ರಾಷ್ಟ್ರ ಶಕ್ತಿ ಕೇಂದ್ರ

ಒನ್ ಮ್ಯಾನ್ ಆರ್ಮಿ- ಗಾಂಧಿ!

Posted in ಚಕ್ರವರ್ತಿ ಅಂಕಣ by yuvashakti on ಅಕ್ಟೋಬರ್ 1, 2008

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಾಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.

ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”

 ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!

ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.

ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.

ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.

ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!

ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು! ಭಾರತದ ನೈಜ ತತ್ತ್ವವನ್ನು ಬಿಂಬಿಸಿದವರು ಗಾಂಧಿ. ನೂರೊಂದು ಅಸಹನೆಗಳಲ್ಲಿ ಕುದಿಯುತ್ತಿರುವ ಭಾರತಕ್ಕೆ ಇಂದು ಗಾಂಧಿಯವರಲ್ಲದೆ ಮತ್ಯಾರು ಸೂಕ್ತ ಮದ್ದಾಗಬಲ್ಲರು ಹೇಳಿ?

Advertisements

3 Responses

Subscribe to comments with RSS.

 1. ರಾಕೇಶ್ ಶೆಟ್ಟಿ said, on ಅಕ್ಟೋಬರ್ 7, 2008 at 6:33 ಫೂರ್ವಾಹ್ನ

  ಚಕ್ರವರ್ತಿಯವರೆ,
  ಖಂಡಿತ ಗಾಂಧೀಜಿಯವರು One Man Army ಎಂಬುದು ಸತ್ಯ . ಅದಕ್ಕೆ ಅಲ್ಲವೇ ಅವರನ್ನು ನಾವು ‘ಮಹಾತ್ಮ’ ಅಂತ ಹೇಳುವುದು. ಆದರೆ ಗಾಂಧೀಜಿಯವರ ಬಗ್ಗೆ ನನಗೆ ಕೆಲವು ವಿಷಯಗಳಲ್ಲಿ ಗೊಂದಲಗಳಿವೆ. ಅದಕ್ಕೆ ದಯವಿಟ್ಟು ನಿಮ್ಮ ಪ್ರತಿಕ್ರಿಯೆ ನೀಡುವಿರಾ….
  ೧.ನೀವೇ ಹೇಳಿದ ಹಾಗೆ ‘ಸುಭಾಷ್’ ಹಾಗು ‘ಗಾಂಧೀಜಿ’ ಯವರದು ತಂದೆ ಮಕ್ಕಳ ಸಂಬಂದ, ಹಾಗಿದ್ದರೆ , ಸುಭಾಷರನ್ನು ಕಾಂಗ್ರೆಸ್ನಿಂದ ಹೊರ ಹೋಗುವಂತೆ ಮಾಡಿದ್ದೇಕೆ?
  ೨. ಗಾಂಧೀಜಿಯವರ ಮಾತಿಗೆ ದೇಶವೇ ಎದ್ದು ನಿಂತರೆ, ಸಮರ ಸೇನಾನಿ ಸುಭಾಷರ ಮಾತಿಗೆ ದೇಶ ಏನೇ ಮಾಡಲು ತಯಾರಾಗುತ್ತಿತ್ತು . ಗಾಂಧೀಜಿಯವರಿಗೆ ಸುಭಾಷರ ಜನಪ್ರಿಯತೆ ಹಿಡಿಸಲಿಲ್ಲವೆ.
  ೩.ಇನ್ನು ಮಹಾನ್ ಕ್ರಾಂತಿಕಾರಿ ‘ಭಗತ್ ಸಿಂಗ್’ರನ್ನು ಗಾಂಧಿಜಿಯವರು ಮನಸ್ಸು ಮಾಡಿದ್ದರೆ ಉಳಿಸಬಹುದಿತ್ತು ಎಂಬ ಮಾತಿದೆ, ಇದನ್ನ ಗಾಂಧಿಜಿಯವರು ಏಕೆ ಮಾಡಲಿಲ್ಲ?
  ೪. ‘ಸಮರ ಸೇನಾನಿ’ ಸುಭಾಷರ ಸಾವಿನ ಬಗ್ಗೆ ಈಗಲೂ ಯಾವುದೋ ‘ರಹಸ್ಯ’ವಿದೆ, ಅವರ ಮರನವಾಗಿದ್ದು ೧೯೪೨ರಲ್ಲಿ ಅಂತ ಇತಿಹಾಸ ಹೇಳುತ್ತದೆ, ಅವರ ಸಾವಿನ ನಂತರದ ೬ ವರ್ಷದ ನಂತರ , ಗಾಂಧೀಜಿಯವರ ಮರಣವಾಯಿತು. ಗಾಂಧೀಜಿಯವರಿಗೆ ‘ನೇತಾಜಿಯವರ’ ಸಾವಿನ ಬಗ್ಗೆ ಇದ್ದ ರಹಸ್ಯ ಬೇಧಿಸುವುದು ಯಾವುದೇ ದೊಡ್ಡ ವಿಷಯವಾಗಿರಲಿಲ್ಲ ,ಆದರು ಅದನ್ನು ಏಕೆ ಮಾಡಲಿಲ್ಲ ?
  ೫. ಇನ್ನು ಸ್ವತಂತ್ರ ಬಂದ ನಂತರದ ಮಾತು , ಇಡಿ ಕಾಂಗ್ರೆಸ್ ‘ಸರ್ದಾರ್ ವಲ್ಲಬಾಯ್ ಪಟೇಲ್’ರನ್ನು ‘ಪ್ರಧಾನಿ’ ಅಭ್ಯರ್ಥಿಯನ್ನಾಗಿ ಮಾಡಿದರು , ಗಾಂಧಿಜಿಯವರು ‘ನೆಹರು’ ಅಂತವರನ್ನು ಏಕೆ ಪ್ರಧಾನಿ ಮಾಡುವಂತೆ ರಚ್ಚೆ ಹಿಡಿದು ಕುಳಿತಿದ್ದರು?
  ೬.ಇದೆ ನೆಹುರುರವರು ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ಬರೆದ ಪತ್ರದಲ್ಲಿ ‘ಭಾರತ ವಿಭಜನೆ’ಯಾಗುವವರೆಗೂ ‘ಸುಭಾಷರನ್ನು’ ಭಾರತಕ್ಕೆ ಬರಲು ಬಿಡಬೇಡಿ ಎಂದಿದ್ದರು ಎಂಬ ಮಾತಿದೆ , ಹಾಗೂ ‘ಸುಭಾಷರ’ “ಇಂಡಿಯನ್ ನ್ಯಾಷನಲ್ ಆರ್ಮಿ’ ಬ್ರಿಟಿಷರ ವಿರುದ್ದ ಹೊರಡುವಾಗ , ‘ನೆಹುರು’ರವರು ‘ಸುಭಾಷರ ಸೈನ್ಯ ಭಾರತಕ್ಕೆ ಬಂದರೆ ನಾನೇ ಅವರ ವಿರುದ್ದ ‘ಕತ್ತಿ ಹಿಡಿದು ಹೊರಡುವೆ’ ಎಂಬ ಹೇಳಿಕೆ ಕೊಡುತ್ತಿದ್ದರು.ಇದೆಲ್ಲ ‘ಮಹಾತ್ಮರಿಗೆ ‘ ತಿಳಿದಿರಲಿಲ್ಲವೇ?
  ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ, ಇದನ್ನು ಬರೆಯುವಾಗ ನಾನು ಯಾವುದೇ ರೀತಿಯ ಪೂರ್ವಗ್ರಹ ಪೀಡಿತನಾಗಿ ಬರೆಯುತ್ತಿಲ್ಲ. ಗಾಂಧಿಜಿಯವರು ಯಾವಾಗಲು ‘ಮಹಾತ್ಮ’ರೆ . ಆದರೆ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಅವರ ಮೇಲಿನ ಪ್ರೀತಿ ಇನ್ನು ಹೆಚ್ಚುತ್ತದೆ.

  ಜೈ ಹಿಂದ್,
  ರಾಕೇಶ್ ಶೆಟ್ಟಿ

 2. ರಾಕೇಶ್ ಶೆಟ್ಟಿ said, on ಅಕ್ಟೋಬರ್ 7, 2008 at 8:49 ಫೂರ್ವಾಹ್ನ

  ಚಕ್ರವರ್ತಿಯವರೆ,
  ಖಂಡಿತ ಗಾಂಧೀಜಿಯವರು One Man Army ಎಂಬುದು ಸತ್ಯ . ಅದಕ್ಕೆ ಅಲ್ಲವೇ ಅವರನ್ನು ನಾವು ‘ಮಹಾತ್ಮ’ ಅಂತ ಹೇಳುವುದು. ಆದರೆ ಗಾಂಧೀಜಿಯವರ ಬಗ್ಗೆ ನನಗೆ ಕೆಲವು ವಿಷಯಗಳಲ್ಲಿ ಗೊಂದಲಗಳಿವೆ. ಅದಕ್ಕೆ ದಯವಿಟ್ಟು ನಿಮ್ಮ ಪ್ರತಿಕ್ರಿಯೆ ನೀಡುವಿರಾ….
  ೧.ನೀವೇ ಹೇಳಿದ ಹಾಗೆ ‘ಸುಭಾಷ್’ ಹಾಗು ‘ಗಾಂಧೀಜಿ’ ಯವರದು ತಂದೆ ಮಕ್ಕಳ ಸಂಬಂದ, ಹಾಗಿದ್ದರೆ , ಸುಭಾಷರನ್ನು ಕಾಂಗ್ರೆಸ್ನಿಂದ ಹೊರ ಹೋಗುವಂತೆ ಮಾಡಿದ್ದೇಕೆ?
  ೨. ಗಾಂಧೀಜಿಯವರ ಮಾತಿಗೆ ದೇಶವೇ ಎದ್ದು ನಿಂತರೆ, ಸಮರ ಸೇನಾನಿ ಸುಭಾಷರ ಮಾತಿಗೆ ದೇಶ ಏನೇ ಮಾಡಲು ತಯಾರಾಗುತ್ತಿತ್ತು . ಗಾಂಧೀಜಿಯವರಿಗೆ ಸುಭಾಷರ ಜನಪ್ರಿಯತೆ ಹಿಡಿಸಲಿಲ್ಲವೆ.
  ೩.ಇನ್ನು ಮಹಾನ್ ಕ್ರಾಂತಿಕಾರಿ ‘ಭಗತ್ ಸಿಂಗ್’ರನ್ನು ಗಾಂಧಿಜಿಯವರು ಮನಸ್ಸು ಮಾಡಿದ್ದರೆ ಉಳಿಸಬಹುದಿತ್ತು ಎಂಬ ಮಾತಿದೆ, ಇದನ್ನ ಗಾಂಧಿಜಿಯವರು ಏಕೆ ಮಾಡಲಿಲ್ಲ?
  ೪. ‘ಸಮರ ಸೇನಾನಿ’ ಸುಭಾಷರ ಸಾವಿನ ಬಗ್ಗೆ ಈಗಲೂ ಯಾವುದೋ ‘ರಹಸ್ಯ’ವಿದೆ, ಅವರ ಮರನವಾಗಿದ್ದು ೧೯೪೨ರಲ್ಲಿ ಅಂತ ಇತಿಹಾಸ ಹೇಳುತ್ತದೆ, ಅವರ ಸಾವಿನ ನಂತರದ ೬ ವರ್ಷದ ನಂತರ , ಗಾಂಧೀಜಿಯವರ ಮರಣವಾಯಿತು. ಗಾಂಧೀಜಿಯವರಿಗೆ ‘ನೇತಾಜಿಯವರ’ ಸಾವಿನ ಬಗ್ಗೆ ಇದ್ದ ರಹಸ್ಯ ಬೇಧಿಸುವುದು ಯಾವುದೇ ದೊಡ್ಡ ವಿಷಯವಾಗಿರಲಿಲ್ಲ ,ಆದರು ಅದನ್ನು ಏಕೆ ಮಾಡಲಿಲ್ಲ ?
  ೫. ಇನ್ನು ಸ್ವತಂತ್ರ ಬಂದ ನಂತರದ ಮಾತು , ಇಡಿ ಕಾಂಗ್ರೆಸ್ ‘ಸರ್ದಾರ್ ವಲ್ಲಬಾಯ್ ಪಟೇಲ್’ರನ್ನು ‘ಪ್ರಧಾನಿ’ ಅಭ್ಯರ್ಥಿಯನ್ನಾಗಿ ಮಾಡಿದರು , ಗಾಂಧಿಜಿಯವರು ‘ನೆಹರು’ ಅಂತವರನ್ನು ಏಕೆ ಪ್ರಧಾನಿ ಮಾಡುವಂತೆ ರಚ್ಚೆ ಹಿಡಿದು ಕುಳಿತಿದ್ದರು?
  ೬.ಇದೆ ನೆಹುರುರವರು ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ಬರೆದ ಪತ್ರದಲ್ಲಿ ‘ಭಾರತ ವಿಭಜನೆ’ಯಾಗುವವರೆಗೂ ‘ಸುಭಾಷರನ್ನು’ ಭಾರತಕ್ಕೆ ಬರಲು ಬಿಡಬೇಡಿ ಎಂದಿದ್ದರು ಎಂಬ ಮಾತಿದೆ , ಹಾಗೂ ‘ಸುಭಾಷರ’ “ಇಂಡಿಯನ್ ನ್ಯಾಷನಲ್ ಆರ್ಮಿ’ ಬ್ರಿಟಿಷರ ವಿರುದ್ದ ಹೊರಡುವಾಗ , ‘ನೆಹುರು’ರವರು ‘ಸುಭಾಷರ ಸೈನ್ಯ ಭಾರತಕ್ಕೆ ಬಂದರೆ ನಾನೇ ಅವರ ವಿರುದ್ದ ‘ಕತ್ತಿ ಹಿಡಿದು ಹೋರಾಡುವೆ ’ ಎಂಬ ಹೇಳಿಕೆ ಕೊಡುತ್ತಿದ್ದರು.ಇದೆಲ್ಲ ‘ಮಹಾತ್ಮರಿಗೆ ‘ ತಿಳಿದಿರಲಿಲ್ಲವೇ?
  ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ, ಇದನ್ನು ಬರೆಯುವಾಗ ನಾನು ಯಾವುದೇ ರೀತಿಯ ಪೂರ್ವಗ್ರಹ ಪೀಡಿತನಾಗಿ ಬರೆಯುತ್ತಿಲ್ಲ. ಗಾಂಧಿಜಿಯವರು ಯಾವಾಗಲು ‘ಮಹಾತ್ಮ’ರೆ . ಆದರೆ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಅವರ ಮೇಲಿನ ಪ್ರೀತಿ ಇನ್ನು ಹೆಚ್ಚುತ್ತದೆ.

  ಜೈ ಹಿಂದ್,
  ರಾಕೇಶ್ ಶೆಟ್ಟಿ

 3. Naveen said, on ಅಕ್ಟೋಬರ್ 16, 2008 at 7:01 ಫೂರ್ವಾಹ್ನ

  Ella Sadasyarigu Nanna Namaste,

  I am Naveen Kumar, Working as a lecturer at B.N.M.I.T. I would like be a member of YuvaShakti Kendra. And want to accomplish my responsibility as a citizen of this Country.
  Kind plz provide me the information to join..

  Vande Matharam


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: