ರಾಷ್ಟ್ರ ಶಕ್ತಿ ಕೇಂದ್ರ

ಯುವ ದಿನದ ಹಿನ್ನೆಲೆಯಲ್ಲಿ…

Posted in ಚಕ್ರವರ್ತಿ ಅಂಕಣ by yuvashakti on ಜನವರಿ 14, 2010
ಮತ್ತೆ ಬಂತು ಸ್ವಾಮಿ ವಿವೇಕಾನಂದರ ಜಯಂತಿ.
ಈಗ ಎಲ್ಲೆಲ್ಲೂ ಅವರ ಫೋಟೋ ಇಟ್ಟು ಜಯಂತಿ ಆಚರಿಸುವ ಪರಿಪಾಠ ವ್ಯಾಪಕವಾಗಿಬಿಟ್ಟಿದೆ. ಎಂದಿನಂತೆ ಅದೇ ಗೋಳು. ಅವರನ್ನು ಮರೆತೇ ಬಿಟ್ಟಿದ್ದಾಗ ವಿವೇಕಾನಂದರ ಜಯಂತಿಯನ್ನು ಆಚರಿಸುವುದಿಲ್ಲವಲ್ಲಪ್ಪ ಎಂದು ಗೋಳಿಡುತ್ತಿದ್ದೆವು. ಕಳೆದ ವರ್ಷ ಸರ್ಕಾರವೇ ಅವರನ್ನು ನೆನಪಿಸಿಕೊಂಡು ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ ನಂತರ ಈಗ ಎಲ್ಲೆಲ್ಲೂ ವಿವೇಕಾನಂದರೇ ವಿವೇಕಾನಂದರು. ಈಗಲೂ ನಮ್ಮ ಗೋಳು ತಪ್ಪಿಲ್ಲ ಬರೀ ಫೋಟೋ ಇಟ್ಟರಾಯಿತೇ? ಅವರ ಚಿಂತನೆಗೆ ತೆರೆದುಕೊಳ್ಳೋದು ಬೇಡ್ವೇ?
ಒಂದಂತೂ ಸತ್ಯ. ಗೋಳಿಡುವವರು ಅದೆಷ್ಟೇ ನೊಂದುಕೊಂಡರೂ ಭಾರತವನ್ನು, ಸರಿಯಾಗಿ ಗಮನಿಸಿದರೆ ಜಗತ್ತನ್ನೂ ತನ್ನ ಚಿಂತನೆಗಳಿಂದ ಅಲುಗಾಡಿಸಿದ ಮಹಾಸಂತ ಸ್ವಾಮಿ ವಿವೇಕಾನಂದ ಎಂಬುದರಲ್ಲಿ ಸಂಶಯವೇ ಇಲ್ಲ. ಸಂತರುಗಳ ಪರಂಪರೆಯೇ ನಮ್ಮಲ್ಲಿ ಆಗಿ ಹೋಗಿದ್ದರೂ ಸ್ವಾಮಿ ವಿವೇಕಾನಂದರು ಪಡೆಯುವ ಸ್ಥಾನ ಅಪರೂಪದ್ದೇ.. ಹೀಗೇಕೆ?
ವಿದೇಶಕ್ಕೆ ಹೋಗಿ ಮಾನ್ಯರಾದ್ದರಿಂದ ಎನ್ನುವುದಾದರೆ, ವಿವೇಕಾನಂದರ ನಂತರ ಅದೆಷ್ಟು ಸಂತರು ವಿದೇಶದ ನೆಲದಲ್ಲಿ ಓಡಾಡಿ, ಭಾರತದ ಹಿರಿಮೆ-ಗರಿಮೆಯನ್ನು ಸಾರಿ ಜಯಭೇರಿ ಬಾರಿಸಿ ಬರಲಿಲ್ಲ ಹೇಳಿ? ಚಿಂತನೆಗಳ ಪ್ರಖರತೆ ಎನ್ನುವುದಾದರೆ, ವಿವೇಕಾನಂದರು ಹೇಳಿದ್ದೇನೂ ಹಿಸತಲ್ಲ ಎಂಬುದನ್ನು ನಿನಪಿನಲ್ಲಿಡಬೇಕು. ನಾನು ಉಪನಿಷತ್ತಿನದನ್ನು ಬಿಟ್ಟರೆ ಮತ್ತೇನನ್ನೂ ಹೇಳಿಯೇ ಇಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಏನದು? ಸ್ವಾಮಿ ವಿವೇಕಾನಂದ ಎಂದೊಡನೆ ನಮ್ಮನ್ನು ಸೆಳೆಯುವ ಆ ಚುಂಬಕ ಶಕ್ತಿ ಯವುದದು?
ಅದೊಂದು ಪರಿಪೂರ್ಣ ಪ್ಯಾಕೇಜ್. ಮಾತಿಗೆ ತಕ್ಕಂತಹ ಆಕೃತಿ, ಅದಕ್ಕೆ ಸೂಕ್ತವಾದ ಘನತೆ, ಅತ್ಯಂತ ಶ್ರೇಷ್ಠ ನಾಡಿನವನು ಎಂಬ ಸಾತ್ವಿಕ ಅಹಂಕಾರದಿಂದ ಉಬ್ಬಿದ ಎದೆ, ದೀನ-ದಲಿತರಿಗಾಗಿಯೇ ಸದಾ ಮಿಡಿಯುವ ಹೃದಯ, ನೊಂದವರಿಗಾಗಿ ಕಂಬನಿ ಸುರಿಸಲು ಸಿದ್ಧವಿರುವ ಕಣ್ಣುಗಳು, ಕೆಲವೊಮ್ಮೆ ಕೈಲಾಗದ ಹೇಡಿಗಳಿಗಾಗಿ ಕೆಂಡ ಉಗುಳುವ ಅದೇ ಕಂಗಳು, ಮಸ್ತಿಷ್ಕದಲ್ಲಿ ತುಂಬಿ ತುಳುಕಾಡುವ ಜ್ಞಾನ ಸಂಪದ, ಅವಾಜ ಪ್ರೀತಿ, ತಪ್ಪುಗಳನ್ನು ಧಿಕ್ಕರಿಸಿ ಸರಿಯಾದುದನ್ನು ಅಪ್ಪಿಕೊಳ್ಳುವ ಛಾತಿ… ಅದೊಂದು ಅಪರೂಪದ ವ್ಯಕ್ತಿತ್ವ. ಇಪ್ಪತ್ತನೇ ಶತಮಾನದಲ್ಲಿ ಜಗತ್ತನ್ನು ಪ್ರಭಾವಿಸಿದ ವ್ಯಕ್ತಿಗಳು ಯಾರೆಂದು ಕೇಳಿದರೆ ನಿಸ್ಸಂಶಯವಾಗಿ ಈ ವ್ಯಕ್ತಿಯ ಚಿತ್ರ ಎದುರಿಗೆ ನಿಲ್ಲಲೇಬೇಕು.
ಜರ್ಮನಿಯ ಮಹಿಳೆಯೊಬ್ಬಳು ವಿವೇಕಾನಂದರ ಭಾಷಣಗಳನ್ನು ಕೇಳಿ ಅಚ್ಚರಿಗೊಳಗಾಗಿ ಒಂದು ಘಟನೆ ಹೇಳುತ್ತಾಳೆ. ಸ್ವಾಮೀಜಿಯವರ ಉಪನ್ಯಾಸ ಕೇಳಿದ ನಂತರ ಆಕೆ ಅದೊಮ್ಮೆ ಸ್ವಮೀಜಿಯ ಕೈ ಕುಲುಕಿದ್ದಳಂತೆ. ಆನಂತರ ಮೂರು ದಿನಗಳ ಕಾಲ ಆ ಕೈಗೆ ನೀರನ್ನೂ ತಾಕಿಸಿರಲಿಲ್ಲವಂತೆ. ಸ್ವಾಮೀಜಿ ಮುಟ್ಟಿದ ಆ ಫ್ಲೇವರ್ ಆರದಿರಲಿ ಅಂತ! ಈ ತರಹದ ಪ್ರಸಂಗಗಳು ಅದೆಷ್ಟೋ. ಅವರೊಡನೆ ಇರಬೇಕು, ಮಾತು ಕೇಳಬೇಕು, ಮಾತಾಡಬೇಕು ಎಂದು ಭಾವಿಸಿದವರೂ ಅಸಂಖ್ಯರು. ಬದುಕಿರುವಾಗ ಬಿಡಿ, ದೇಹತ್ಯಾಗದ ನಂತರವೂ ಅವರು ಮಾಡುತ್ತಿರುವ ಮೋಡಿ ಅಪರಂಪಾರ. ನೊಬೆಲ್ ಪ್ರಶಸ್ತಿ ಪಡೆದ ರೋಮರೋಲಾಗೆ ರವೀಂದ್ರರು ಹೇಳಿದ್ದರಂತೆ, ‘ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ತಿಳಿಯಬೇಕು. ಆ ಮಾತಿಗೆ ಕಟ್ಟುಬಿದ್ದು ವಿವೇಕಾನಂದರ ಅಧ್ಯಯನಕ್ಕೆ ತೊಡಗಿದ ರೋಮಾರೋಲಾ ‘ಈ ವ್ಯಕ್ತಿಯನ್ನು ಒದಿದರೇನೇ ಎಲೆಕ್ಟ್ರಿಕ್ ಶಾಕ್ ಹೊಡೆದಮತಹ ಅನುಭವ. ಇನ್ನು ಮಾತುಗಳನ್ನು ನೆರವಾಗಿ ಕೆಳಿದವರ ಸ್ಥಿತಿ ಏನಾಗಬೇಡ?  ಎಂದು ಉದ್ಗರಿಸಿದ್ದ.
ಸ್ವಾಮೀಜಿಯವರದು ಅದೊಂಥರ ಡೈನಮಿಕ್ ಚಿಂತನೆ. ಹಳೆಯ ಮೌಲ್ಯಗಳನ್ನು ಚೂರೂ ಮಾಸದಂತೆ ಹೊಸ ಜನರಿಗೆ ತಲುಪಿಸುವುದು ಹೇಗೆಂಬ ಪಾಠವನ್ನು ಅವರಿಂದಲೇ ಕಲಿಯಬೇಕು. ಹಳೆಯ ಆದರ್ಶಗಳನ್ನೇ ಇಟ್ಟುಕೊಂಡು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವ ಅವರ ಕಲ್ಪನೆ ಅಪರೂಪದ್ದು. ಹೀಗಾಗಿಯೇ ಸ್ವಾಮೀಜಿ ತಮ್ಮ ಜೀವನದ ಬಹುಮೂಲ್ಯ ಸಮಯವನ್ನು ವ್ಯಕ್ತಿ ನಿರ್ಮಾಣದ ಚಿಂತನೆಗೆ ಕೊಟ್ಟರು. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ, ಅವರು ಬೆರಳು ತೋರಿಸಿ ಮಾತನಾಡಿದಿದ್ದರೆ ಅದು ವ್ಯಕ್ತಿ ನಿರ್ಮಾಣದ ಬಗೆಗೇ.
‘ಸ್ವಾತಂತ್ರ್ಯವನ್ನು ೨೪ ಗಂಟೆಗಳೊಳಗೆ ಕೊಡಿಸುತ್ತೇನೆ, ಆದರೆ ಆ ಜವಾಬ್ದಾರಿಯನ್ನು ನಿಭಾಯಿಸಬಲ್ಲ ನಿಭಾಯಿಸಬಲ್ಲ ಪುರುಷರೆಲ್ಲಿದ್ದಾರೆ? ಎಂಬಲ್ಲಿ ಅವರ ಕಳಕಳಿಯೂ ಅದೇ. ಬಹುಶಹ ಅವರ ಮಾತುಗಲ ಒಳಾರ್ಥ ಹಿಂದೆಂದಿಗಿಂತಲೂ ಈಗ ನಮಗೆ ಚೆನ್ನಾಗಿ ಆಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ರಂಗಗಳಲ್ಲೂ ವ್ಯಕ್ತಿತ್ವಹೀನರನ್ನು ಕಂಡಾಗ ಸ್ವಾಮೀಜಿಯ ಕಾಳಜಿ ಏನಿತ್ತು ಎಂಬುದು ಕಣ್ಣಿಗೆ ರಾಚುತ್ತದೆ. ಹೀಗೆ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಶತಶತಮಾನಗಳಿಂದ ಅಮರಿಕೊಂಡಿದ್ದ ಗುಲಾಮಿ ಮಾನಸಿಕತೆಯನ್ನು ‘ಆತ್ಮವಿಸ್ಮೃತಿ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಕೊಲಂಬೋದಿಂದ ಆಲ್ಮೊರದವರೆಗೆ ನಿರಂತರ ಪ್ರವಸ ಮಾಡುತ್ತ, ಉದ್ಬೋಧಕರ ಭಾಷಣ ಮಾಡುತ್ತ, ಮಲಗಿರುವ ಆತ್ಮಗಳನ್ನು ಬಡಿದೆಬ್ಬಿಸಿದರು ಸ್ವಾಮೀಜಿ.
ಸ್ವತಃ ಅತ್ಯಂತ ಸ್ವಾಭಿಮಾನದ, ಯಾರಿಗೂ ಬಾಗದ ಬದುಕು ಅವರದು. ಪರಿವ್ರಾಜಕರಾಗಿ ತಿರುಗಾಡುತ್ತಿದ್ದಾಗ, ‘ಊಟವನ್ನೂ ಯರ ಬಳಿ ಬೇಡಲಾರೆ, ಭಗವಂತ ಕೊಟ್ಟರೆ ಉನ್ಣುವೆ ಎಂದು ಹಠ ಹಿಡಿದು ಕುಳಿತವರು. ಸ್ವತಃ ಭಗವಂತನೇ ಸಹಾಯಕ್ಕೆ ಬಂದು ಬೇರೆಬೇರೆ ಮಾರ್ಗಗಳ ಮೂಲಕ ಉಣಿಸಿದ್ದು ಅವರ ಬದುಕಿನಲ್ಲಿ ಕಂಡು ಬರುತ್ತದೆ. ಇಂತಹ ಸ್ವಾಭಿಮಾನಿ ಯುವಕ, ತನ್ನ ದೇಶವಾಸಿಗಳು ನಿರಭಿಮಾನಿಗಳಾಗಿ, ಆಂಗ್ಲರ ಅಡಿಯಾಳಾಗಿ ಕುಳಿತಿದ್ದರು ಅದು ಹೆಗೆ ಸಹಿಸಿಯಾನು ಹೇಳಿ? ಸ್ವಾಮೀಜಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಮೇಲೆ ಇಲ್ಲಿನ ಯುವಕರನ್ನು ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಅವರಲ್ಲಿನ ಪಶ್ಚಿಮದ ಮೋಹದ ಪೊರೆಯನ್ನು ಕಳಚಿ ಬಿಸುಟರು. ಆತ್ಮಹೀನತೆಯಿಂದ ನಿಸ್ತೆಜವಾಗಿದ್ದ ಯುವ ಜನಾಂಗಕ್ಕೆ ಚುರುಕು ಮುಟ್ಟಿಸಿ ಜಾಗೃತಿಯ ಹೊಸ ಪರ್ವ ಬರೆದರು. ಪಶ್ಚಿಮಕ್ಕೆ ಭಾರತ ಯಾವ ನಿಟ್ಟಿನಿಂದಲೂ ಕಡಿಮೆಯಿಲ್ಲವೆಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ವಿದೆಸದ ನೆಲದಲ್ಲಿ ಕ್ರಿಶ್ಚಿಯನ್ ಪಾದ್ರಿಗಳನ್ನು ಎದುರು ಹಾಕಿಕೊಂಡು ಹೆಡೆಮುರಿದುಕಟ್ಟಿದ ಕಥನಗಳಂತೂ ಈಗ ಭಾತರತೀಯರಲ್ಲಿ ಮಿಂಚಿನ ಸಂಚಾರ ಉಂಟುಮಾಡಿತ್ತು. ದೀರಘ ನಿದ್ರೆಯಿಂದ ಹಿಂದೂ ಸಮಾಜ ಮೈ ಕೊಡವಿ ಏಳುವ ಕಾಲ ಬಂದೇಬಿಟ್ಟಿತು. ಅಲ್ಲದೆ ಮತ್ತೆನು? ‘ನನಗೆ ಫುಟ್‌ಬಾಲ್ ಎಂದರೆ ಇಷ್ಟವಾದ ಆಟ. ಏಕೆಂದರೆ ಅಲ್ಲಿ ಪ್ರತಿಯೊಂದು ಕಿಕ್‌ಗೆ ಒಂದು ಕೌಂಂಟರ್ ಕಿಕ್ ಇದೆಯಲ್ಲ, ಅದಕ್ಕೆ ಎನ್ನುವ ಸ್ವಾಮೀಜಿಯವರ ಮಾತು ಗುಲಮೀತನದಲ್ಲಿರುವ, ಆಂಗ್ಲರ ಬೂಟು ನೆಕ್ಕುತ್ತಿದ್ದ ಭಾರತೀಯರಲ್ಲಿ ಚೈತನ್ಯ ಮೂಡಿಸಿದ್ದರಲ್ಲಿ ಅತಿಶಯೀಕ್ತಿ ಖಂಡಿತ ಇಲ್ಲ.
ಆಂಗ್ಲ ಪ್ರಭುತ್ವವು ಸ್ವಾಮೀಜಿಯ ಹಿಂದೆ ಬಿತ್ತು. ಗಲ್ಲಿಗಲ್ಲಿಗಳಲ್ಲೂ ಸ್ವಾಮೀಜಿಯವರನ್ನು ಹಿಂಬಲಿಸುವ ಆಂಗ್ಲ ಗುಪ್ತಚರರನ್ನು ಕಂಡು ಸೋದರಿ ನಿವೇದಿತೆಗೇ ಅಸಹ್ಯವಾಗಿತ್ತು. ಅದರೂ ಅವರು ಸ್ವಾಮೀಜಿಯನ್ನು ಹಿಡಿದು ಜೈಲಿಗೆ ತಳ್ಳುವಂತಿರಲಿಲ್ಲ. ಆತ್ಮವಿಶ್ವಾಸದ ಕುರಿತು ಅವರಾಡಿದ್ದ ಮಾತುಗಳು ಹೊಸತೇನಲ್ಲ. ಅವೆಲ್ಲವೂ ಶಾಸ್ತ್ರಗಳಿಂದ ಸ್ವೀಕರಿಸಿದ್ದಸೇ ಅಗಿತ್ತು. ‘ಅಭೀಃ (ಹೆದರದಿರು) ಎನ್ನುವ ಉಪನಿಷದ್ವಾಕ್ಯವನ್ನು ಅವರು ಪದೇಪದೇ ನೆನಪಿಸುತ್ತಿದ್ದರು. ಹೀಗಾಗಿಯೇ ಅವರಾಡುವ ಮಾತುಗಳು ಕೇಳುಗರಿಗೆ ಸರಿಯಾದ ದಿಕ್ಕು ತೋರಿದರೆ, ಆಳುವ ಸರ್ಕಾರ ಮಾತ್ರ ಅವರನ್ನು ಬಂಧಿಸಲಾಗದೆ ಚಡಪಡಿಸುತ್ತಿತ್ತು.
ಸ್ವಾಮೀಜಿಯವರ ಆ ಸಂದೇಶ ಇಂದು ಭಾರತಕ್ಕೆ ಮತ್ತೆ ಬೇಕಿದೆ. ಅವರ ಸ್ವಾಭಿಮಾನದ, ಆತ್ಮವಿಶ್ವಾಸದ ಕಿಚ್ಚು ನಮಗೂ ತಾಕಬೇಕಿದೆ. ಭಾರತ ಜಗತ್ತಿನ ಯಾವ ರಾಷ್ಟ್ರಗಳಿಗೂ ಕಡಿಮೆಯಿಲ್ಲ ಎನ್ನುವುದನ್ನು ನಾವು ಸಾಬೀತುಪಡಿಸಿ ತೋರಬೆಕಿದೆ. ಭಾರತದ ಕೀರ್ತಿಪತಾಕೆ ಹಾರಾಡದ ಜಾಗವೇ ಇಲ್ಲ ಎಂಬುದು ಜಗತ್ತಿಗೆ ತಿಳಿಯಲು ನಾವು ಶ್ರಮಿಸಬೇಕಿದೆ. ಸ್ವಾಮೀಜಿ ಹೇಳುತ್ತಾರಲ್ಲ, ಭಾರತವೆಂಬ ಹಡಗು ಶತಸತಮಾನಗಳಿಂದ ಜನರನ್ನು ದಡ ಸೇರಿಸುತ್ತಿದೆ. ಈಗ ಈ ಹಡಗಿಗೆ ತೂತು ಬಿದ್ದಿದೆ. ಹಾಗೆಂದು ಅದನ್ನು ಬಯ್ಯುತ್ತ ಕೂತರೆ ಪ್ರಯೋಜನವಿಲ್ಲ. ನಮ್ಮ ರಕ್ತಹರಿಸಿಯಾದರೂ ಈ ತೂತು ಮುಚ್ಚಬೇಕು. ಈ ಮಾತುಗಳಲ್ಲಿನ ಕಳಕಳಿ ಗಮನಿಸಿ. ಬಹುಶಃ ಇನ್ನು ಎಂಟು ಹತ್ತು ಶತಮಾನಗಳವರೆಗಾದರೂ ಈ ಮತಿನ ಬಿಸಿ ತಾಕುತ್ತಲೇ ಇರುತ್ತದೆ. ಇಷ್ಟನ್ನು ಅರಿತು ಸರಿಯಾಗಿ ನಡೆದರೆ ಭಾರತ ಪುರೋಗಾಮಿಯಾಗಲೆಬೇಕು.
ಸ್ವಾಮೀಜಿ  ಬರೀ ಆತ್ಮವಿಶ್ವಾಸ ತುಂಬುವ ಮಾತುಗಲನ್ನಷದಟೆ ಆಡುತ್ತ ಉಳಿಯಲಿಲ್ಲ. ಅಮಥವರಿಗೆ ಮುಂದಿನ ಕೆಲಸಗಳೇನು ಎಂಬುದನ್ನೂ ಹೇಳಿದರು. ಅಸ್ಪೃಶ್ಯತೆಯ ಕೊಳಕು ರಾಡಿಯಲ್ಲಿ ಬಿದ್ದು ಗುದ್ದಾಡುತ್ತಿದ್ದವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟರು. ಮೇಲುಕೀಳು ಬೆದವನ್ನು ಎಲ್ಲರಿಗಿಂತ ಹೆಚ್ಚು ತೋರ್ಪಡಿಸ್ತಿದ್ದ ಕೆರಳವನ್ನು ಹುಚ್ಚರ ಸಂತೆ ಎಂದು ಜರಿದು, ‘ದೀನ ದಲಿತರ ಸೇವೆ ಮಾಡಿ, ಇಲ್ಲವೆ ಸಮುದ್ರಕ್ಕೆ ಬಿದ್ದು ಸಾಯಿರಿ ಎಂಬ ಕಟು ಮಾತುಗಳಿಂದ ಮೆಲ್ವರ್ಗವನ್ನು ತಿವಿದರು. ಸ್ವತಃ ಬದುಕಿನಲ್ಲಿ ಬಡಬಗ್ಗರೊಂದಿಗೆ, ತುಳಿತಕ್ಕೊಳಗಾದವರೊಂದಿಗೆ ನಿಂತು, ಅವರ ಜೀವನ ಮಟ್ಟವನ್ನು ಸುಧಾರಿಸುವ ಯತ್ನವನ್ನು ಸ್ವಾಮೀಜಿ ಮಾಡಿದರು.
ಸ್ವಾಮೀಜಿ ಅದಕ್ಕೇ ಅಷ್ಟೊಂದು ಇಷ್ಟವಾಗೋದು. ಅವರ ಮಾತುಗಳು ಬರಿಯ ಮಾತುಗಳಷ್ಟೇ ಆಗಿರಲಿಲ್ಲ. ಅವು ಕಾರ್ಯ ರೂಪಕ್ಕಿಳಿದ ಸಂತನ ಸಂಕಲ್ಪಗಳಾಗಿದ್ದವು. ಅವರೇ ಹೇಳಿದ್ದಾರಲ್ಲ, ‘ನಾನಾಡಿರುವ ಮಾತುಗಳು ಮುಂದಿನ ಸಾವಿರ ವರ್ಷಗಳವರೆಗೂ ದಾರಿತೋರಬಲ್ಲವು ಅಂತ. ಅವರ ಮಾತುಗಳು ಇಮದಿಗೂ ಸತ್ವಯುತವಾಗಿ ಕಾಣಲು ಅದೆ ಕಾರಣ. ಅನಿಸಿದ್ದನ್ನು ನೇರವಾಗಿ ಹೇಳುವ, ಮಾಡಬೇಕೆನಿಸಿದ್ದನ್ನು ಮಾಡುವ ಅವರ ಆ ಛಾತಿ ಇಂದಿನ ಯುವಜನತೆಗೆ ಪರಮಶ್ರೇಷ್ಠ ಆದರ್ಶ.
ನಾವು ಮಾಡಬೇಕಿರೋದು ಇಷ್ಟೇ. ಅವರು ನಡೆದುತೋರಿದ ಆ ಹಾದಿಯಲ್ಲಿ ಹೆಜ್ಜೆ ಹಾಕುವ ಯತ್ನ ಮಾಡಬೇಕು. ವಿವೇಕಾನಂದರ ಜಯಂತಿಯೆಂದರೆ ಹೂಹಾರ ಹಾಕಿ ಪೂಜಿಸಿ, ಸರ್ಕಾರೀ ಕಾರ್ಯಕ್ರಮ ಎಂಬ ಭಯಭಕ್ತಿಯಿಂದ ಸುಮ್ಮನಾಗಿಬಿಡೋದಲ್ಲ. ಅವರ ಚಿಂತನೆಗಲನ್ನು ಸಾಕ್ಷಾತ್ಕರಿಸಿಕೊಂಡು ಅವರ ಆಶಯಕ್ಕೆ ತಕ್ಕಂತೆ ಬದುಕುವುದು ಇಂದಿನ ಅಗತ್ಯ. ಅದು ಸಾಧ್ಯವಾಗುವುದಾದರೆ, ಆ ಜಯಮತಿಯ ಅಚರ್ಯಣೆಯೂ  ಸಾರ್ಥಕ.
ಹಾಗಾದಲ್ಲಿ, ನಿಮಗಿದೋ, ವಿವೇಕಾನಂದ ಜಯಂತಿಯ ಹಾರ್ದಿಕ ಶುಭ ಕಾಮನೆಗಳು.