ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗುವುದು ಹೇಗೆ?
“ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗುವುದು ಹೇಗೆ?” ಎಂದು ಬಹಳಷ್ಟು ಜನ ಪ್ರಶ್ನಿಸುತ್ತಲೇ ಇದ್ದಾರೆ. ನಾವು ಕೂಡ ಕೇಂದ್ರದ ಹೊಸ ಶಾಖೆಗಳನ್ನು ಆರ್ಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. 2009ರ ಜನವರಿ 12ರಂದು ( ಅಂದು ‘ಯುವ ದಿನ’) ಕೇಂದ್ರದ ಚಟುವಟಿಕೆಗಳನ್ನು ವಿಸ್ತೃತಗೊಳಿಸಿ ಹೆಚ್ಚು ಜನರನ್ನು ತಲುಪಬೇಕೆನ್ನುವ ಯೋಜನೆ ಇದೆ. ಆ ವೇಳೆಗೆ ಸದಸ್ಯರ ಬಲವೂ ಹೆಚ್ಚುವ ನಿರೀಕ್ಷೆ ಇದೆ.
ರಾಷ್ಟ್ರ ಶಕ್ತಿ ಕೇಂದ್ರದ ಸದಸ್ಯರಾಗಬಯಸುವವರು ದಯವಿಟ್ಟು ತಮ್ಮ ಓದು, ಆಸಕ್ತಿ, ಕಳಕಳಿಗಳ ಕಿರು ವಿವರವನ್ನು ನಮಗೆ ರವಾನಿಸಬೇಕಾಗಿ ವಿನಂತಿ. ರಾಷ್ಟ್ರದ ಪ್ರಗತಿಗೆ ನೀವೇನು ಕೊಡುಗೆ ನೀಡಬಲ್ಲಿರಿ? ಈ ಬಗ್ಗೆ ನಿಮಗೆ ನಿಮ್ಮದೇ ಆದ ಕಲ್ಪನೆಗಳಿವೆಯೇ? ಇದ್ದರೆ, ಅದರ ಸ್ವರೂಪವೇನು? ಈ ಕುರಿತೂ ಒಂದೆರಡು ಸಾಲು ಬರೆದು ಹಾಕಿದರೆ ಚೆನ್ನ.
ಮತ್ತೊಂದು ಮಾತು… ರಾಷ್ಟ್ರ ಶಕ್ತಿ ಕೇಂದ್ರ, ರಾಷ್ಟ್ರದ ಅಡಿಪಾಯ ಭದ್ರಪಡಿಸಬೇಕೆಂಬ ಆಶಯದಿಂದ ರೂಪಿತವಾದ ಸಂಘಟನೆ. ಇಲ್ಲಿ ಎಲ್ಲರೂ ಸದಸ್ಯರು, ಪ್ರತಿಯೊಬ್ಬರೂ ಕಾರ್ಯಕರ್ತರೇ. ಇಲ್ಲಿ ಮಾತು, ಮಾತಿನ ಜೊತೆಜೊತೆಗೆ ಕೃತಿ- ಎರಡಕ್ಕೂ ಸಮಾನಾವಕಾಶವಿದೆ. ಮಾತಿನ ಮೂಲಕ ಕೃತಿಗೆ ಪ್ರೇರೇಪಿಸುವುದು, ಸ್ವತಃ ಕೆಲಸದಲ್ಲಿ ತೊಡಗಿ ಮಾದರಿಯಾಗುವುದು ನಮ್ಮ ಉದ್ದೇಶ.
ನಿಮ್ಮ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ.
Please mail to: rsk_ys@in.com
Sharanu is interested in joining team