9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!
ನಡುಗಿತ್ತು ಅಮೆರಿಕ…
ಯಾರೇ ಆಗಲಿ, ತಾವು ಎಷ್ಟೇ ಬಲಶಾಲಿಗಳೆಂದು ಬೀಗಿದರೂ ಅವರಿಗಿಂತ ಸರ್ವಶಕ್ತನಾದ ಭಗವಂತನೊಬ್ಬ ಇದ್ದೇ ಇದ್ದಾನೆ.
ಕ್ರೈಸ್ತ ಜನಾಂಗ ವಿಶ್ವದ ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಿ, ಹಿಂಸೆಯಿಂದ, ಕುಯುಕ್ತಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿತು. ಕೊಳ್ಳೆಹೊಡೆದ ಹಣದ ಮದದಿಂದಲೇ ಜಗತ್ತನ್ನು ಅಡಿಯಾಳಗಿಸಿಕೊಳ್ಳಲು ಹವಣಿಸಿತು.
ಒಸಾಮಾ ಬಿನ್ ಲ್ಯಾಡೆನ್, ಇಂತಹ ಮದದಿಂದ ಬೀಗುತ್ತಿದ್ದ ಅಮೆರಿಕೆಯ ಮೇಲೇರಿಹೋಗಿ ಭಯೋತ್ಪಾದನೆಯ ಮೂಲಕ (ಅದಂತೂ ಧರ್ಮಾಂಧತೆಯ ಮತ್ತೊಂದು ಮುಖ) ವರ್ಲ್ಡ್ ಟ್ರೇಡ್ ಬಿಲ್ಡಿಂಗನ್ನು ಕೆಡವಿ ಅಮೆರಿಕೆಯನ್ನು ಗಲಗಲ ಅಲುಗಿಸಿಬಿಟ್ಟ. ಎರಡು ಕ್ರೂರ ಜನಾಂಗಗಳು ಧರ್ಮಾಂಧತೆಯ ಅಂಧಕಾರದಲ್ಲಿ ವರ್ತಿಸಿದ ಪರಿ ಇದು. ಹಾಗೆ ಲ್ಯಾಡೆನ್ ವಿಮಾನದ ಮೂಲಕ ಕಟ್ಟಡಗಳ ಮೇಲೆ ತನ್ನ ಬಂಟರನ್ನು ಛೂಬಿಟ್ಟಿದ್ದು, ಈಗ್ಗೆ ಎಳು ವರ್ಷಗಳ ಕೆಳಗೆ, 2001ರ ಸೆಪ್ಟೆಂಬರ್ 11ರಂದು.
ಅವತ್ತು ಇಡೀ ಜಗತ್ತೇ ನಡುಗಿತ್ತು!
ಸುಮಾರು ನೂರಾ ಹದಿನೈದು ವರ್ಷಗಳ ಹಿಂದಿನ ಮಾತು. ಆಗ ಕೂಡ ಜಗತ್ತಿನ ಇತರೆಲ್ಲ ಧರ್ಮಗಳು ನಡುಗಿದ್ದವು. ತಲೆ ತಗ್ಗಿಸಿ ಕುಳಿತಿದ್ದವು. ಆಗ ಯಾವುದೇ ಹಿಂಸೆ ನಡೆದಿರಲಿಲ್ಲ. ಹಾಗೆ ನಡುಗಿಸಿದವನ ಮನದಲ್ಲಿ ಮೌಢ್ಯವಿರಲಿಲ್ಲ, ಆತ ಧರ್ಮಾಂಧನೂ ಆಗಿರಲಿಲ್ಲ.
ಕಾವಿಯುಟ್ಟ, ಉದಾತ್ತ ನಿಲುವಿನ ಆ ವೀರ ಸಂನ್ಯಾಸಿ ತನ್ನ ಧರ್ಮಕ್ಕೆ ತಕ್ಕ ಸಂಸ್ಕಾರದಿಂದ ಜಗತ್ತನ್ನುದ್ದೇಶಿಸಿ ಮಾತನಾಡಿದ್ದ. ನಿಜವಾದ ಧರ್ಮ ಇಂಥದ್ದು ಎಂದು ಗುಡುಗಿದ್ದ. ಆವರೆಗೂ ಭಾರತೀಯರೆಂದರೆ ಹುಟ್ಟಿದ ಮಗುವನ್ನು ಮೊಸಳೆಗೆಸೆಯುವವರು ಎಂಬ ಮೌಢ್ಯಕ್ಕೆ ಬಲಿಯಾಗಿದ್ದ ಜನ ಆ ಸಿಂಹ ವಾಣಿಗೆ ನಡುಗಿಹೋದರು. ಭರತೀಯತೆಯ, ಹಿಂದುತ್ವದ ನೈಜ ಪರಿಚಯ ಅಂದು ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿತು. ತನ್ನ ನಾಡಿನಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಿದ್ದ ಕ್ರೈಸ್ತರಿಗೆ ಆತ ಅಮೆರಿಕೆಯ ನೆಲದಲ್ಲಿ ನಿಂತು ಛಡಿಯೇಟು ಕೊಟ್ಟಿದ್ದ.
ಅದು, ವಿಶ್ವ ಧರ್ಮ ಸಮ್ಮೆಳನದ ಸಂದರ್ಭ. ಸ್ಥಳ- ಅಮೆರಿಕೆಯ ಚಿಕಾಗೋ, ದಿನಾಂಕ- 1893ರ ಸೆಪ್ಟೆಂಬರ್ 11 !
ಹಾಗೆ ಹಿಂದುತ್ತ್ವದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವ್ಯಕ್ತಿ- ಸ್ವಾಮಿ ವಿವೇಕಾನಂದ!!
ಧರ್ಮಾಂಧತೆಗೂ ಧರ್ಮ ಶ್ರದ್ಧೆಗೂ ಎಷ್ಟೊಂದು ವ್ಯತ್ಯಾಸ!?
ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಆಡಿದ ಮಾತುಗಳ ಸಾರಾಂಶ ನೀಡಲಿದ್ದೇವೆ ಕನ್ನಡದಲ್ಲಿ, ಅತಿ ಶೀಘ್ರದಲ್ಲಿ.
ವಿವೇಕಾನಂದರ ಭಾಷಣದ ಕನ್ನಡ ಪಠ್ಯವನ್ನು ಓದಲು ಕಾತರನಾಗಿದ್ದೇನೆ.
ಆದರೆ ನೀವು ಮೇಲೆ ಕೊಟ್ಟಿರುವ ‘ಜಗತ್ತು ನಡುಗಿತು’, ‘ಭಾರತವನ್ನಾಳುತ್ತಿದ್ದ ಕ್ರೈಸ್ತ ಮತಾಂಧರು’, ‘ಭಾರತೀಯರು ಹೆಣ್ಣು ಮಕ್ಕಳನ್ನು ಮೊಸಳೆಗಳಿಗೆಸೆಯುವವರು ಎಂಬ ಮೌಢ್ಯವನ್ನು ನಂಬಿದ್ದವರು’ ಎಂಬ ಸಾಲುಗಳು ಕಿರಿಕಿರಿಯನ್ನುಂಟು ಮಾಡಿದವು.
ಸಾಧ್ಯವಾದಷ್ಟು ಧರ್ಮದ ಬಗ್ಗೆ ಆಕ್ರಮಣಕಾರಿ ಭಾಷೆಯೆನ್ನು ಬಳಸುವುದನ್ನು ದಯವಿಟ್ಟು ಅವಾಯ್ಡ್ ಮಾಡಿ…
ನಮಸ್ತೇ ಸುಪ್ರೀತ್,
ಸ್ವಾಮೀಜಿಯವರ ಚಿಕಾಗೋ ಭಾಷಣ ಅದಾಗಲೇ ಕನ್ನಡಕ್ಕೆ ಅನುವಾದಗೊಂಡಿದೆ. ನಾನು ಅದನ್ನು ಇಲ್ಲಿ ಅಪ್ ಲೋಡ್ ಮಾಡಲಿರುವೆನಷ್ಟೆ.
ವಾಸ್ತವದಲ್ಲಿ, ವಿಶ್ವ ಸರ್ವಧರ್ಮ ಸಮ್ಮೇಳನ ಆಯೋಜನೆಗೊಂಡಿದ್ದೇ ಜಗತ್ತಿನ ಅತಿ ಶ್ರೇಷ್ಠ ಧರ್ಮ ‘ಕ್ರೈಸ್ತ ಧರ್ಮ’ ಎಂದು ಬಿಂಬಿಸುವುದಕ್ಕೆ. ಆದರೆ, ವಿವೇಕಾನಂದರಿಂದಾಗಿ ಜಗತ್ತಿನ ಶ್ರೇಷ್ಠ ಧರ್ಮ ಯಾವುದು ಎಂಬುದು ಅವರೇ ಒದಗಿಸಿಕೊಟ್ಟ ವೇದಿಕೆಯಲ್ಲಿ ಸಾಬೀತಾಯಿತು.
ಆಕ್ರಮಣಕಾರಿ ಭಾಷೆಯ ಬಗ್ಗೆ ಬರೆದಿದ್ದೀರಿ. ಈ ಬಗ್ಗೆ ನಾವು ಖಂಡಿತ ಮುಂದೆ ಚರ್ಚಿಸೋಣ.
ನಿಮ್ಮ ಆಸಕ್ತಿ, ನೇರವಂತಿಕೆ ಮೆಚ್ಚುಗೆಯಾಯಿತು.
ವಂದೇ.
ಪ್ರಿಯ ಆತ್ಮೀಯ ಸ್ನೇಹಿತರೆ,
ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.
http://kannadahanigalu.com/
ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್ನ್ನು ಪ್ರಕಟಿಸುತ್ತೇವೆ.
ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.
ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ – kannadajokes@gmail.com
ಧನ್ಯವಾದಗಳೊಂದಿಗೆ……..