಲ್ಲಿ ವಾಸಿಸುವ ಜನರಿಗೆಂದು ಹೇಳಿದ ಮಾತುಗಳನ್ನು, ಆಚರಣೆಗಳನ್ನು ಭೌಗೋಳಿಕ ದೃಷ್ಟಿಯಿಂದಲಾದರೂ ಬದಲಾಯಿಕೊಳ್ಳಬೇಕೆಂಬ ವಿವೇಕವನ್ನು ಯಾರೂ ತಿಳಿಹೇಳುವುದು ಬೇಡವೇ?
ಅದೆಲ್ಲಾ ಸರಿ. ಎಮ್.ಎಫ್.ಹುಸೇನ್ ಸಾಹೇಬರು ನನಗೆ ವ್ಯಕ್ತಿಸ್ವಾತಂತ್ರ್ಯವನ್ನು ಭಾರತ ನಿರಾಕರಿಸಿದೆ ಎಂದು ತಾವು ಬರೆದ ಭಾರತಮಾತೆಯ ನಗ್ನಚಿತ್ರಗಳನ್ನು ಸಮರ್ಥಿಸಿಕೊಂಡಿಸಿದ್ದನ್ನು ಮಾಧ್ಯಮಗಳು ಅಷ್ಟೆಲ್ಲಾ ವೈಭವೀಕರಿಸುತ್ತಿವೆಯಲ್ಲಾ? ಹಾಗಾದರೆ ಕನ್ನಡಪ್ರಭದಲ್ಲಿ ಲೇಖನ ಬರೆದವರಿಗೆ ವ್ಯಕ್ತಿ ಸ್ವಾತಂತ್ರ್ಯವಿಲ್ಲವೇನು? ಇದರ ಬಗ್ಗೆ ಚರ್ಚೆಯೇ ಬೇಡವೇನು? ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ಕೊಡಲು ಹಿಂದೆ-ಮುಂದೆ ನೋಡಿದ ಸರ್ಕಾರಗಳು ಹುಸೇನ್‌ಸಾಹೇಬರನ್ನು ಕರೆಸಿಕೊಳ್ಳಲಿಕ್ಕೆ ಮಾತ್ರ ದುಂಬಾಲುಬೀಳುತ್ತಿವೆಯಲ್ಲ! ಏನಿದೆ ಇದರ ಹಿಂದಿನ ಮರ್ಮ? ಇದನ್ನು ಪ್ರಶ್ನಿಸಬೇಕೆಂದು ಯಾವ ಸೆಕ್ಯುಲರ್ ಭೂತಕ್ಕೂ ಅನಿಸೋದೇ ಇಲ್ಲವಲ್ಲ, ಏಕೆ ಹೀಗೆ?
ಶಿವಮೊಗ್ಗದಲ್ಲಿ ಅವತ್ತು ಬಜರಂಗದಳದ ಸೈನಿಕರು ಇಲ್ಲದೇ ಹೋಗಿದ್ದರೆ ಗತಿಯೇನು? ಅವರ ಹದಿನೈದು ಸಾವಿರಕ್ಕೆ ಪ್ರತಿಯಾಗಿ ಇವರು ನಾಲ್ಕೈದು ಸಾವಿರವಾದರೂ ಸೇರಿದಕ್ಕೆ ಎದುರುಮಂದಿ ಸ್ವಲ್ಪ ಅಳುಕಿದ್ದಾರೆ. ಇಲ್ಲವಾದಲ್ಲಿ ಇಡಿಯ ಶಿವಮೊಗ್ಗವನ್ನೇ ಅವರು ಆಪೋಶನ ತೆಗೆದುಕೊಂಡುಬಿಡುತ್ತಿದ್ದರು. ಆಮೇಲೆ ಪತ್ರಿಕೆಯೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ. ಹಾಸನದಲ್ಲಿ ಹೀಗೇ ಆಗಲಿ… ಆಮೇಲೆ ನೋಡಿ, ದೇವೇಗೌಡರ ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗುವ ಕನಸು ಈ ಜನ್ಮದಲ್ಲಿಯೇ ನನಸಾಗಿಬಿಡುತ್ತದೆ.
ಇವತ್ತು ಗಾಂಧಿಜಿಯ ಶವ ಮಗ್ಗಲು ಬದಲಿಸಿರಲಿಕ್ಕೆ ಸಾಕು. ಅವರೇ ಹೂತಿಟ್ಟ ತುಷ್ಟೀಕರಣದ ಬೀಜ ಇಂದು ಆಲದಮರವಾಗಿ ಬೆಳೆದು ನಿಂತಿದೆ. ಅದರಡಿಯಲ್ಲಿ ಇನ್ನು ಯಾರೂ ಬೆಳೆಯುವಂತಿಲ್ಲ. ಗಾಂಧೀಜಿ ಇದನ್ನು ಅವತ್ತೇ ಅರಿತಿದ್ದರೆ ಇಂದು ನಾವು ನೆಮ್ಮದಿಯ ನಿದ್ದೆಯನ್ನಾದರೂ ಮಾಡಿರುತ್ತಿದ್ದೆವು. ಕೊನೆಯ ಪಕ್ಷ ದೇಶ ವಿಭಜನೆಯಾದಾಗಲಾದರೂ ಅವರಿಗೆ ಪರಿಸ್ಥಿತಿಯ ಅರಿವಾಗಬೇಕಿತ್ತು. ಅಂಬೇಡ್ಕರರು ಅವತ್ತೇ ಹೇಳಿದ್ದರು ’ಶತ್ರುವನ್ನು ದೇಶದ ಒಳಗಿಟ್ಟು ಸಾಕುವುದು ಒಳಿತೋ, ಹೊರಗಟ್ಟಿ ಮೆಟ್ಟುವುದು ಒಳಿತೋ?’ ಊಹೂಂ. ಯಾರೂ ಅವರ ಮಾತನ್ನು ಕೇಳುವ ಗೋಜಿಗೇ ಹೋಗಿರಲಿಲ್ಲ. ಮೊದ ಮೊದಲು ದ್ವಿ ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ಸಾವರ್ಕರರೂ ಈ ಮಾತಿಗೆ ತಲೆದೂಗಿ ಅದನ್ನು ಒಪ್ಪಿಕೊಂಡರು. ಆದರೆ ಕಾಂಗ್ರೆಸ್ಸಿಗರು ಮಾತ್ರ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅಂಬೇಡ್ಕರರನ್ನೇ ಅಭಿವೃದ್ಧಿವಿರೋಧಿ ಎಂಬಂತೆ ಬಿಂಬಿಸಲಾಯಿತು. ಮೇಲ್ವರ್ಗದವರಲ್ಲಿ ಇಂದಿಗೂ ಈ ಭಾವನೆ ಉಳಿದುಬಿಟ್ಟಿದೆ. ಆದರೆ ಆ ಮನುಷ್ಯನ ದೂರದೃಷ್ಟಿಯ ಒಂದಂಶವೂ ಆಗಿನ ನಾಯಕರಲ್ಲಿಲ್ಲದಿದ್ದುದು ದೌರ್ಭಾಗ್ಯ!
ಮುಂದೆ ದೇಶವಿಭಜನೆಯೂ ಆಗಿಹೋದಾಗ, ಪಾಕಿಸ್ಥಾನಕ್ಕೆ ಬಯಸಿ ಹೋದ ಇಲ್ಲಿನ ಮುಸಲ್ಮಾನರ ಗೋಳು ಹೇಳತೀರದಾಯಿತು. ಅವರಿಗೆ ಅಲ್ಲಿ ದಕ್ಕಿದ್ದು ಎರಡನೇ ದರ್ಜೆಯ ನಾಗರಿಕರ ಸ್ಥಾನ-ಮಾನಗಳು ಮಾತ್ರ. ಹೀಗಾಗಿಯೇ ನೊಂದ ಪಂಜಾಬ್ ಪ್ರಾಂತ್ಯದ ಲಕ್ಷಾಂತರ ಮುಸಲ್ಮಾನರು ಹಿಂದುತ್ವದೆಡೆಗೆ ಬರಲು ಸಿದ್ಧರಾದಾಗ ಸಾವರ್ಕರರು ಅನಂದಿತರಾದರು, ಶತಮಾನದ ದಾಸ್ಯದ ನೊಗ ಕಳಚಿತೆಂಬ ಸಂಭ್ರಮ ಒಂದೆಡೆ ಅವರಿಗೆ. ಆದರೆನು? ಆಚಾರ್ಯ ಪಟ್ಟಕ್ಕೇರಿಬಿಟ್ಟಿದ್ದ ವಿನೋಬಾರ ಸೆಕ್ಯುಲರ್ ಅಂತರಾತ್ಮ ಜಾಗೃತವಾಗಿಬಿಟ್ಟಿತು. ಅವರು ಪರಾವರ್ತನಕ್ಕೆ ಸಿದ್ಧರಾಗಿದ್ದವರಿಗೆ ಬುದ್ಧಿವಾದದ ಮಾತುಗಳನ್ನು ಹೇಳಿ ಸಮಾಧಾನ ಮಾಡಿ ಹಿಂದುತ್ವಕ್ಕೆ ಬರುವುದನ್ನು ತಡೆಗಟ್ಟಿಯೆ ಬಿಟ್ಟರು! ಅಲ್ಲಿಗೆ ಭಾರತ ನಾಶದ ಸಮಗ್ರ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಗಾಂಧಿ ಅನುಯಾಯಿಗಳ ಪ್ರಯತ್ನಕ್ಕೆ ಮೊದಲ ಠಸ್ಸೆ ಬಿದ್ದಿತ್ತು. ಆ ಯೋಜನೆಯ ಮುಂದಿನ ಹಂತಗಳು ಈಗ ಕಾರ್ಯರೂಪಕ್ಕೆ ಬರುತ್ತಿವೆ ಅಷ್ಟೇ.
ಇಂದು ಗಾಂಧೀಜಿ ಕಟಕಟೆಯಲ್ಲಿದ್ದಾರೆ. ನಾಳೆ ಕನ್ನಡಪ್ರಭ! ಇತಿಹಾಸ ಯಾರನ್ನೂ ಪ್ರಶ್ನಿಸದೇ ಬಿಡುವುದಿಲ್ಲ. ಒಬ್ಬರು ವಿಷಬೀಜ ಬಿತ್ತಿದರು ಮತ್ತೊಬ್ಬರು ಹೆದರಿಕೆಯಿಂದಾಗಿಯೇ ಸತ್ಯದಿಂದ ದೂರ ಸರಿದರು. ಪ್ರಶ್ನೆ ಪ್ರಶ್ನೆಯೇ. ಉತ್ತರಿಸಲು ಸಿದ್ಧರಿರಬೇಕು, ಇಂದಲ್ಲ-ನಾಳೆ.

3 Responses

Subscribe to comments with RSS.

 1. guruprasad said, on ಏಪ್ರಿಲ್ 10, 2010 at 5:10 ಫೂರ್ವಾಹ್ನ

  good 1,inspirational,………….ur articles can change d thinking power of todays youth like me

 2. aravinda said, on ಏಪ್ರಿಲ್ 10, 2010 at 5:12 ಫೂರ್ವಾಹ್ನ

  chanda article bariteetiri pa

 3. Sumanth Sharma said, on ಆಗಷ್ಟ್ 2, 2010 at 11:45 ಫೂರ್ವಾಹ್ನ

  ಇದಕ್ಕೆ ಒ೦ದೇ ಕಾರಣ, ಕ್ಲೈಬ್ಯ.

  ನಮ್ಮ ಸಮಾಜ ಅ೦ಥ ಹೇಳಿಕೊಳ್ಲಕ್ಕೆ ಧರ್ಮಾಚರಣೆ ಮಾಡದಿರುವರೇ ಹೆಚ್ಚು.

  ದಯಾನ೦ದ ಸರಸ್ವತೆ ಅವರು ಹೇಳಿದಹಾಗೆ “Non practising hindus are the biggest enemies of Hinduism”. ಇಲ್ಲಿ ಹಿ೦ದುತ್ವ ಅ೦ದರೆ ಬರೇಯ ಮೂಗು ಹಿಡಿದುಕ್೦ಡು ಆಚಮನ ಮಾಡುವುದೊ ಅಥವ ಶ್ರಧ್ಧೆಯೇ ಇಲ್ಲದೆ ದೇವರಿಗೆ ಪ್ರದಕ್ಶಿಣೆ ಹಾಕುದಲ್ಲ ಅಲ್ಲವೆ, ನಮ್ಮ ಭವ್ಯ ಸನಾತನ ಧರ್ಮದ ಮೂಲ ತತ್ವ ಸತ್ಯ ನಿಶ್ಠೆ, ಸದಾಚಾರ, ಸತ್ಯಾನವೇಶಣೆ ಇತ್ಯಾದಿ.

  ನಮ್ಮತನದಲ್ಲಿ ವಿಶ್ವಾಸವಿದ್ದಲ್ಲಿ, ಸಮಾಜ ನಮ್ಮತನಕಕ್ಕೆ ಅಡ್ಡಿ-ಆತ್೦ಕಗಳನ್ನು೦ಟುಮಾಡುವ೦ತವರನ್ನು ಸದೆಬಡಿಯುವ ನಾಯಕರನ್ನೆ ಆರಿಸುವರು, ಆದರೆ ಆಳೇ ಮೊಸವಾದರೆ ಅವನಿನ್ಯಾವ ನಾಯಕನ್ನನಾರಿಸಿಯಾನು ಹೇಳು?

  ಇರಲಿ, ನಾನು ಇಲ್ಲಿ ಕಹಳೆ ಉದಿದರೆ ಸಾಮಾಜ ಬದಲಾದಿತೆ ? ನೀನಾದರು ಇ೦ತಹ ಚಟುವತಟಿಕೆ ಹೊ೦ಬಿಕೊ೦ಡಿರುವುದು ಬಹಳ ಸ೦ತೂಶ.

  ಅರವಿ೦ದರು “need for spiritualization of the races” ಎನ್ನುವ ಕೂಗೊಡಿದ್ದರು, ಪ್ರತಿಯೊಬ್ಬ ಮಹಾತ್ಮರು ಇದನ್ನೇ ಸಾರಿದ್ದು, ಆದರೆ ಈ ಮೆಕೌಲೆ ಇಟ್ತಿರುವ ವಿಶಬೀಜವನ್ಮೊದಲೆತ್ತೂಗೆಯಬೇಕಾಗಿದೆ.

  – ಜೈ ಹಿ೦ದ್


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: