ರಾಷ್ಟ್ರ ಶಕ್ತಿ ಕೇಂದ್ರ

ರಾಷ್ಟ್ರಶಕ್ತಿ ಅಂದರೆ…

Posted in ಸಂವಾದ by yuvashakti on ಮಾರ್ಚ್ 26, 2010
ಬಹಳ ದಿನಗಳಾದವು. ಈ ನಡುವೆ ಜಾಗೋ ಭಾರತ್ ನೂರನೆ ಕಾರ್ಯಕ್ರಮದ ಮೇಲೆ ಹನ್ನೆರಡು ಕಾರ್ಯಕ್ರಮಗಳು ನಡೆದವು. ಚಕ್ರವರ್ತಿಯವರು ಕೃಷ್ಣದೇವರಾಯ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಾಗೂ ಇಸ್ಲಾಮ್ ಮೂಲಭೂತವಾದದ ಮೂಲ ಸೆಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಪುಸ್ತಕ ಬರೆಯಲಿದ್ದಾರೆ. ಇತಿಹಾಸ ಹೀಗೂ ಇದೆ ಅನ್ನುವುದು ತಿಳಿಯಬೇಕಾದರೆ ಈ ಕೃತಿಗಳ ಅಗತ್ಯವಿದೆ. ಅವು ಆದಷ್ಟು ಬೇಗ ಬರಲಿ ಎಂಬುದು ರಾಷ್ಟ್ರ ಶಕ್ತಿ ಕೇಂದ್ರದ ಅಪೇಕ್ಷೆ.
ಜೊತೆಗೆ ಮತ್ತಷ್ಟು ಸಮಾಜಮುಖಿ ಯೋಜನೆಗಳಿವೆ. ಈ ವರ್ಷದಲ್ಲಿ ಕಾರ್ಯಗತಗೊಳ್ಳಬೇಕಾದ ಪಟ್ಟಿ ಸಿದ್ಧವಿದೆ. ಕಾಲಕ್ರಮದಲ್ಲಿ ಎಲ್ಲವೂ ಸಾಧ್ಯವಾಗಬಹುದು.
ಖುಷಿಯ ವಿಷಯವೆಂದರೆ, ಜಾಗೋ ಭಾರತ್ ಆಶಯಗಳಿಗೆ ಯುವಕರ ಸ್ಪಂದನೆ. ಅದು ಉನ್ಮತ್ತ ಆರಾಧನೆಯಲ್ಲ. ಅಲ್ಲಿ ತೂಗಿ ನೋಡುವ ವೈಚಾರಿಕತೆಯಿದೆ. ಹಾಗಿಲ್ಲದೆ ಜಾತಿ-ಪಂಥ-ಭಾಷೆ ಭೇದವಿಲ್ಲದೆ ಜನರು ಜಾಗೋಭಾರತ್ ಗೆ ಒಲಿಯುತ್ತಿರಲಿಲ್ಲ. ಗೆಳೆಯರೊಬ್ಬರು ಕೇಳಿದ್ದರು, ‘ನೀವು ಜಾಗೋ ಭಾರತ್ ಮಾಡ್ತೀರಿ, ಜಾಗೋ ಮುಸ್ಲಿಮ್, ಜಾಗೋ ದಲಿತ್ ಎಲ್ಲ ಯಾಕೆ ಮಾಡಲ್ಲ’ ಅಂತ! ನಾನು ಹೇಳಿದೆ, ‘ನಮ್ಮ ಭಾರತದಲ್ಲಿ ದಲಿತರೂ ಇದ್ದಾರೆ, ಮುಸ್ಲಿಮರೂ ಇದ್ದಾರೆ. ನಾವು ಸೌಹಾರ್ದದ ಹೆಸರಲ್ಲಿ ನಡುವಿನ ಅಂತರವನ್ನು ಎತ್ತೆತ್ತಿ ತೋರಿಸುತ್ತ ಖಾಯಂ ಬಿರುಕಿಗೆ ಆಸ್ಪದ ಕೊಡುವಂಥವರಲ್ಲ’ ಎಂದು. ಸರಿಯಾಗಿದೆ ಅಲ್ಲವೆ?
ಜಾಗೋ ಭಾರತ್ ಆಶಯವೂ ಇದೇ. ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಭಾರತ ಮುನ್ನಡೆಯುತ್ತದೆ. ರಾಷ್ಟ್ರಶಕ್ತಿ ಅಂದರೆ ಈ ಸೀಮೆಯೊಳಗಿನ ಪ್ರತಿಯೊಬ್ಬನ ಶಕ್ತಿ. ಅದನ್ನು ಹಿಡಿದಿಡುವ ಕೇಂದ್ರ ದೇಶಪ್ರೇಮ.
ನಮ್ಮೊಂದಿಗಿರಿ.
ಇರುತ್ತೀರಲ್ಲ?
ಪ್ರೀತಿಯಿಂದ,
ರಾ.ಶ.ಕೇಂದ್ರ ಬಳಗ

ಪ್ರೀತಿಯಿಂದ,ರಾ.ಶ.ಕೇಂದ್ರ ಬಳಗ

ಸಂಸ್ಕೃತಿ ಮತ್ತು ವಿಕೃತಿ…

Posted in ಸಂವಾದ by yuvashakti on ಆಗಷ್ಟ್ 14, 2008
 

ಬೆಳಗಾದರೆ ರಾಷ್ಟ್ರ ಹಬ್ಬ. ತಾಯಿ ಭಾರತಿ ಆಂಗ್ಲರ ದಾಸ್ಯದಿಂದ ಮುಕ್ತಳಾದ ಸಂಸ್ಮರಣೆಯ ಹಬ್ಬ. ಈ ಸಂದರ್ಭದಲ್ಲಿ ಏನದರೂ ಬರೆಯಬೇಕು ಅಂದುಕೊಂಡು, ತುರ್ತಾಗಿ ಎಲ್ಲೋ ಹೋಗಬೇಕಾಗಿ ಬಮ್ದು, ಕೊನೆಗೆ ಭಾರತ ಮಾತೆಯ ಚಿತ್ರವನ್ನಾದರೂ ಹಕಿ ಎರಡು ನುಡಿ- ನಮನ ಬರೆಯೋಣವೆಂದು ನೆಟ್ಟು ಜಾಲಾಡಿದರೆ… ಒಂದಷ್ಟು ಚಿತ್ರಗಳು ಸಿಕ್ಕಿದ್ದು ಹೌದು… ಮನಸ್ಸು ಕಹಿಯಾಗಿದ್ದೂ ಹೌದು.

ಇಲ್ಲಿ ಮೂರು ಚಿತ್ರಗಳನ್ನು ಕೊಡುತ್ತಿದ್ದೇನೆ ನೋಡಿ. ಒಂದು ಅವನೀಂದ್ರ ಠಾಕುರ್ ಅವರು ರಚಿಸಿದ್ದು. ಇನ್ನೊಂದು ಮಕ್ಬೂಲ್ ಫಿದಾ ಹುಸೇನರ ರಚನೆ. ಮತ್ತೊಂದು- ಮೂಲ ಚಿತ್ರಕಾರರ ಹೆಸರು ಗೊತ್ತಿಲ್ಲದ, ಇಂದು ಎಲ್ಲೆಡೆ ಕಂಡು ಬರುವ ಭಾರತ ಮಾತೆಯ ಚಿತ್ರ. ಇಲ್ಲಿ ಎರಡು ಚಿತ್ರಗಳು ಸುಸಂಸ್ಕೃತ ಹಿನ್ನೆಲೆಯದ್ದಾಗಿದ್ದು, ಒಂದು ತನ್ನ ಚಿತ್ರಕಾರನ ಕಲಾವಂತಿಕೆಯ ‘ಔನ್ನತ್ಯ’ವನ್ನು ಸೂಚಿಸುತ್ತದೆ. ಆತ ಭಾರತಮಾತೆಯನ್ನು ಯಾವ ಬಗೆಯಲ್ಲಿ ನೋಡುವವ ಎಂದು ಸಾರುತ್ತದೆ. ಅದು ಯಾವುದು ಅನ್ನೋದನ್ನ ನಾನು ಬಾಯಿ ಬಿಟ್ಟು ಹೇಳಬೇಕಿಲ್ಲ ಅಲ್ಲವೇ?

ಅವನೀಂದ್ರನಾಥ ಠಾಕೂರ್  

ಇರಲಿ. ಕೊಚ್ಚೆಗೆ ಕಲ್ಲೆಸೆಯಲು ಇದು ಕಾಲವಲ್ಲ. ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಆಗಸ್ಟ್ ಹದಿನೇಳರಂದು ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ಯುವ ಸಮಾವೇಶವಿದೆ. ಮುಗಿಸಿಕೊಂಡು ಮತ್ತೆ ಹಾಜರಾಗುತ್ತೇನೆ. ಈ ಬ್ಲಾಗಿಗೆ ಮತ್ತೊಂದು ಕೈ ಬೇಕಿದೆ. ಅದನ್ನೂ ಆದಷ್ಟು ಬೇಗ ಹುಡುಕಿ ತರ್ತೇನೆ!

~

ರಾಷ್ಟ್ರ ಹಬ್ಬಕ್ಕಾಗಿ ನಿಮಗಿದೋ ರಾಷ್ಟ್ರಗಾನ…

ದಯವಿಟ್ಟು ಒಂದೊಮ್ಮೆ ಸಂಪೂರ್ಣ ಓದಿಕೊಳ್ಳಿ. ಭಾರತ ಮಾತೆಯ ವೈಭವವನ್ನು ನೆನೆಯಿರಿ.

~

ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಮ್ ||

ಶುಭ್ರಜ್ಯೊತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ಧ್ರುಮದಲ ಶೊಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೆ
ಕೋಟಿ ಕೋಟಿ  ಭುಜೈರ್ಧೃತ ಖರಕರವಾಲೆ
ಅಬಲಾ ಕೆನೊ ಮಾ ಎತೊ ಬಲೇ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ 
ತ್ವಂ ಹಿ ಪ್ರಾಣಾಃ ಶರೀರೇ
ಭಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಈ ಪ್ರತಿಮಾ ಗಡಿ
ಮಂದಿರೇ ಮಂದಿರೇ ||

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ |
ವಂದೇ ಮಾತರಂ

~ ಬಂಕಿಮ ಚಂದ್ರ ಚಟರ್ಜಿ

ಇಂಥದೊಂದು ಯೋಜನೆಯಿದೆ…

Posted in ಸಂವಾದ by yuvashakti on ಜುಲೈ 8, 2008

ಒಂದಿಡೀ ಗ್ರಂಥ ಹೇಳಬಹುದಾದ ತತ್ತ್ವವನ್ನು ಒಂದು ಚಿಕ್ಕ ಕಥೆ ಅತಿ ಸಮರ್ಥವಾಗಿ ನಿರೂಪಿಸಬಲ್ಲದು. ನಮ್ಮ ಜಾನಪದ ಕಥೆಗಳು, ದೃಷ್ಟಾಂತ ಕಥೆಗಳು ಇದಕ್ಕೆ ಸಾಕ್ಷಿ. ಶ್ರೀ ರಾಮ ಕೃಷ್ಣ ಪರಮಹಂಸರು ಈ ಬಗೆಯ ದೃಷ್ಟಾಂತ ಕಥೆಗಳಿಂದಲೇ ಬಹುತೇಕ ಗೃಹೀ ಭಕ್ತರಿಗೆ ಜೀವನ ಸಾರವನ್ನು ಬೋಧಿಸುತ್ತಿದ್ದರು. ಓಶೋ ಹೇಳುತ್ತಿದ್ದ ಕಥೆಗಳು, ಸೂಫೀ ಸಂತರ, ಝೆನ್ ಪಂಗಡದ ಕಥೆಗಳು ಇವೆಲ್ಲವೂ ಗಹನ ತತ್ತ್ವ ಜ್ಞಾನವನ್ನು ಅತ್ಯಂತ ಸರಳೀಕರಿಸಿ ಹೇಳಬಲ್ಲಂಥವು. ಕೆಲವೇ ಸಾಲುಗಳ ನಿರೂಪಣೆಯಿಂದ ತಿಂಗಳು- ವರ್ಷಗಟ್ಟಲೆ ಚಿಂತನೆಗೆ ಹಚ್ಚಬಲ್ಲಂಥವು.

ನಮ್ಮ ರಾಷ್ಟ್ರದ, ಸಂಸ್ಕೃತಿಯ ಹೆಮ್ಮೆಯ ಕೃತಿಗಳಾದ ರಾಮಾಯಣ, ಮಹಾಭಾರತ, ವೇದ- ಉಪನಿಷತ್ತುಗಳೂ ಕೂಡ ಬೋಧನೆಗೆ ಇದೇ ತಂತ್ರವನ್ನು ಅನುಸರಿಸಿವೆ. ಈ ಮಹತ್ಕೃತಿಗಳಲ್ಲಿ ನಡುನಡುವೆ ಬರುವ ಉಪಮೆಗಳು, ದೃಷ್ಟಾಂತಗಳು ಆ ಇಡಿಯ ಕೃತಿಯ ಒಟ್ಟಾರೆ ಆಶಯವನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ವಿಶ್ವಾದ್ಯಂತ ಭೋರ್ಗರೆಯುತ್ತಿರುವ ಕಥಾಸಾಗರವನ್ನು ತಂದಿಲ್ಲಿ ಹರಿಸುವುದು ಸಾಧ್ಯವಾಗದ ಕೆಲಸ… ಸಾಧ್ಯವೇ ಆಗದ ಕೆಲಸ! ಆದರೆ ಬೊಗಸೆಯಲ್ಲಿ ಸಿಕ್ಕಷ್ಟನ್ನು ನಿಮಗೆ ನೀಡುವ ಪ್ರಾಮಾಣಿಕ ಯತ್ನ ನಾನು ಮಾಡುತ್ತೇನೆ. ಹೀಗೆ ಕಥೆಗಳನ್ನೆಲ್ಲ ಒಟ್ಟು ಮಾಡಬೇಕೆನ್ನುವ ಸ್ಫೂರ್ತಿ ದೊರಕಿದ್ದು ತೆಲುಗಿನ (ಇಂಗ್ಲೀಶ್ ಬ್ಲಾಗ್) ಮಾರಲ್ ಸ್ಟೋರೀಸ್ ಬ್ಲಾಗಿನಿಂದ. ಆದರೆ ಅಲ್ಲಿ ಕೇವಲ ಭಾರತದ, ಭಾರತೀಯರ ಕಥೆಗಳು ಮಾತ್ರವೇ ಇದ್ದು, ನಾನು ಆ ಮಿತಿಯನ್ನು ದಾಟಿ ಇತರ ದೇಶ- ಭಾಷೆ- ಸಂಸ್ಕೃತಿಗಳತ್ತಲೂ ಕೈಚಾಚಬೇಕು ಅಂದುಕೊಂಡಿದ್ದೇನೆ.

ನನ್ನ ಮುಂದಿನ ಯೋಜನೆಗಳೇನೋ ದೊಡ್ಡದೊಡ್ಡದಿವೆ. ಓದಿನ ಕುತೂಹಲಕ್ಕೆ ಕಥೆಗಳು, ರಾಷ್ಟ್ರವೀರರ- ಮಹಾತ್ಮರ ಸಂಗತಿಗಳು, ಮಾಹಿತಿಗಳು… ಹೀಗೆ ಎಲ್ಲವನ್ನೂ ಒಳಗೊಂಡು ಅಚ್ಚುಕಟ್ಟಾಗಿ ಈ ಬ್ಲಾಗನ್ನು ನಡೆಸಿಕೊಂಡುಹೋಗಬೇಕೆಂದಿದ್ದೇನೆ. ಮತ್ತು, ಇವೆಲ್ಲವನ್ನೂ ನಾನು ‘ರಾಷ್ಟ್ರ ಶಕ್ತಿ ಕೇಂದ್ರ’ದ ಯೋಜನೆಗಳ ಒಂದು ಭಾಗವಾಗಿ ಮಾಡುತ್ತೇನೆ. ಈ ಎಲ್ಲ ಕಥೆ- ಮಾಹಿತಿಗಳನ್ನು ಕಲೆ ಹಾಕಲು ಸಾಕಷ್ಟು ಶ್ರಮ- ಓದು- ಪ್ರಯತ್ನಗಳನ್ನು ಹಾಕಿರುವುದರಿಂದ, ಮತ್ತು ಚಕ್ರವರ್ತಿಯವರ ಭಾಷಣ- ಬರಹಗಳು ಪುಸ್ತಕ ರೂಪದಲ್ಲಿ ಬರುತ್ತಿರುವುದರಿಂದ ಲೇಖನಗಳಿಗೆ ಕಾಪಿ ರೈಟ್ ಇದ್ದು, ಯಾರೇ ಆಗಲಿ ಅದನ್ನು ಬಳಸಿಕೊಳ್ಳಲು ಪೂರ್ವಾನುಮತಿ ಪಡೆಯಬೇಕಾಗುತ್ತದೆ. (ಲಿಂಕ್ ಕೊಡಲು ಅಲ್ಲ, ಲೇಖನ ಬಳಕೆಗೆ ಮಾತ್ರ)

ಧನ್ಯವಾದ.